ಪುದುಕೊಟ್ಟೈ (ತಮಿಳುನಾಡು): ಶ್ರೀಲಂಕಾದ ಕಡಲ ತೀರದಲ್ಲಿ ಗುರುವಾರ ಪತ್ತೆಯಾದ ನಾಲ್ವರು ಮೀನುಗಾರರ ಮೃತದೇಹವನ್ನು ತಮಿಳುನಾಡಿನ ರಾಮನಾಥಪುರಂ ಬಳಿಯ ಅವರ ಸ್ವಗ್ರಾಮಕ್ಕೆ ತರಲಾಗಿದೆ.
ಈ ನಾಲ್ವರು ಮೀನುಗಾರಿಕೆಯಲ್ಲಿ ತೊಡಗಿದ್ದಾಗ ಶ್ರೀಲಂಕಾ ಸೇನೆ ದಾಳಿ ಮಾಡಿದ್ದರಿಂದ ಈ ದುರ್ಘಟನೆ ನಡೆದಿದೆ ಎಂದು ಹೇಳಲಾಗ್ತಿದೆ. ಮೆಸ್ಸೀಹ್, ನಾಗರಾಜ್, ಸೆಂಥಿಲ್ಕುಮಾರ್ ಮತ್ತು ಸ್ಯಾಮ್ಸನ್ ಮೃತ ಮೀನುಗಾರರು.
ಓದಿ:ಮಹಿಳಾ ಕಮಾಂಡರ್ ನೇತೃತ್ವದಲ್ಲಿ ಈ ಬಾರಿ ರಾಜ್ಪಥ್ನಲ್ಲಿ ಶಿಲ್ಕಾ ಶಸ್ತ್ರಾಸ್ತ್ರ ಪ್ರದರ್ಶನ
ಇವರ ಮರಣೋತ್ತರ ಪರೀಕ್ಷೆಯನ್ನು ಶ್ರೀಲಂಕಾದಲ್ಲೇ ನಡೆಸಿ, ಜನವರಿ 23 ರಂದು ಭಾರತೀಯ ನೌಕಾಪಡೆಗೆ ಮೃತದೇಹಗಳನ್ನು ಹಸ್ತಾಂತರಿಸಲಾಯಿತು. ಭಾರತೀಯ ನೌಕಾಪಡೆ ಮೀನುಗಾರರ ಶವಗಳನ್ನು ಪುದುಕೊಟ್ಟೈ ಜಿಲ್ಲೆಯ ಕೊಟ್ಟಾಯಂಗೆ ತಂದಿದೆ. ನಂತರ ಶವಗಳನ್ನು ಆ್ಯಂಬುಲೆನ್ಸ್ ಮೂಲಕ ರಾಮನಾಥಪುರಕ್ಕೆ ಕೊಂಡೊಯ್ದು ಅವರ ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು.