ETV Bharat / bharat

ಚುನಾವಣಾ ಪ್ರಚಾರದ ವೇಳೆ ರಥಕ್ಕೆ ವಿದ್ಯುತ್​ ಸ್ಪರ್ಶ; ಅಮಿತ್​ ಶಾ ಅಪಾಯದಿಂದ ಪಾರು - etv bharat kannada

ರಾಜಸ್ಥಾನದಲ್ಲಿ ಚುನಾವಣಾ ಪ್ರಚಾರದ ರಥಕ್ಕೆ ವಿದ್ಯುತ್ ತಂತಿ ತಗುಲಿದ್ದು, ​ಕೇಂದ್ರ ಗೃಹ ಸಚಿವ ಅಮಿತ್​ ಶಾ ಅಪಾಯದಿಂದ ಸ್ವಲ್ಪದರಲ್ಲೇ ಪಾರಾಗಿದ್ದಾರೆ.

The chariot in which Shah was riding touched the electric wire passing over the road
ಚುನಾವಣಾ ಪ್ರಚಾರದ ವೇಳೆ ರಥಕ್ಕೆ ವಿದ್ಯುತ್​ ಸ್ಪರ್ಶ; ಅಮಿತ್​ ಶಾ ಅಪಾಯದಿಂದ ಪಾರು
author img

By ETV Bharat Karnataka Team

Published : Nov 7, 2023, 9:13 PM IST

Updated : Nov 7, 2023, 9:27 PM IST

ನಾಗೌರ್ (ರಾಜಸ್ಥಾನ): ರಾಜಸ್ಥಾನದಲ್ಲಿ ಚುನಾವಣಾ ಪ್ರಚಾರದ ವೇಳೆ ಕೇಂದ್ರ ಗೃಹ ಸಚಿವ ಅಮಿತ್​ ಶಾ ಅವರು ಅಪಾಯದಿಂದ ಸ್ಪಲ್ಪದರಲ್ಲೇ ಪಾರಾಗಿದ್ದಾರೆ. ಪ್ರಚಾರದ ರಥಕ್ಕೆ ವಿದ್ಯುತ್​ ತಂತಿ ತಗುಲಿದ್ದು, ತಕ್ಷಣವೇ ಎಚ್ಚೆತ್ತ ಭದ್ರತಾ ಸಿಬ್ಬಂದಿ ಕಾರು ನಿಲ್ಲಿಸಿ ಸಂಭವಿಸಲಿದ್ದ ಅನಾಹುತವನ್ನು ತಪ್ಪಿಸಿದ್ದಾರೆ.

ರಾಜಸ್ಥಾನದ ನಗೌರ್​ ಜಿಲ್ಲೆಯ ಪರ್ಬತ್​ಸರ್​ನಲ್ಲಿ ಮಂಗಳವಾರ ಬಹುದೊಡ್ಡ ಅಪಾಯ ತಪ್ಪಿದೆ. ನಾಗೌರ್​ನ ಕುಚಮಾನ್ಸಿಟಿ ಮತ್ತು ಮಕ್ರಾನಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ನಂತರ ಅಮಿತ್​ ಶಾ ಅವರು ಪರ್ಬತ್​ಸರ್ ತಲುಪಿದರು. ಇಲ್ಲಿ ರೋಡ್​ ಶೋನಲ್ಲಿ ಭಾಗವಹಿಸುತ್ತಿದ್ದರು. ಈ ವೇಳೆ ಅಮಿತಾ ಶಾ ಸಂಚರಿಸುತ್ತಿದ್ದ ಪ್ರಚಾರದ ರಥವು ಪರ್ಬತ್​ಸರ್ ಪ್ರವೇಶಿಸುವಾಗ ರಸ್ತೆಯ ಮೇಲೆ ಹಾದುಹೋದ ವಿದ್ಯುತ್​ ತಂತಿಯನ್ನು ಸ್ಪರ್ಶಿಸಿತು. ಈ ವೇಳೆ ಕಿಡಿಗಳು ಹೊತ್ತಿಕೊಂಡವು. ಕೂಡಲೇ ಗೃಹ ಸಚಿವರ ರೋಡ್​ ಶೋವನ್ನು ರದ್ದುಗೊಳಿಸಲಾಯಿತು. ಕೂಡಲೇ, ಭದ್ರತಾ ಸಿಬ್ಬಂದಿ ಶಾ ಅವರನ್ನು ಕಾರಿನಲ್ಲಿ ಕೂರಿಸಿ ಅಲ್ಲಿಂದ ತೆರಳಿದರು.

ಇದನ್ನೂ ಓದಿ: ತೆಲಂಗಾಣದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಹಿಂದುಳಿದ ವರ್ಗದ ನಾಯಕ ಮುಖ್ಯಮಂತ್ರಿ: ಅಮಿತ್​ ಶಾ

ಬೈಕ್​ಗೆ ಕೇಂದ್ರ ಸಚಿವರ ಕಾರು ಡಿಕ್ಕಿ: ಮತ್ತೊಂದೆಡೆ, ಇಂದು ಕೇಂದ್ರ ಸಚಿವ ಪ್ರಹ್ಲಾದ್ ಪಟೇಲ್ ಅವರ ಕಾರು ಅಪಘಾತಕ್ಕೀಡಾಗಿದೆ. ಮಧ್ಯಪ್ರದೇಶ ಛಿಂದ್ವಾರದ ಅಮರವಾಡದಿಂದ ರೋಡ್ ಶೋ ಮುಗಿಸಿ ಹಿಂತಿರುಗುತ್ತಿದ್ದ ವೇಳೆ ಸಿಂಗೋಡಿ ಬೈಪಾಸ್‌ನ ಖಾಕ್ರಾ ಚೌರೈ ಬಳಿ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ಘಟನೆಯಲ್ಲಿ ಕೇಂದ್ರ ಸಚಿವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಜತೆಗೆ ಇನ್ನೂ ನಾಲ್ಕೈದು ಮಂದಿ ಗಾಯಗೊಂಡಿದ್ದು, ಬೈಕ್​​ ಸವಾರ ಸಾವನ್ನಪ್ಪಿದ್ದಾನೆ ಎಂದು ವರದಿಯಾಗಿದೆ.

ಸವಾರ ಸಾವು, ಮಕ್ಕಳಿಗೆ ಗಂಭೀರ ಗಾಯ: ಮರವಾಡದಲ್ಲಿ ಶಾಲೆಯಿಂದ ವಾಹನ ಸವಾರ ತನ್ನ ಮಕ್ಕಳನ್ನು ಕರೆದುಕೊಂಡ ದ್ವಿಚಕ್ರವಾಹನದಲ್ಲಿ ತೆರಳುತ್ತಿದ್ದರು. ಈ ವೇಳೆ, ಬೈಪಾಸ್​ ರಸ್ತೆಯಲ್ಲಿ ದಿಢೀರ್​ ಆಗಿ ದ್ವಿಚಕ್ರ ವಾಹನ ಅಡ್ಡ ಬಂದ ಪರಿಣಾಮ ವಾಹನಕ್ಕೆ ಸಚಿವರ ಕಾರು ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್​ ಸವಾರ ಸಾವನ್ನಪ್ಪಿದ್ದು, ಆತನ ಇಬ್ಬರು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ.

ಅಲ್ಲದೇ ಸಚಿವರ ಕಾರು ರಸ್ತೆಯಿಂದ ಕೆಳಗಿಳಿದಿದ್ದು, ಕಾರಿನಲ್ಲಿದ್ದ ಏರ್​ಬ್ಯಾಗ್​ ಓಪನ್​ ಆಗಿದ್ದರಿಂದ ಸಣ್ಣಪುಟ್ಟ ಗಾಯಗಳಾಗಿದ್ದು, ಸಚಿವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಎಎಸ್ಪಿ ಅವಧೇಶ್​ ಪ್ರತಾಪ್​ ಸಿಂಗ್ ತಿಳಿಸಿದ್ದಾರೆ.​ ಜತೆಗೆ ಸಚಿವರ ಮಾಧ್ಯಮ ಸಲಹೆಗಾರ ನಿತಿನ್ ತ್ರಿಪಾಠಿ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನೂ ಓದಿ: 'ಛತ್ತೀಸ್‌ಗಡದಲ್ಲಿ ಮೋದಿಜೀ ಗ್ಯಾರಂಟಿ': ₹ 500ಕ್ಕೆ ಗ್ಯಾಸ್ ಸಿಲಿಂಡರ್, ವಿವಾಹಿತ ಮಹಿಳೆಯರಿಗೆ ₹ 12,000!

Last Updated : Nov 7, 2023, 9:27 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.