ETV Bharat / bharat

ದೊಡ್ಡ ಎತ್ತರಕ್ಕೆ ಕೊಂಡೊಯ್ದ ಹವ್ಯಾಸ: ಲಕ್ಷ - ಲಕ್ಷಕ್ಕೆ ಮಾರಾಟವಾಗ್ತಿವೆ ಇವರು ವಿನ್ಯಾಸಗೊಳಿಸಿದ ಬೈಕ್​ಗಳು... - ಲೂಧಿಯಾನದ ಬೈಕ್​ ತಯಾಕರ ಅನುಜ್ ಸೈನಿ

ವಿಶೇಷ ಬೈಕ್​ ವಿನ್ಯಾಸಗಾರ ಲೂಧಿಯಾನದ ಅನುಜ್ ಸೈನಿ ಬಿ-ಫಾರ್ಮಾ ಮುಗಿಸಿದ್ದಾರೆ. ಇವರ ಕುಟುಂಬದಲ್ಲಿ ಪ್ರತಿಯೊಬ್ಬರು ವೈದ್ಯಕೀಯ ವೃತ್ತಿಯಲ್ಲೇ ತೊಡಗಿಸಿಕೊಂಡಿದ್ದಾರೆ. ಆದರೆ, ಇವರಿಗೆ ಮಾತ್ರ ಬೈಕ್​ಗಳ ಮೇಲೆ ತುಂಬಾ ಕ್ರೇಜ್​ ಇದೆ.

Ludhiana Young Anuj Saini
ವಿಶೇಷ ಬೈಕ್​ ವಿನ್ಯಾಸಗಾರ ಅನುಜ್ ಸೈನಿ
author img

By

Published : May 3, 2022, 7:06 PM IST

ಲೂಧಿಯಾನ (ಪಂಜಾಬ್​): ಬೈಕ್‌ಗಳ ಮಾಡಿಫೈ ಮೂಲಕವೇ ಪಂಜಾಬ್​ನ ಲೂಧಿಯಾನದ ಯುವಕ ದೇಶ ಮಾತ್ರವಲ್ಲ ವಿದೇಶದಲ್ಲೂ ಗಮನ ಸೆಳೆದಿದ್ದಾರೆ. ಮರು ವಿನ್ಯಾಸಗೊಳಿಸಿದ ಬೈಕ್​ಗಳನ್ನು ಬಾಲಿವುಡ್​ ನಟರು ಮತ್ತು ಕ್ರಿಕೆಟ್​ ಆಟಗಾರರು ಖರೀದಿಸಿದ್ದು, ಕೆಲ ಬೈಕ್​ಗಳು ದಕ್ಷಿಣ ಭಾರತದ ಸಿನಿಮಾಗಳಲ್ಲೂ ಬಳಕೆಯಾಗಿದೆ.

ಹೌದು, ಅನುಜ್ ಸೈನಿ ಎಂಬ ಯುವಕ ಕಳೆದ 11 ವರ್ಷಗಳಿಂದ ಬೈಕ್ ವಿನ್ಯಾಸದಲ್ಲಿ ತೊಡಗಿಸಿಕೊಂಡಿದ್ದಾರೆ. ಬೈಕ್​ ಮಾಡಿಫೈ ಮಾಡುವುದು ಕೇವಲ ಹವ್ಯಾಸವಾಗಿತ್ತು. ಆದರೆ, ಇದೇ ಈತನನ್ನು ದೊಡ್ಡ ಎತ್ತರಕ್ಕೆ ಕೊಂಡೊಯ್ದಿದೆ. ಅಚ್ಚರಿ ಎಂದರೆ ಇದಕ್ಕೆ ಎಂದು ಪ್ರತ್ಯೇಕವಾದ ತರಬೇತಿ ಪಡೆದಿಲ್ಲ ಮತ್ತು ಈತ ಯಾವುದೇ ಮೆಕ್ಯಾನಿಕಲ್ ಇಂಜಿನಿಯರಿಂಗ್ ಮಾಡಿಲ್ಲ. ಆದರೂ, ಈತ ವಿನ್ಯಾಸಗೊಳಿಸಿದ ಬೈಕ್​​ಗಳು 20ರಿಂದ 25 ಲಕ್ಷ ರೂ.ವರೆಗೂ ಮಾರಾಟವಾಗುತ್ತಿವೆ.

ವಿಶೇಷ ಬೈಕ್​ ವಿನ್ಯಾಸಗಾರ ಅನುಜ್ ಸೈನಿ

ವಿದ್ಯಾರ್ಥಿ ಜೀವನದಿಂದಲೇ ಬೈಕ್​ಗಳ ಬಗ್ಗೆ ಕ್ರೇಜ್​ ಹೊಂದಿದ್ದ ಸೈನಿ 18 ಸಾವಿರ ರೂ.ನಿಂದ ಕೆಲಸ ಆರಂಭಿಸಿದ್ದ. ಸದ್ಯ ಈತನ ಗ್ಯಾರೇಜ್‌ನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಬೈಕ್‌ಗಳಿವೆ. ಇವರೊಂದಿಗೆ 10 ಜನ ಕೆಲಸಗಾರರು ಇದ್ದು, ಪ್ರತಿಯೊಬ್ಬರಿಗೂ ಒಂದೊಂದು ಕೆಲಸವನ್ನು ಒದಗಿಸಿದ್ದಾರೆ. ಗ್ರಾಹಕರ ಬೇಡಿಕೆ ಅನುಸಾರವಾಗಿ ಬೈಕ್​ಗಳನ್ನು ಸಿದ್ಧಪಡಿಸಿ ಕೊಡುತ್ತಾರೆ.

ವಿವಿಧ ಬಗೆ ವಿನ್ಯಾಸಗಳನ್ನು ನಾವೇ ತಯಾರಿಸಿ ಬೈಕ್​ಗಳನ್ನು ಸಿದ್ಧ ಪಡಿಸುತ್ತೇವೆ. ಬಾಲಿವುಡ್​ ನಟರೊಬ್ಬರು 20 ಲಕ್ಷ ರೂ. ಕೊಟ್ಟು ಬೈಕ್ ಖರೀದಿಸಿದ್ದಾರೆ. ಕೆಲ ಸೆಲಬ್ರಿಟಿಗಳೂ ಸಹ ಕೇಳಿ ವಿಶೇಷ ವಿನ್ಯಾಸದ ಬೈಕ್​ಗಳನ್ನು ತಯಾರಿಸಿಕೊಂಡು ಖರೀದಿ ಮಾಡಿದ್ದಾರೆ. ಆದರೆ, ಒಪ್ಪಂದದ ಪ್ರಕಾರ ಅವರುಗಳ ಹೆಸರನ್ನು ಬಹಿರಂಗ ಪಡಿಸಲು ಸಾಧ್ಯವಿಲ್ಲ ಎನ್ನುತ್ತಾರೆ ಅನುಜ್​.

ಇದನ್ನೂ ಓದಿ: ಕಿರಿಯ - ಯುವ ನಾಯಕರು ಕಾಂಗ್ರೆಸ್​​ ತೊರೆಯುತ್ತಿರುವುದೇಕೆ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.