ETV Bharat / bharat

50 ಎಕರೆ ಭೂಮಿ ಹರಾಜು: ಸರ್ಕಾರಕ್ಕೆ ಹರಿದು ಬಂತು 2 ಸಾವಿರ ಕೋಟಿ ರೂ.ಆದಾಯ - ತೆಲಂಗಾಣ ಸಿಎಂ ಕೆ.ಚಂದ್ರಶೇಖರ್ ರಾವ್

ಕೊಕಪೇಟೆಯಲ್ಲಿ ಅಂದಾಜು 50 ಎಕರೆ ಭೂಮಿಯನ್ನು ಹರಾಜು ಹಾಕಿದ್ದರಿಂದ ತೆಲಂಗಾಣ ಸರ್ಕಾರಕ್ಕೆ 2 ಸಾವಿರ ಕೋಟಿ ರೂಪಾಯಿ ಆದಾಯ ಹರಿದುಬಂದಿದೆ.

Hyderabad
Hyderabad
author img

By

Published : Jul 16, 2021, 10:59 AM IST

ಹೈದರಾಬಾದ್: ಕೊಕಪೇಟೆ ಪ್ರದೇಶದಲ್ಲಿ 49.949 ಎಕರೆ ಭೂಮಿಯನ್ನು ಹರಾಜು ಹಾಕುವ ಮೂಲಕ ತೆಲಂಗಾಣ ಸರ್ಕಾರ 2,000 ಕೋಟಿ ರೂ.ಗಳ ಆದಾಯ ಗಳಿಸಿದೆ. ಹೈದರಾಬಾದ್ ಮೆಟ್ರೋಪಾಲಿಟನ್ ಡೆವಲಪ್ಮೆಂಟ್ ಅಥಾರಿಟಿ (ಹೆಚ್‌ಎಂಡಿಎ) ಅಭಿವೃದ್ಧಿಪಡಿಸಿದ ಪ್ಲಾಟ್‌ಗಳ ಇ - ಹರಾಜನ್ನು ಕೇಂದ್ರ ಸರ್ಕಾರದ ಉದ್ಯಮವಾದ ಎಂಎಸ್‌ಟಿಸಿ ಲಿಮಿಟೆಡ್ ನಡೆಸಿತು.

ಹೆಚ್‌ಎಂಡಿಎ ಎಕರೆಗೆ 25 ಕೋಟಿ ರೂಪಾಯಿ ನಿಗದಿಪಡಿಸಿತ್ತು. 49.949 ಎಕರೆ ಭೂಮಿಯನ್ನು 8 ಸಂಸ್ಥೆಗಳು ಖರೀದಿಸಿದವು. ಆಕ್ವಾ ಸ್ಪೇಸ್ ಡೆವಲಪರ್ಸ್ 350.68 ಕೋಟಿ ರೂ. ನೀಡಿ 8.946 ಎಕರೆ ಜಮೀನನ್ನು ಖರೀದಿಸಿದೆ. ಎಂಎಸ್‌ಎನ್ ಲ್ಯಾಬೊರೇಟರೀಸ್ ಪ್ರೈವೇಟ್ ಲಿಮಿಟೆಡ್‌ನ ಮನ್ನೆ ಸತ್ಯನಾರಾಯಣ ರೆಡ್ಡಿ 7.721 ಎಕರೆ ಜಮೀನಿಗೆ 325.83 ಕೋಟಿ ರೂ., ರಾಜಪುಷ್ಪಾ ಪ್ರಾಪರ್ಟೀಸ್ ಪ್ರೈವೇಟ್ ಲಿಮಿಟೆಡ್ 7.755 ಎಕರೆ ಜಾಗಕ್ಕೆ 328.81 ಕೋಟಿ ರೂ., ಆಕ್ವಾ ಸ್ಪೇಸ್ ಡೆವಲಪರ್‌ಗಳು 7.738 ಎಕರೆಗೆ 281.66 ಕೋಟಿ ರೂ. ನೀಡಿ ಖರೀದಿಸಿವೆ.

ವಾರ್ಸಿಹ್ನಿ ಎಜುಕೇಶನ್ ಮ್ಯಾನೇಜ್​ಮೆಂಟ್​ ಪ್ರೈವೇಟ್ ಲಿಮಿಟೆಡ್ 7.575 ಎಕರೆ ಭೂಮಿಗೆ 296 ಕೋಟಿ ರೂ., ಪ್ರೆಸ್ಟೀಜ್ ಎಸ್ಟೇಟ್ ಯೋಜನೆಗಳು 7.564 ಎಕರೆ ಜಾಗಕ್ಕೆ 285.92 ಕೋಟಿ ರೂ. ನೀಡಿ ಖರೀದಿ ಮಾಡಿದ್ದಾರೆ.

ಬಿಡ್​ ವೇಳೆ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಮತ್ತು ನಗರಸಭೆ ಆಡಳಿತ ಮತ್ತು ನಗರಾಭಿವೃದ್ಧಿ ಸಚಿವ ಕೆ.ಟಿ. ರಾಮರಾವ್ ಉಪಸ್ಥಿತರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.