ETV Bharat / bharat

"ನಾನು ಒಂದು ದಿನ ಸಿಎಂ ಆಗ್ತೀನಿ ಅಂತ ತಾಯಿಗೆ ಹೇಳು": ಭಾವಿ ಪತ್ನಿಗೆ ಮಾತು ಕೊಟ್ಟಿದ್ದರಂತೆ ಅಸ್ಸೋಂ ಸಿಎಂ - ರಿನಿಕಿ ಶರ್ಮಾ ಹೇಳಿಕೆ

ನಾವು ಕಾಲೇಜಿನಲ್ಲಿರುವಾಗಲೇ ಹಿಮಂತ ಅವರು ಒಂದಲ್ಲೊಂದು ದಿನ ಸಿಎಂ ಆಗೇ ಆಗ್ತೀನಿ ಅಂತ ಮಾತು ಕೊಟ್ಟಿದ್ದರು. ಇಂದು ಅವರು ಆ ಹುದ್ದೆಗೇರುವ ಮೂಲಕ ಕೊಟ್ಟ ಮಾತು ಉಳಿಸಿಕೊಂಡಿದ್ದಾರೆ. ಈ ಸಂತಸದ ಕ್ಷಣ ನನಗೆ ನಿಜವಾಗಲೂ ನಂಬಲಾಗುತ್ತಿಲ್ಲ ಎಂದು ಆಸ್ಸೋಂ ನೂತನ ಸಿಎಂ ಪತ್ನಿ ಅಚ್ಚರಿ ವ್ಯಕ್ತಪಡಿಸುತ್ತಾರೆ.

Himanta Biswa Sarma's wife
ಹಿಮಂತ ಬಿಸ್ವಾ ಶರ್ಮಾ ಪತ್ನಿ ಹೇಳಿ
author img

By

Published : May 11, 2021, 12:11 PM IST

ಗುಹಾವಟಿ (ಅಸ್ಸೋಂ): ನಾನು ಒಂದು ದಿನ ಸಿಎಂ ಆಗುತ್ತೇನೆ ಎಂದು ನಿನ್ನ ತಾಯಿಗೆ ಹೇಳು ಎಂದು ಅಸ್ಸೋಂನ ನೂತನ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಕಾಟನ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ತನ್ನ ಭಾವಿ ಪತ್ನಿ ರಿನಿಕಿ ಭುಯಾನ್ ಶರ್ಮಾ ಅವರಿಗೆ ಭರವಸೆ ಕೊಟ್ಟಿದ್ದರಂತೆ.

ಗುವಾಹಟಿಯ ಪ್ರಸಿದ್ಧ ಶ್ರೀಮಂತ ಶಂಕರ್​ದೇವ್ ಕಲಾಕ್ಷೇತ್ರದಲ್ಲಿ ಹಿಮಂತ ಶರ್ಮಾ ಅಸ್ಸೋಂನ ನೂತನ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಪತ್ನಿ ರಿನಿಕಿ ಕಿ ಭುಯಾನ್ ಮಾಧ್ಯಮಗಳ ಜೊತೆ ಹಳೆಯ ಘಟನಾವಳಿಗಳನ್ನು ಮೆಲುಕು ಹಾಕುತ್ತಾ, ಸಂತಸ ಹಂಚಿಕೊಂಡರು.

'ನನಗೆ 17 ವರ್ಷ ಮತ್ತು ಹಿಮಂತ್‌ 22 ವರ್ಷದವರಿದ್ದಾಗ ನಾವಿಬ್ಬರು ಮೊದಲ ಸಲ ಭೇಟಿಯಾದೆವು. 22 ವರ್ಷಗಳ ಹಿಂದೆ ನಮ್ಮ ಮುಂದಿನ ಜೀವನದ ಬಗ್ಗೆ ನಾನು ತಾಯಿಗೆ ಏನು ಹೇಳಲಿ? ಎಂದು ಕೇಳಿದ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ' ಎಂದು ಅವರು ನಿರಾಳರಾದರು.

'ಅವರು ಹಲವು ಬಾರಿ ಸಚಿವರಾಗಿದ್ದಾರೆ. ಆದರೆ ನಾನು ನೀವು ಸಿಎಂ ಆಗಿ ಯಾವಾಗ ಪ್ರಮಾಣ ವಚನ ಸ್ವೀಕರಿಸುತ್ತೀರಾ? ಎಂದು ಕೇಳುತ್ತಿದ್ದೆ. ಇಂದು (ಸೋಮವಾರ) ನನಗೆ ನಂಬಲಾಗದ ದಿನ. ಕಳೆದ ರಾತ್ರಿ ಕೂಡ ಅವರು ಸಿಎಂ ಆಗಿ ನಾಮನಿರ್ದೇಶನಗೊಂಡಿದ್ದೇನೆ ಎಂದು ಹೇಳಿದ್ದರು. ಆ ವೇಳೆ ನಾನು ಕುನ್ (ಯಾರು) ಎಂದು ಕೇಳಿದ್ದೆ. ಆಗವರು ಮೋಯ್ (ನಾನು) ಅಂತಲೇ ಹೇಳಿದ್ದರು.

ನನಗೆ ಮತ್ತು ನನ್ನ ಮಕ್ಕಳಿಗೆ ಹಿಮಂತ ಯಾವಾಗಲೂ ಹಿಮಂತ ಆಗಿಯೇ ಇರುತ್ತಾರೆ. ನನಗೆ ಅವರು ಸಿಎಂ ಎಂದು ಈಗಲೂ ನಂಬಲಾಗುತ್ತಿಲ್ಲ. ರಾಜ್ಯದ ಕಾರ್ಯಕಾರಿ ಮುಖ್ಯಸ್ಥ ಎಂಬುವುದನ್ನು ಅರಗಿಸಿಕೊಳ್ಳಲು ನನಗೆ ಸ್ವಲ್ಪ ಸಮಯ ಬೇಕು ಎಂದು ಮಾಧ್ಯಮ ಕ್ಷೇತ್ರದ ಉದ್ಯಮಿಯಾಗಿರುವ ರಿನಿಕಿ ಅಚ್ಚರಿ ವ್ಯಕ್ತಪಡಿಸುತ್ತಾರೆ.

ಸಾರ್ವಜನಿಕ ಜೀವನದಲ್ಲಿರುವ ಒಬ್ಬ ವ್ಯಕ್ತಿ ಅನೇಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಆದರೆ, ಸಮಸ್ಯೆಗಳ ಕುರಿತು ಹೃದಯ ಮತ್ತು ಮನಸ್ಸಿನಿಂದ ಸಕಾರಾತ್ಮಕವಾಗಿ ಯೋಚಿಸುವ ವ್ಯಕ್ತಿಯಾಗಿರುವುದರಿಂದ ಹಿಮಂತ ಅವರು ಎಲ್ಲವನ್ನೂ ಮೆಟ್ಟಿ ನಿಲ್ಲುತ್ತಾರೆ ಎಂದು ರಿನಿಕಿ ವಿಶ್ವಾಸ ವ್ಯಕ್ತಪಡಿಸಿದರು.

ಹಿಮಂತ ಅವರು ಅಸ್ಸೋಂ ವಿಧಾನಸಭೆಗೆ ಮೊದಲ ಬಾರಿಗೆ ಆಯ್ಕೆಯಾದ ಸಂದರ್ಭ (7 ಜನವರಿ 2001) ದಲ್ಲಿ ರಿನಿಕಿ ಅವರನ್ನು ವಿವಾಹವಾಗಿದ್ದರು. ಈ ದಂಪತಿಗೆ ನಂದಿಲ್ ಮತ್ತು ಸುಕನ್ಯಾ ಎಂಬಿಬ್ಬರು ಮಕ್ಕಳಿದ್ದಾರೆ. ನಂದಿಲ್ ಡೂನ್ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ 2020 ರಲ್ಲಿ 12 ನೇ ತರಗತಿಯಲ್ಲಿ ಉತ್ತೀರ್ಣರಾಗಿದ್ದಾರೆ. ಅದೇ ವರ್ಷದಲ್ಲಿ ಸುಕನ್ಯಾ ಕೂಡ ಮಾಧ್ಯಮಿಕ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.