ಹೈದರಾಬಾದ್: ವರ್ಷದ ಮೊದಲ ಸೂರ್ಯ ಗ್ರಹಣ ಪ್ರಕ್ರಿಯೆ ಆರಂಭಗೊಂಡಿದ್ದು, ಭಾರತದ ಈಶಾನ್ಯ ರಾಜ್ಯವಾದ ಅರುಣಾಚಲ ಪ್ರದೇಶದಲ್ಲಿ ಭಾಗಶಃ ಸೂರ್ಯಗ್ರಹಣ ಗೋಚರವಾಗಿದೆ. ಉತ್ತರ ಅಮೆರಿಕ, ಕೆನಡಾ, ಯುರೋಪ್ ಮತ್ತು ರಷ್ಯಾಗಳಲ್ಲಿ ಪೂರ್ಣ ಗ್ರಹಣವು ಗೋಚರವಾಗುತ್ತಿದೆ. ರಿಂಗ್ ಆಫ್ ಫೈರ್ ಎಂದೂ ಕರೆಯಲ್ಪಡುವ ಈ ವಿದ್ಯಮಾನವು ಚಂದ್ರನು ಸೂರ್ಯ ಮತ್ತು ಭೂಮಿಯ ನಡುವೆ ಬಂದಾಗ ಸಂಭವಿಸುತ್ತದೆ.
ಚಂದ್ರನು ಭೂಮಿಯಿಂದ ದೂರದಲ್ಲಿದ್ದಾಗ ವಾರ್ಷಿಕ ಸೂರ್ಯಗ್ರಹಣ ಸಂಭವಿಸುತ್ತದೆ. ಗ್ರಹದಿಂದ ದೂರವಿರುವುದರಿಂದ ಚಂದ್ರನಿಗೆ ಸೂರ್ಯನ ಬೆಳಕನ್ನು ಸಂಪೂರ್ಣವಾಗಿ ತಡೆಯಲು ಸಾಧ್ಯವಾಗುವುದಿಲ್ಲ. ಈ ವೇಳೆ ಆಗಸದಲ್ಲಿ ನೆರಳು ಬೆಳಕಿನ ಆಟ ಕಂಡು ಬರುತ್ತದೆ. ಭಾರತದಲ್ಲಿ ಮಧ್ಯಾಹ್ನ 1:42ರಿಂದ ಸಂಜೆ 6:41ರ ವರೆಗೆ ಭಾಗಶಃ ಗೋಚರವಾಯಿತು.
ಓದಿ: ಮುಂಬೈ ಕಟ್ಟಡ ದುರಂತ; 8 ಮಕ್ಕಳು ಸೇರಿ 11 ಮಂದಿ ಬಲಿ, ಪರಿಹಾರ ಘೋಷಣೆ