ತಿರುಪತಿ, ಆಂಧ್ರಪ್ರದೇಶ : ಶ್ರೀವಾರಿ ದರ್ಶನಕ್ಕೆ ಭಕ್ತರ ದಂಡೇ ಹರಿದು ಬರುತ್ತಿದೆ. ತಿರುಪತಿಯಲ್ಲಿ ಸರ್ವದರ್ಶನ ಟೋಕನ್ ನೀಡುವ ಮೂರು ಕೇಂದ್ರಗಳಲ್ಲಿ ಭಕ್ತಾದಿಗಳು ಹೆಚ್ಚಾದ ಕಾರಣ ಉಂಟಾದ ನೂಕುನುಗ್ಗಲಿನಲ್ಲಿ ಮೂವರಿಗೆ ಗಾಯವಾಗಿದೆ. ಆ ಮೂವರನ್ನು ರುಯಾ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.
ಎರಡು ದಿನಗಳ ನಂತರ ಗೋವಿಂದರಾಜಸ್ವಾಮಿ ಸತ್ರ, ಶ್ರೀನಿವಾಸಂ ಮತ್ತು ಭೂದೇವಿ ಕಾಂಪ್ಲೆಕ್ಸ್‌ಗಳಲ್ಲಿ ಸರ್ವದರ್ಶನ ಟೋಕನ್‌ಗಳನ್ನು ನೀಡಲಾಗಿರುವ ಕಾರಣದಿಂದ ನೂಕುನುಗ್ಗಲು ಸಂಭವಿಸಿದೆ ಎನ್ನಲಾಗಿದೆ. ಇದರೊಂದಿಗೆ ಸಣ್ಣ ಮಕ್ಕಳಿಗೆ ಆಹಾರ, ಕುಡಿಯುವ ನೀರಿನಂತಹ ಸೌಲಭ್ಯಗಳಿಲ್ಲದೆ ಸಮಸ್ಯೆಯಾಗುತ್ತಿದೆ ಎಂದು ಭಕ್ತರು ಅಳಲು ತೋಡಿಕೊಂಡಿದ್ದಾರೆ.
ಸರಿಯಾಗಿ ಟೋಕನ್ ನೀಡುತ್ತಿಲ್ಲ. ಕನಿಷ್ಟ ಪಕ್ಷ ಬೆಟ್ಟ ಹತ್ತಲು ಅನುಮತಿ ನೀಡುತ್ತಿಲ್ಲ. ಅನುಮತಿ ನೀಡಿದರೆ, ದೇವರಿಗೆ ಮುಡಿ ಕೊಟ್ಟು ಪ್ರಾರ್ಥನೆ ಸಲ್ಲಿಸುತ್ತೇವೆ. ಹಲವು ವರ್ಷಗಳಿಂದ ತಿರುಪತಿಗೆ ಬರುತ್ತಿದ್ದೇವೆ. ಆದರೆ, ಈಗ ಇರುವ ಪರಿಸ್ಥಿತಿ ಈ ಮೊದಲು ಎಂದೂ ಕಂಡಿರಲಿಲ್ಲ ಎಂದು ಭಕ್ತರೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈಟಿವಿ ಭಾರತಕ್ಕೆ ಟಿಟಿಡಿ ಅಧಿಕಾರಿಗಳ ಪ್ರತಿಕ್ರಿಯೆ : ಶ್ರೀವಾರಿ ಭಕ್ತರ ಸಂಕಷ್ಟವನ್ನು ವರದಿ ಮಾಡುತ್ತಿರುವ ಈಟಿವಿ ಭಾರತಕ್ಕೆ ಟಿಟಿಡಿ ಅಧಿಕಾರಿಗಳು ಪ್ರತಿಕ್ರಿಯೆ ನೀಡಿದ್ದಾರೆ. ದರ್ಶನ ಟೋಕನ್ ಇಲ್ಲದೆಯೇ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇದನ್ನೂ ಓದಿ: 60 ಅಡಿಯ ಕಬ್ಬಿಣದ ಸೇತುವೆ ಕಳ್ಳತನ ಪ್ರಕರಣ.. ಇಂಜಿನಿಯರ್ ಸೇರಿ 8 ಮಂದಿ ಬಂಧನ