ಹೈದರಾಬಾದ್: ದೇಶದೆಲ್ಲೆಡೆ ಕೊರೊನಾ ಎರಡನೇ ಅಲೆಯ ಅಬ್ಬರ ಹೆಚ್ಚಾಗುತ್ತಿದ್ದು ಕರ್ನಾಟಕ, ಮಹಾರಾಷ್ಟ್ರ, ಪಂಜಾಬ್ ಸೇರಿ ಕೆಲ ರಾಜ್ಯಗಳಲ್ಲಿ ಅತೀ ಹೆಚ್ಚು ಕೇಸುಗಳು ದಾಖಲಾಗಿವೆ. ಇದೀಗ ತೆಲಂಗಾಣದಲ್ಲಿ ಕಳೆದ 24 ಗಂಟೆಯಲ್ಲಿ 1,097 ಹೊಸ ಕೊರೊನಾ ಪ್ರಕರಣಗಳು ಕಂಡುಬಂದಿದ್ದು, ಒಟ್ಟು 3.13 ಲಕ್ಷಕ್ಕೆ ತಲುಪಿದೆ ಎಂದು ವರದಿಯಾಗಿದೆ. ಸಾವಿನ ಸಂಖ್ಯೆ 1,723ಕ್ಕೆ ಏರಿಕೆಯಾಗಿದೆ.
ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ (ಜಿಎಚ್‌ಎಂಸಿ)ನಲ್ಲಿ 302 ಪ್ರಕರಣಗಳು ದಾಖಲಾಗಿದೆ. ಮೆಡ್ಚಲ್ ಮಲ್ಕಾಜ್‌ಗಿರಿ ಜಿಲ್ಲೆಯಲ್ಲಿ 138 ಮತ್ತು ರಂಗರೆಡ್ಡಿ ಜಿಲ್ಲೆಯಲ್ಲಿ 116 ಪ್ರಕರಣಗಳು ದಾಖಲಾಗಿವೆ ಎಂದು ಏಪ್ರಿಲ್ 4 ರಂದು ರಾತ್ರಿ 8 ಗಂಟೆಯವರೆಗೆ ವಿವರಗಳನ್ನು ನೀಡಿದೆ.
ಇದನ್ನೂ ಓದಿ: 2ನೇ ಕೋವಿಡ್ ಅಲೆಯಲ್ಲಿ ಭಾರತ: ಮೊಟ್ಟ ಮೊದಲ ಬಾರಿಗೆ ಒಂದೇ ದಿನ 1 ಲಕ್ಷ ಕೇಸ್ ದಾಖಲು!
ಒಟ್ಟಾರೆ 3,13,237 ಕೇಸುಗಳು ದಾಖಲಾಗಿದೆ. ಅದರಲ್ಲಿ ನಿನ್ನೆ ಒಂದೇ ದಿನ 268 ರೋಗಿಗಳು ಗುಣಮುಖರಾಗಿದ್ದು, ಒಟ್ಟು ಚೇತರಿಕೆ ಪ್ರಮಾಣ 3,02,768 ಆಗಿದೆ. ರಾಜ್ಯದಲ್ಲಿ 8,746 ಸಕ್ರಿಯ ಪ್ರಕರಣಗಳಿದ್ದು, 43,070 ಮಂದಿಯನ್ನು ಟೆಸ್ಟ್ ಮಾಡಲಾಗಿದೆ.
ಇಲ್ಲಿಯವರೆಗೆ 1.04 ಕೋಟಿಗೂ ಹೆಚ್ಚು ಮಾದರಿಗಳನ್ನು ಪರೀಕ್ಷಿಸಲಾಗಿದೆ. ರಾಜ್ಯದಲ್ಲಿ ಸಾವಿನ ಪ್ರಮಾಣ ಶೇಕಡಾ 0.55 ರಷ್ಟಿದ್ದರೆ, ರಾಷ್ಟ್ರಮಟ್ಟದಲ್ಲಿ ಇದು ಶೇಕಡಾ 1.3 ರಷ್ಟಿದೆ. ತೆಲಂಗಾಣದಲ್ಲಿ ಚೇತರಿಕೆ ಪ್ರಮಾಣವು ಶೇಕಡಾ 96.65 ರಷ್ಟಿದ್ದರೆ, ದೇಶದಲ್ಲಿ ಇದು ಶೇಕಡಾ 92.8 ರಷ್ಟಿತ್ತು.
ಪ್ರತ್ಯೇಕ ಬಿಡುಗಡೆಯ ಪ್ರಕಾರ, ರಾಜ್ಯದಲ್ಲಿ 12 ಲಕ್ಷಕ್ಕೂ ಹೆಚ್ಚು ಜನರು ಮೊದಲ ಡೋಸ್ ಕೋವಿಡ್ -19 ಲಸಿಕೆ ಪಡೆದಿದ್ದರೆ, ಏಪ್ರಿಲ್ 4 ರ ವೇಳೆಗೆ 2.60 ಲಕ್ಷಕ್ಕೂ ಹೆಚ್ಚು ಜನರು ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ.