ಹೈದರಾಬಾದ್: ದೇಶದಲ್ಲಿ ಮಹಾಮಾರಿ ಕೊರೊನಾ ವೈರಸ್ ಜೋರಾಗಿದ್ದು, ಇದರ ಬೆನ್ನಲ್ಲೇ ಇದೀಗ ಭಾರತಕ್ಕೆ ರಷ್ಯಾದಿಂದ ಸ್ಪುಟ್ನಿಕ್-ವಿ ಕೋವಿಡ್ ಲಸಿಕೆಯ ಮೊದಲ ಬ್ಯಾಚ್ ಆಗಮನವಾಗಿದೆ. ಇದರ ಬಳಕೆಗೆ ಏಪ್ರಿಲ್ 12ರಂದೇ ಡಿಸಿಜಿಐ ಗ್ರೀನ್ ಸಿಗ್ನಲ್ ನೀಡಿದೆ.
ಇಂದು ಬೆಳಗ್ಗೆ ರಷ್ಯಾದಿಂದ ಹೊರಟು ಇದೀಗ ಹೈದರಾಬಾದ್ ಏರ್ಪೋರ್ಟ್ಗೆ ಎರಡು ಲಕ್ಷ ಡೋಸ್ ಹೊತ್ತ ವಿಮಾನ ಆಗಮನವಾಗಿದೆ. ಮೇ ಎರಡನೇ ಹಾಗೂ ಕೊನೆಯ ವಾರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಲಸಿಕೆಗಳು ಆಗಮನವಾಗುವ ಸಾಧ್ಯತೆ ಇದೆ. ದೇಶಾದ್ಯಂತ ಇಂದಿನಿಂದ ಮೂರನೇ ಹಂತದ ಕೋವಿಡ್ ಅಭಿಯಾನಕ್ಕೆ ಚಾಲನೆ ಸಿಕ್ಕಿದ್ದು, ಇದರ ಮಧ್ಯೆ ರಷ್ಯಾದಲ್ಲಿ ಅಭಿವೃದ್ಧಿಗೊಂಡಿರುವ ಸ್ಪುಟ್ನಿಕ್ ಭಾರತಕ್ಕೆ ಬಂದಿದೆ.
ಇದನ್ನ ಸೆಂಟ್ರಲ್ ಡ್ರಗ್ಸ್ ಲ್ಯಾಬೋರೇಟರಿ ಕಸೂಲಿಗೆ ಹಸ್ತಾಂತರ ಮಾಡಲಾಗುವುದು. ತದನಂತರ ಅನುಮೊದನೆ ಪಡೆದುಕೊಂಡು ಜನರಿಗೆ ಹಸ್ತಾಂತರ ಮಾಡುವ ಸಾಧ್ಯತೆ ಇದೆ.
-
#WATCH The first consignment of Sputnik V vaccines from Russia arrive in Hyderabad pic.twitter.com/PqH3vN6ytg
— ANI (@ANI) May 1, 2021 " class="align-text-top noRightClick twitterSection" data="
">#WATCH The first consignment of Sputnik V vaccines from Russia arrive in Hyderabad pic.twitter.com/PqH3vN6ytg
— ANI (@ANI) May 1, 2021#WATCH The first consignment of Sputnik V vaccines from Russia arrive in Hyderabad pic.twitter.com/PqH3vN6ytg
— ANI (@ANI) May 1, 2021
ಇದೀಗ ದೇಶಿಯ ಲಸಿಕೆಗಳಾದ ಕೋವಿಶೀಲ್ಡ್ ಹಾಗೂ ಕೊವ್ಯಾಕ್ಸಿನ್ ಜತೆಗೆ ಸ್ಪುಟ್ನಿಕ್ ಕೂಡ ಮಹಾಮಾರಿ ವಿರುದ್ಧ ಹೋರಾಡಲಿದೆ. ದೇಶದಲ್ಲಿ ಕೋವಿಡ್ ಸೋಂಕಿನ ವಿರುದ್ಧ ನೀಡಲಾಗುತ್ತಿರುವ 3ನೇ ಲಸಿಕೆ ಇದಾಗಿದ್ದು, ಇದು ಶೇ. 90 ರಷ್ಟು ಪರಿಣಾಮಕಾರಿಯಾಗಿದೆ ಎಂಬ ಮಾಹಿತಿ ಈಗಾಗಲೇ ಲಭ್ಯವಾಗಿದೆ.
ಸ್ಪುಟ್ನಿಕ್ ಲಸಿಕೆ ಗಮಾಲಿಯಾ ನ್ಯಾಷನಲ್ ರಿಸರ್ಚ್ ಇನ್ಸ್ಟಿಟ್ಯೂಟ್ ಆಫ್ ಎಪಿಡೆಮಿಯಾನಾಲೊಜಿ ಅಂಡ್ ಮೈಕ್ರೋಬಯೋಲಜಿ ಸಂಸ್ಥೆಯಲ್ಲಿ ಅಭಿವೃದ್ಧಿಗೊಂಡಿದೆ. ಭಾರತದ ಐದು ಔಷಧ ಕಂಪನಿಗಳು ಒಟ್ಟು 85 ಕೋಟಿ ಡೋಸ್ ಲಸಿಕೆಗೆ ರಷ್ಯಾ ಜತೆ ಒಡಂಬಡಿಕೆ ಮಾಡಿಕೊಂಡಿವೆ.