ETV Bharat / bharat

Telangana Unlock​​: ಕರ್ನಾಟಕ, ಆಂಧ್ರಪ್ರದೇಶಕ್ಕೆ ಬಸ್ ಸೇವೆ ಪುನಾರಂಭ - ಕರ್ನಾಟಕ ಕೋವಿಡ್ ನಿಯಮ

ತೆಲಂಗಾಣ ಸರ್ಕಾರ ಅನ್​​​ಲಾಕ್​ ಘೋಷಣೆಯ ಬೆನ್ನಲ್ಲೇ ಕೆಲ ರಾಜ್ಯಗಳಿಗೆ ಬಸ್​​ ಸಂಚಾರ ಆರಂಭಿಸಿದೆ. ಆಂಧ್ರಪ್ರದೇಶ, ಕರ್ನಾಟಕ ಭಾಗಕ್ಕೆ ನಾಳೆಯಿಂದಲೇ ರಾಜ್ಯ ಸಾರಿಗೆ ಬಸ್​ಗಳು ಸಂಚಾರವನ್ನು ಪುನಾರಂಭಿಸಲಿವೆ.

ಕರ್ನಾಟಕ, ಆಂಧ್ರಪ್ರದೇಶಕ್ಕೆ ಬಸ್ ಸೇವೆ ಪುನಾರಂಭ

author img

By

Published : Jun 20, 2021, 8:13 PM IST

Updated : Jun 20, 2021, 8:30 PM IST

ಹೈದರಾಬಾದ್: ತೆಲಂಗಾಣದಲ್ಲಿ ಕೋವಿಡ್ ಲಾಕ್​ಡೌನ್ ಸಂಪೂರ್ಣವಾಗಿ ತೆರವು ಮಾಡಲಾಗಿದ್ದು, ಎಲ್ಲಾ ಸೇವೆಗಳು ಲಭ್ಯವಾಗಲಿವೆ. ಅಂತಾರಾಜ್ಯ ಬಸ್​ ಸೇವೆಗೂ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದ್ದು, ನಾಳೆಯಿಂದಲೇ ಸಂಚಾರ ಸೇವೆ ಪುನಾರಂಭವಾಗಲಿದೆ. ತೆಲಂಗಾಣದಿಂದ ಆಂಧ್ರಕ್ಕೆ ಬೆಳಗ್ಗೆ 6ರಿಂದ ಸಂಜೆ 6ರ ವರೆಗೆ ಬಸ್ ಸೇವೆ ನೀಡಲು ನಿರ್ಧರಿಸಿದೆ.

ಇತ್ತ ಕರ್ನಾಟಕಕ್ಕೂ ಬಸ್​​ ಸೇವೆ ಆರಂಭಗೊಳ್ಳುತ್ತಿದೆ. ಕರ್ನಾಟಕ ಕೋವಿಡ್ ನಿಯಮದ ಅನುಸಾರವಾಗಿ ಬೆಂಗಳೂರು ನಗರ ಹೊರತುಪಡಿಸಿ ಉಳಿದ ಜಿಲ್ಲೆಗಳಿಗೆ ನಾಳೆಯಿಂದಲೇ ಟಿಎಸ್​ಆರ್​ಟಿಸಿ ಬಸ್ ಸಂಚಾರ ಪುನಾರಂಭವಾಗಲಿವೆ. ಬೆಳಗ್ಗೆ 5 ಗಂಟೆಯಿಂದ ಸಂಜೆ 7ರ ವರೆಗೆ ಬಸ್​ಗಳು ಸಂಚರಿಸಲಿವೆ. ಈ ನಡುವೆ ಕರ್ನಾಟಕದಲ್ಲಿ ವಾರಾಂತ್ಯ ಕರ್ಫ್ಯೂ ಜಾರಿಯಿರುವ ಕಾರಣ ಶುಕ್ರವಾರದಿಂದ ಸೋಮವಾರ ಬೆಳಗ್ಗೆವರೆಗೆ ಯಾವುದೇ ಬಸ್​ ಸಂಚಾರ ನಡೆಸುವುದಿಲ್ಲ ಎಂದು ಟಿಎಸ್​ಆರ್​​ಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ.

ಇನ್ನೊಂದೆಡೆ ಆಂಧ್ರಪ್ರದೇಶ ಸರ್ಕಾರ ಸಹ ನಾಳೆಯಿಂದ ತೆಲಂಗಾಣ ರಾಜ್ಯಕ್ಕೆ ಬಸ್​ ಸೇವೆ ನೀಡಲು ನಿರ್ಧರಿಸಿದೆ. ಬೆಳಗ್ಗೆ 6 ರಿಂದ ಸಂಜೆ 6ರ ವರೆಗೆ ಬಸ್​ ಸೇವೆಗೆ ನಿರ್ಧರಿಸಲಾಗಿದೆ.

ಓದಿ: ತೆಲಂಗಾಣ: ಆಸ್ಪತ್ರೆಯಲ್ಲಿ ಗರ್ಭಿಣಿಯ ಮೇಲೆ ಅತ್ಯಾಚಾರಕ್ಕೆ ಯತ್ನ

Last Updated : Jun 20, 2021, 8:30 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.