ಜಲಿಯನ್ ವಾಲಾಬಾಗ್ ಹತ್ಯಾಕಾಂಡ. ಭಾರತೀಯರ ರಕ್ತದ ಕಣಕಣದಲ್ಲಿ ಸ್ವಾತಂತ್ರ್ಯದ ಕಿಚ್ಚನ್ನು ಹತ್ತಿಸಿದ್ದ ಘಟನೆಯದು. 1913 ರ ಗದಾರ್ ಚಳವಳಿ ಮತ್ತು 1914 ರ ಘಟನೆ ಪಂಜಾಬ್ ಜನರಲ್ಲಿ ಕ್ರಾಂತಿಯ ಅಲೆ ಎಬ್ಬಿಸಿತು.
ಅದು 1914 ರ 1ನೇ ಮಹಾಯುದ್ಧದ ಕಾಲ. ಬ್ರಿಟಿಷ್ ಸೇನೆಯಲ್ಲಿ 1 ಲಕ್ಷ 95 ಸಾವಿರ ಭಾರತೀಯ ಸೈನಿಕರಿದ್ದರು. 1ಲಕ್ಷ 10 ಸಾವಿರ ಮಂದಿ ಪಂಜಾಬಿನವರಾಗಿದ್ದರು. ಅವರದು ಸಿಂಹಪಾಲು. ಈ ಸೈನಿಕರು ದಂಗೆ ಎದ್ದರೆ ಅವರನ್ನು ನಿಯಂತ್ರಿಸುವುದು ಕಷ್ಟ ಎಂದರಿತ ಬ್ರಿಟಿಷರು, ಅವರನ್ನು ಕಂಡರೆ ಹೆದರುತ್ತಿದ್ದರು. ಅವರನ್ನು ತಡೆಯಲು ಸರ್ಕಾರ ಯಾವುದೇ ಕಠಿಣ ಕಾನೂನುಗಳನ್ನು ಹೊಂದಿರಲಿಲ್ಲ.
ಪಂಜಾಬಿನಲ್ಲಿ ಬದಲಾಗುತ್ತಿದ್ದ ಪರಿಸ್ಥಿತಿ, ಬ್ರಿಟಿಷರು ಹೊಸ ಕಾನೂನಿನ ಬಗ್ಗೆ ಯೋಚಿಸುವಂತಯೆ ಮಾಡಿತು. ಈ ಹೊಸ ಕಾನೂನು ರೌಲತ್ ಕಾಯ್ದೆಯ ರೂಪದಲ್ಲಿ ಬರಲು ಸಜ್ಜಾಗುತ್ತಿತ್ತು. ಬ್ರಿಟಿಷ್ ಸರ್ಕಾರ ಅದರ ಬಗ್ಗೆ ಚರ್ಚಿಸಲು ಆರಂಭಿಸಿದಾಗ, ಪ್ರತಿಭಟನೆಗಳು ಆರಂಭವಾದವು. ಸ್ಥಳೀಯ ಪತ್ರಿಕೆಗಳು ಕೂಡ ಈ ಕಾಯ್ದೆಯ ವಿರುದ್ಧದ ಪ್ರತಿಭಟನೆ ರೂಪದಲ್ಲೇ ವರದಿ ಮಾಡಲು ಆರಂಭಿಸಿದವು.
ಸತ್ಯಾಗ್ರಹದ ಮೂಲಕ ಭಾರತದಾದ್ಯಂತ ರೌಲತ್ ಕಾಯ್ದೆಯ ವಿರುದ್ಧ ಪ್ರತಿಭಟನೆಗಳು ನಡೆದವು. ಪಂಜಾಬ್ನ ಹಲವು ಭಾಗಗಳಲ್ಲಿ ಧರಣಿ ಆರಂಭವಾಯಿತು. ಅಮೃತಸರದಲ್ಲಿಯೂ ನಿಗದಿತ ಪ್ರತಿಭಟನೆಗಳು ನಡೆಯುತ್ತಿದ್ದವು.
ಇಬ್ಬರು ಹಿರಿಯ ನಾಯಕರ ಬಂಧನ ಅಮೃತಸರದಲ್ಲಿ ಉದ್ವಿಗ್ನತೆಗೆ ಕಾರಣವಾಯಿತು. ಕತ್ರಾ ಜಯಮಲ್ ಸಿಂಗ್, ಹಾಲ್ ಬಜಾರ್ ಮತ್ತು ಉಚಾ ಪುಲ್ ಪ್ರದೇಶದಲ್ಲಿ 20,000 ಕ್ಕೂ ಹೆಚ್ಚು ಜನರು ಪ್ರತಿಭಟನೆ ನಡೆಸಿದರು. ಒಂದು ಅಥವಾ ಎರಡು ಹಿಂಸಾತ್ಮಕ ಘಟನೆಗಳ ನಂತರ, ಪಂಜಾಬ್ ಲೆಫ್ಟಿನೆಂಟ್ ಗವರ್ನರ್ ಮೈಕೆಲ್ ಒ'ಡಾಯರ್, ಜಲಂಧರ್ ಕಂಟೋನ್ಮೆಂಟ್ ಮಂಡಳಿಯಿಂದ ಸೇನಾಧಿಕಾರಿ ಜನರಲ್ ಆರ್ ಡೈರ್ ಪರಿಸ್ಥಿತಿಯನ್ನು ನಿಭಾಯಿಸುವಂತೆ ಕರೆ ನೀಡಿದರು.
ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಒಂದು ದಿನದ ಮೊದಲು, ಜನರಲ್ ಆರ್ ಡೈರ್ ತನ್ನ ಸಂಪೂರ್ಣ ಸಶಸ್ತ್ರ ಪಡೆಗಳೊಂದಿಗೆ ಅಮೃತಸರದಲ್ಲಿ ಮೆರವಣಿಗೆ ನಡೆಸಿದರು ಮತ್ತು ಕರ್ಫ್ಯೂ ಘೋಷಿಸಿದರು.
ಈ ಮಾಹಿತಿಯ ಕೊರತೆಯಿಂದಾಗಿ, ಜನರು ಜಲಿಯನ್ ವಾಲಾಬಾಗ್‌ನಲ್ಲಿ ಸಭೆಯಲ್ಲಿ ಭಾಗವಹಿಸಲು ಜಮಾಯಿಸಿದರು. ಇದರ ಹೊರತಾಗಿ, ಗೋಬಿಂದಗಢ ಪಶು ಮೇಳದಲ್ಲಿ ಭಾಗವಹಿಸಲು ಬಂದ ವ್ಯಾಪಾರಿಗಳು ಕೂಡ ಅಲ್ಲಿದ್ದರು. ಖುಷ್ಹಾಲ್ ಸಿಂಗ್, ಮೊಹಮ್ಮದ್ ಪೆಹಲ್ವಾನ್ ಮತ್ತು ಮೀರ್ ರಿಯಾಜ್-ಉಲ್-ಹಸನ್ ಬೇಹುಗಾರಿಕೆ ಮಾಡುತ್ತಿದ್ದರು. ಕ್ಷಣ ಕ್ಷಣದ ಮಾಹಿತಿಯನ್ನು ಜನರಲ್ ಡೈರಿಗೆ ರವಾನಿಸುತ್ತಿದ್ದರು.
4:30 ಕ್ಕೆ ನಿಗದಿಯಾಗಿದ್ದ ಸಭೆ ಅಪಾರ ಜನರು ನೆರೆದ ಪರಿಣಾಮ ಮಧ್ಯಾಹ್ನ 3 ಗಂಟೆಗೆ ಆರಂಭವಾಯಿತು. 5:15 ಕ್ಕೆ ಜನರಲ್ ಡೈರ್ 25 ಸೈನಿಕರ 4 ತುಕಡಿಗಳೊಂದಿಗೆ ಜಲಿಯನ್ ವಾಲಾಬಾಗ್ ತಲುಪಿದರು. ಗೂರ್ಖಾ ರೆಜಿಮೆಂಟ್ ಮತ್ತು ಅಫ್ಘಾನ್ ರೆಜಿಮೆಂಟ್ನ 50 ಸೈನಿಕರೊಂದಿಗೆ ಜನರಲ್ ಡೈರ್ ಜಲಿಯನ್ ವಾಲಾಬಾಗ್ ಪ್ರವೇಶಿಸಿದರು. ತಕ್ಷಣವೇ ಸಭೆ ಸೇರಿದ್ದವರ ಮೇಲೆ ಗುಂಡಿನ ದಾಳಿ ನಡೆಸಲು ಆದೇಶಿಸಿದರು.
ಗುಂಡಿನ ನಂತರ, ಗಾಯಗೊಂಡವರಿಗೆ ಒಂದು ಹನಿ ನೀರು ಸಿಗಲಿಲ್ಲ. ಸಕಾಲಕ್ಕೆ ನೀರು ಅಥವಾ ವೈದ್ಯಕೀಯ ಸಹಾಯವನ್ನು ಒದಗಿಸಿದ್ದರೆ, ಅನೇಕ ಜೀವಗಳನ್ನು ಉಳಿಸಬಹುದಿತ್ತು.
ಭಾರತೀಯರ ಆಕ್ರೋಶದ ನಂತರ, ಪರಕೀಯರ ಸರ್ಕಾರವು ಸದ್ದಿಲ್ಲದೆ ಬ್ರಿಟನ್‌ಗೆ ಮರಳಿದ ಜನರಲ್ ಡಾಯರ್ ಅನ್ನು ಅಮಾನತುಗೊಳಿಸಬೇಕಾಯಿತು. ಉಧಮ್ ಸಿಂಗ್ ಅವರು ಮಾರ್ಚ್ 13, 1940 ರಂದು ಲಂಡನ್‌ನಲ್ಲಿ ಮೈಕೆಲ್ ಒ'ಡಾಯರ್ ಅವರನ್ನು ಗುಂಡಿಕ್ಕಿ ಸೇಡು ತೀರಿಸಿಕೊಂಡರು.
1961 ರಲ್ಲಿ ಅಗಲಿದ ಆತ್ಮಗಳಿಗೆ ಗೌರವ ಸಲ್ಲಿಸಲು ಭಾರತ ಸರ್ಕಾರವು ಸ್ಮಾರಕವನ್ನು ನಿರ್ಮಿಸಿತು. ಇದನ್ನು ಮಾಜಿ ರಾಷ್ಟ್ರಪತಿ ಡಾ.ರಾಜೇಂದ್ರ ಪ್ರಸಾದ್ ಉದ್ಘಾಟಿಸಿದರು.