ETV Bharat / bharat

ಹತ್ತು ರಾಜ್ಯಗಳಲ್ಲಿ ಶೇ 73.05ರಷ್ಟು ಹೊಸ ಸೋಂಕಿತರು: ಯಾವುವು ಆ ಕೋವಿಡ್​ ಹಾಟ್​ಸ್ಪಾಟ್​ಗಳು? - ಭಾರತದ ಕೋವಿಡ್ 19 ಕೇಸ್

ಭಾರತ ಕಳೆದ 24 ಗಂಟೆಗಳ ಅವಧಿಯಲ್ಲಿ 3,86,452 ಹೊಸ ಕೊರೊನಾ ವೈರಸ್ ಸೋಂಕುಗಳನ್ನು ದಾಖಲಿಸಿದೆ. ಇದುವರೆಗಿನ ಏಕದಿನದ ಗರಿಷ್ಠ ಏರಿಕೆ ಇದಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 1,87,62,976ಕ್ಕೆ ತಲುಪಿದೆ ಎಂದು ಸಚಿವಾಲಯದ ಅಂಕಿ ಅಂಶಗಳು ಹೇಳುತ್ತಿವೆ . ಕರ್ನಾಟಕ, ಕೇರಳ, ಛತ್ತೀಸ್‌ಗಢ, ಪಶ್ಚಿಮ ಬಂಗಾಳ, ತಮಿಳುನಾಡು, ಆಂಧ್ರಪ್ರದೇಶ ಮತ್ತು ರಾಜಸ್ಥಾನಗಳು ಅಗ್ರ 10 ರ ಪಟ್ಟಿಯಲ್ಲಿರುವ ರಾಜ್ಯಗಳಾಗಿವೆ.

COVID-19 cases
COVID-19 cases
author img

By

Published : Apr 30, 2021, 3:39 PM IST

ನವದೆಹಲಿ: ಕಳೆದ 24 ಗಂಟೆಗಳಲ್ಲಿ ವರದಿಯಾದ ಹೊಸ ಕೋವಿಡ್ -19 ಪ್ರಕರಣಗಳಲ್ಲಿ ಶೇ 73.05ರಷ್ಟು ಪ್ರಕರಣಗಳು ಮಹಾರಾಷ್ಟ್ರ, ದೆಹಲಿ, ಕರ್ನಾಟಕ ಸೇರಿ 10 ರಾಜ್ಯಗಳಲ್ಲಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಭಾರತ ಕಳೆದ 24 ಗಂಟೆಗಳ ಅವಧಿಯಲ್ಲಿ 3,86,452 ಹೊಸ ಕೊರೊನಾ ವೈರಸ್ ಸೋಂಕುಗಳನ್ನು ದಾಖಲಿಸಿದೆ. ಇದುವರೆಗಿನ ಏಕದಿನದ ಗರಿಷ್ಠ ಏರಿಕೆ ಇದಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 1,87,62,976ಕ್ಕೆ ತಲುಪಿದೆ ಎಂಬುದು ಸಚಿವಾಲಯದ ಅಂಕಿ ಅಂಶಗಳಲ್ಲಿದೆ.

ಕರ್ನಾಟಕ, ಕೇರಳ, ಛತ್ತೀಸ್‌ಗಢ, ಪಶ್ಚಿಮ ಬಂಗಾಳ, ತಮಿಳುನಾಡು, ಆಂಧ್ರಪ್ರದೇಶ ಮತ್ತು ರಾಜಸ್ಥಾನಗಳು ಅಗ್ರ 10ರಲ್ಲಿವೆ.

ಮಹಾರಾಷ್ಟ್ರದಲ್ಲಿ ದೈನಂದಿನ ಅತಿ ಹೆಚ್ಚು ಹೊಸ ಪ್ರಕರಣಗಳು 66,159, ಕೇರಳ 38,607 ಮತ್ತು ಉತ್ತರ ಪ್ರದೇಶ 35,104 ಪ್ರಕರಣಗಳು ದಾಖಲಾಗಿವೆ.

ಮಹತ್ವದ ಬೆಳವಣಿಗೆಯಲ್ಲಿ, 24 ಗಂಟೆಗಳ ಅವಧಿಯಲ್ಲಿ 19 ಲಕ್ಷಕ್ಕೂ ಹೆಚ್ಚು (19,20,107) ಪರೀಕ್ಷೆಗಳನ್ನು ನಡೆಸಲಾಗಿದ್ದು, ಇದು ಭಾರತದಲ್ಲಿ ಅತಿ ಹೆಚ್ಚು ಏಕದಿನ ಪರೀಕ್ಷೆಗಳಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಭಾರತದ ಒಟ್ಟು ಸಕ್ರಿಯ ಕೇಸ್​ಗಳು 31,70,228 ತಲುಪಿದೆ. ಈಗ ದೇಶದ ಒಟ್ಟು ಸೋಂಕುಗಳಲ್ಲಿ ಶೇ 16.90ರಷ್ಟಿದೆ. ಒಂದು ದಿನದಲ್ಲಿ ಒಟ್ಟು ಸಕ್ರಿಯ ಕೇಸ್​​ಗಳಲ್ಲಿ 85,414 ಹೆಚ್ಚಳವಾಗಿವೆ.

ಮಹಾರಾಷ್ಟ್ರ, ಕರ್ನಾಟಕ, ಉತ್ತರ ಪ್ರದೇಶ, ಕೇರಳ, ರಾಜಸ್ಥಾನ, ಗುಜರಾತ್, ಛತ್ತೀಸ್‌ಗಢ, ಆಂಧ್ರಪ್ರದೇಶ, ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಬಿಹಾರ ಸೇರಿ 11 ರಾಜ್ಯಗಳು ಭಾರತದ ಒಟ್ಟು ಸಕ್ರಿಯ ಪ್ರಕರಣಗಳಲ್ಲಿ ಒಟ್ಟು ಶೇ 78.18ರಷ್ಟಿದೆ ಎಂದು ಸಚಿವಾಲಯದ ಅಂಕಿ ಅಂಶಗಳು ತಿಳಿಸಿವೆ.

ರಾಷ್ಟ್ರೀಯ ಮರಣ ಪ್ರಮಾಣ ಕುಸಿಯುತ್ತಿದ್ದು, ಪ್ರಸ್ತುತ ಇದು ಶೇ 1.11ರಷ್ಟಿದೆ. 24 ಗಂಟೆಗಳ ಅವಧಿಯಲ್ಲಿ ಒಟ್ಟು 3,498 ಸಾವುಗಳು ವರದಿಯಾಗಿವೆ. ಹೊಸ ಸಾವುಗಳಲ್ಲಿ ಶೇ 77.44ರಷ್ಟು ಹತ್ತು ರಾಜ್ಯಗಳಲ್ಲಿವೆ. ಮಹಾರಾಷ್ಟ್ರದಲ್ಲಿ ಗರಿಷ್ಠ 771 ಸಾವುಗಳು ಸಂಭವಿಸಿವೆ. ದೆಹಲಿಯು 395 ಸೋಂಕಿತರು ಮೃತಪಟ್ಟಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.