ಲಖನೌ: ಮತಾಂತರಗೊಂಡು ಮದುವೆಯಾಗಲು ನಿರಾಕರಿಸಿದ ವಿದ್ಯಾರ್ಥಿನಿಯನ್ನು ಅಪಾರ್ಟ್ಮೆಂಟ್ ನಾಲ್ಕನೇ ಮಹಡಿಯಿಂದ ಕೆಳಕ್ಕೆ ತಳ್ಳಿ ಕೊಲೆ ಮಾಡಿದ ಪ್ರಕರಣದ ಆರೋಪಿಯ ಸ್ಥಳದ ಬಗ್ಗೆ ಸುಳಿವು ಇನ್ನೂ ಸಿಕ್ಕಿಲ್ಲ. ಘಟನೆ ನಡೆದ ಎರಡು ದಿನಗಳ ನಂತರ ಪೊಲೀಸರು ಸುಫಿಯಾನ್ ಬಗ್ಗೆ ಮಾಹಿತಿ ನೀಡಿದವರಿಗೆ 25,000 ರೂಪಾಯಿ ನಗದು ಬಹುಮಾನ ಘೋಷಿಸಿದ್ದಾರೆ.
22ವರ್ಷದ ಆರೋಪಿ ಸುಪಿಯಾನ್ ರಾಷ್ಟ್ರ ರಾಜಧಾನಿಯ ಕೆಲವು ಉದ್ಯಮಿಗಳ ಜೊತೆ ಬಟ್ಟೆ ಉದ್ಯಮದಲ್ಲಿ ಡೈಯರ್ ಕೆಲಸ ಮಾಡುತ್ತಿದ್ದಾನೆ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿದ್ದು, ತಂಡವನ್ನು ನವದೆಹಲಿಗೆ ಕಳುಹಿಸಲಾಗಿದೆ ಎಂದು ಪಶ್ಚಿಮ ವಲಯದ ಹೆಚ್ಚುವರಿ ಉಪ ಆಯುಕ್ತ ಚಿರಂಜೀವ್ ನಾಥ್ ಸಿನ್ಹಾ ತಿಳಿಸಿದರು.
ನಂತರ ಪೊಲೀಸ್ ತಂಡವು ಗುಡಂಬದಲ್ಲಿರುವ ಸೂಫಿಯಾನ್ ಅವರ ಸಂಬಂಧಿಯ ಮನೆಗೆ ತೆರಳಿ ಅಲ್ಲಿ ಅವರ ತಂದೆ ಮತ್ತು ಕಿರಿಯ ಸಹೋದರನನ್ನು ಎಲ್ಲ ಸಂಭವನೀಯ ಸ್ಥಳಗಳ ಬಗ್ಗೆ ಮತ್ತು ದೇಶಾದ್ಯಂತ ಇರುವ ಅವರ ಸಂಬಂಧಿಕರ ಪಟ್ಟಿಯನ್ನು ಕೇಳಲಾಗಿದೆ ಎಂದು ಸಿನ್ಹಾ ಹೇಳಿದರು. ಪೊಲೀಸ್ ಮೂಲಗಳ ಸಂತ್ರಸ್ತೆಯ ಸ್ನೇಹಿತರ ಹೇಳಿಕೆಗಳನ್ನು ತೆಗೆದುಕೊಂಡು ಸುಪಿಯಾನ್ ಬಗ್ಗೆ ಮಾಹಿತಿ ಕಲೆ ಹಾಕುದೆ ಎಂದರು.
ಮತ್ತೊಂದೆಡೆ ಪೊಲೀಸ್ ತಂಡವು ಫೋರೆನ್ಸಿಕ್ ಘಟಕದೊಂದಿಗೆ ಸಂಪರ್ಕದಲ್ಲಿದ್ದು ಘಟನಾ ಸ್ಥಳಕ್ಕೆ ಭೇಟಿ ನೀಡಿ ನಂತರ ಅಪರಾಧದ ದೃಶ್ಯವನ್ನು ಮರುಸೃಷ್ಟಿಕರಣ ನಡೆಸುವುದಾಗಿ ಹೇಳಿದರು. ಇನ್ನೂ ಮದುವೆಗಾಗಿ ಮತಾಂತರಗೊಳ್ಳುವಂತೆ ಸೂಫಿಯಾನ್ ಸಂತ್ರಸ್ತೆಯ ಮೇಲೆ ಒತ್ತಡ ಹೇರುತ್ತಿದ್ದ ಎಂದು ಬಾಲಕಿಯ ಕುಟುಂಬಸ್ಥರು ಆರೋಪಿಸಿದ್ದರು. ಯುವಕ ಮತ್ತು ವಿದ್ಯಾರ್ಥಿನಿಯ ನಡುವೆ ಅಕ್ರಮ ಸಂಬಂಧವಿತ್ತು ಎಂದು ಪೊಲೀಸರು ಹೇಳಿದ್ದಾರೆ.
ಇದನ್ನೂ ಓದಿ : ಲಕ್ನೋದಲ್ಲಿ ಲವ್ ಜಿಹಾದ್ ಆರೋಪ ಪ್ರಕರಣ: ಮತಾಂತರಕ್ಕೆ ವಿರೋಧಿಸಿದ್ದಕ್ಕೆ ಮಹಡಿಯಿಂದ ತಳ್ಳಿದ್ನಾ ಕಿರಾತಕ?