ETV Bharat / bharat

ಕೇರಳದಲ್ಲಿ ​54 ಡಿಗ್ರಿ ಸೆಲ್ಸಿಯಸ್​ಗೆ ತಲುಪಿದ ಫೀಲ್​ ಲೈಕ್​​​​​ ತಾಪಮಾನ: ಸನ್​ ಸ್ಟ್ರೋಕ್ ಅಪಾಯ ಹೆಚ್ಚಳ! - ಸನ್​ ಸ್ಟ್ರೋಕ್ ಅಪಾಯ ಹೆಚ್ಚಳ

ಬೇಸಿಗೆ ಮುಂದುವರಿಯುತ್ತಿದ್ದಂತೆ ಕೇರಳದಲ್ಲಿ ಉಷ್ಣಾಂಶವು ಗಮನಾರ್ಹ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ತಿರುವನಂತಪುರಂ, ಕೊಲ್ಲಂ, ಅಲಪ್ಪುಳ, ಕೊಟ್ಟಾಯಂ, ಎರ್ನಾಕುಲಂ ಮುಂತಾದ ಪ್ರದೇಶಗಳಲ್ಲಿ ಉಷ್ಣಾಂಶ ತುಂಬಾ ಹೆಚ್ಚಾಗುತ್ತಿದೆ.

ಕೇರಳದ ಕೆಲವು ಭಾಗಗಳು ತಾಪಮಾನ
Parts of Kerala experience feels like temperature
author img

By

Published : Mar 10, 2023, 3:15 PM IST

ತಿರುವನಂತಪುರಂ : ಕೆಲವು ತಿಂಗಳ ಹಿಂದೆ ವಿಪರೀತ ಮಳೆಯಾಗಿ ಸಂಕಷ್ಟ ಅನುಭವಿಸಿದ್ದ ಕೇರಳದಲ್ಲಿ ಈಗ ಉಷ್ಣತಾಮಾನವು ವಿಪರೀತ ಎನ್ನುವಷ್ಟರ ಮಟ್ಟಿಗೆ ಏರಿಕೆಯಾಗುತ್ತಿರುವುದು ಮತ್ತೊಂದು ರೀತಿಯ ಸಂಕಷ್ಟಕ್ಕೆ ಕಾರಣವಾಗಿದೆ. ಈ ಹಿಂದೆ ಎಂದೂ ಕಾಣದ ಮಟ್ಟಕ್ಕೆ ರಾಜ್ಯದಲ್ಲಿ ಉಷ್ಣಾಂಶ ಹೆಚ್ಚಳವಾಗುತ್ತಿದೆ. ಕರಾವಳಿ ರಾಜ್ಯವಾದ ಕೇರಳದಲ್ಲಿ ಬೇಸಿಗೆ ಈಗ ತಾನೇ ಆರಂಭವಾಗುತ್ತಿದೆ. ಆದರೆ, ತಾಪಮಾನ ಮಾತ್ರ ದಿಢೀರ್ ಹೆಚ್ಚಳವಾಗುತ್ತಿರುವುದು ಆತಂಕ ಮೂಡಿಸಿದೆ.

ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಕೆಎಸ್‌ಡಿಎಂಎ) ಸಿದ್ಧಪಡಿಸಿದ ವರದಿಯ ಪ್ರಕಾರ, ಕೇರಳ ರಾಜ್ಯದ ಕೆಲವು ಪ್ರದೇಶಗಳು 54 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿನ ಉಷ್ಣಾಂಶ ದಾಖಲಿಸಿವೆ. ಇದು ಆರೋಗ್ಯಕ್ಕೆ ಗಂಭೀರವಾದ ಅಪಾಯಗಳನ್ನು ತರಬಹುದು ಮತ್ತು ಸನ್ ಸ್ಟ್ರೋಕ್ (ಶಾಖದ ಹೊಡೆತದ) ಸಾಧ್ಯತೆಗಳನ್ನು ಉಂಟು ಮಾಡುತ್ತದೆ. ಶಾಖ ಸೂಚ್ಯಂಕ (Heat index)ವು ವಾತಾವರಣದ ತಾಪಮಾನ ಮತ್ತು ತೇವಾಂಶದ ಸಂಯೋಜಿತ ಪರಿಣಾಮದಿಂದ ಉಂಟಾಗುವ ಉಷ್ಣಾಂಶದ ಒಂದು ಸೂಚಕವಾಗಿದೆ.

ವಿಶ್ವದ ಅನೇಕ ಅಭಿವೃದ್ಧಿ ಹೊಂದಿದ ದೇಶಗಳು ಸಾರ್ವಜನಿಕರಿಗೆ ಆರೋಗ್ಯದ ಎಚ್ಚರಿಕೆಗಳನ್ನು ನೀಡುವ ಸಲುವಾಗಿ 'ತಾಪಮಾನದಂತೆ ಭಾಸವಾಗುತ್ತಿದೆ' (feels like temperature) ಮಾದರಿಯಲ್ಲಿ ಉಷ್ಣಾಂಶವನ್ನು ಹೇಳುತ್ತವೆ. ಅಂದರೆ ಉಷ್ಣತಾಮಾಪಕದಲ್ಲಿ ತೋರಿಸುವುದಕ್ಕಿಂತಲೂ ವಾಸ್ತವದಲ್ಲಿ ಅನುಭವವಾಗುವ ಉಷ್ಣಾಂಶ ಬೇರೆಯಾಗಿದ್ದರೆ, ತಾಪಮಾನದಂತೆ ಭಾಸವಾಗುತ್ತಿದೆ ಎಂಬ ಮಾದರಿಯಲ್ಲಿ ಅದನ್ನು ಹೇಳಲಾಗುತ್ತದೆ. ಅದರ ಪ್ರಕಾರ, ತಿರುವನಂತಪುರಂ ಜಿಲ್ಲೆಯ ದಕ್ಷಿಣ ಭಾಗ ಮತ್ತು ಆಲಪ್ಪುಳ, ಕೊಟ್ಟಾಯಂ ಮತ್ತು ಕಣ್ಣೂರು ಜಿಲ್ಲೆಗಳ ಕೆಲವು ಪ್ರದೇಶಗಳು 54 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿನ feels like temperature ಹೊಂದಿವೆ.

ತಿರುವನಂತಪುರಂ, ಕೊಲ್ಲಂ, ಅಲಪ್ಪುಳ, ಕೊಟ್ಟಾಯಂ, ಎರ್ನಾಕುಲಂ, ಕೋಯಿಕ್ಕೋಡ್ ಮತ್ತು ಕಣ್ಣೂರಿನ ಪ್ರಮುಖ ಪ್ರದೇಶಗಳಲ್ಲಿ ಗುರುವಾರ 45-54 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಈ ಸ್ಥಳಗಳಲ್ಲಿ ದೀರ್ಘಕಾಲ ಕೆಲಸ ಮಾಡುವುದರಿಂದ ಶಾಖದ ಹೊಡೆತಕ್ಕೆ ಗುರಿಯಾಗಬಹುದು. ಇಡೀ ಕಾಸರಗೋಡು, ಕೋಯಿಕ್ಕೋಡ್, ಮಲಪ್ಪುರಂ, ಕೊಲ್ಲಂ, ಪತ್ತನಂತಿಟ್ಟ ಮತ್ತು ಎರ್ನಾಕುಲಂನಲ್ಲಿ 40-45 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಇಂಥ ಸಮಯದಲ್ಲಿ ದೀರ್ಘಕಾಲ ಸೂರ್ಯನಿಗೆ ಒಡ್ಡಿಕೊಂಡರೆ ತೀರಾ ಆಯಾಸ ಉಂಟಾಗಬಹುದು.

ಇಡುಕ್ಕಿ ಮತ್ತು ವಯನಾಡಿನ ಬೆಟ್ಟ ಗುಡ್ಡದ ಜಿಲ್ಲೆಗಳ ಕೆಲ ಪ್ರದೇಶಗಳಲ್ಲಿ ಮಾತ್ರ ಉಷ್ಣಾಂಶ 29 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ ಇದೆ. ಬೇಸಿಗೆಯ ಸಾಮಾನ್ಯ ಪರಿಸ್ಥಿತಿಗಳಿಗೆ ವ್ಯತಿರಿಕ್ತವಾಗಿ ಪಾಲಕ್ಕಾಡ್ ಜಿಲ್ಲೆಯಲ್ಲಿ ಈ ವರ್ಷ ಬೇಸಿಗೆಯಲ್ಲಿ ಕಡಿಮೆ ಉಷ್ಣಾಂಶ ದಾಖಲಾಗಿದೆ. ಜಿಲ್ಲೆಯಲ್ಲಿ 30 ರಿಂದ 40 ಡಿಗ್ರಿ ಸೆಲ್ಸಿಯಸ್ ತಾಪಮಾನವಿದೆ. ಇಡುಕ್ಕಿ ಜಿಲ್ಲೆಯ ಬಹುತೇಕ ಭಾಗದಲ್ಲಿ ಉಷ್ಣಾಂಶ ಇದೇ ಮಟ್ಟದಲ್ಲಿದೆ.

ಬಿಸಿಲಿನ ತಾಪದಿಂದ ರಕ್ಷಿಸಿಕೊಳ್ಳಲು ಜನರಿಗೆ ಹವಾಮಾನ ಇಲಾಖೆ ಸೂಚನೆ: ರಾಜ್ಯದಲ್ಲಿ ತಾಪಮಾನವು ಗಗನಕ್ಕೇರುತ್ತಿರುವ ಕಾರಣ, ಭಾರತೀಯ ಹವಾಮಾನ ಇಲಾಖೆಯು (IMD) ಸ್ವಯಂಚಾಲಿತ ಹವಾಮಾನ ಮ್ಯಾಪಿಂಗ್ ಸೌಲಭ್ಯಗಳನ್ನು ಬಳಸಿಕೊಂಡು ಹೀಟ್ ಇಂಡೆಕ್ಸ್​ ಮ್ಯಾಪ್​ಗಳನ್ನು ಸಿದ್ಧಪಡಿಸುತ್ತಿದೆ. ಜನರು ಹೊರಗೆ ಹೋಗುವಾಗ ಹೆಚ್ಚಿನ ಕಾಳಜಿ ವಹಿಸುವಂತೆ ಮತ್ತು ಬಿಸಿಲಿನ ತಾಪದಿಂದ ರಕ್ಷಿಸಿಕೊಳ್ಳಲು ಹೆಚ್ಚುವರಿಯಾಗಿ ನೀರು ಕುಡಿಯುವಂತೆ ಆರೋಗ್ಯ ಅಧಿಕಾರಿಗಳು ವಿನಂತಿಸಿದ್ದಾರೆ.

ಇದನ್ನೂ ಓದಿ: ಬ್ರಿಟನ್​ನಲ್ಲಿ ದಾಖಲೆ ಮಟ್ಟಕ್ಕೇರಿದ ಉಷ್ಣಾಂಶ; ನೀರಲ್ಲಿ ಮುಳುಗಿ ಸತ್ತ ಜನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.