ETV Bharat / bharat

ತೆಲಂಗಾಣದಲ್ಲಿ ಆಪರೇಷನ್​ ಕಮಲ ಆರೋಪ: ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ - ACB court sends accused to judicial remand

ತೆಲಂಗಾಣದಲ್ಲಿ ಬಿಜೆಪಿ ಮತ್ತು ಟಿಆರ್​ಎಸ್​ ಮಧ್ಯೆ ಆಪರೇಷನ್​ ಕಮಲ ಫೈಟ್​ ಜೋರಾಗಿದೆ. ಆಫರ್​ ನೀಡಿದ ಬಗ್ಗೆ ಟಿಆರ್​ಎಸ್​ ಹೈಕೋರ್ಟ್ ಮೆಟ್ಟಿಲೇರಿದ್ದರೆ, ಸಿಬಿಐ ತನಿಖೆ ನಡೆಸಲು ಬಿಜೆಪಿ ರಿಟ್​ ಅರ್ಜಿ ಸಲ್ಲಿಸಿದೆ.

poaching-case-to-surrender
ತೆಲಂಗಾಣ ಹೈಕೋರ್ಟ್​ ಆದೇಶ
author img

By

Published : Oct 30, 2022, 10:59 AM IST

ಹೈದರಾಬಾದ್: ತೆಲಂಗಾಣದಲ್ಲಿ ಆಡಳಿತದಲ್ಲಿರುವ ಟಿಆರ್​ಎಸ್​​ ಶಾಸಕರ 'ಆಪರೇಷನ್​ ಕಮಲ' ಯತ್ನ ಕೇಸ್​ ತಿರುವು ಪಡೆದಿದೆ. ಬಂಧಿತರಾಗಿ, ಬಿಡುಗಡೆಯಾಗಿದ್ದ ಮೂವರು ಆರೋಪಿಗಳನ್ನು ಮತ್ತೆ ವಶಕ್ಕೆ ಪಡೆಯಲಾಗಿದ್ದು, 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಇದಕ್ಕೂ ಮೊದಲು ಹೈಕೋರ್ಟ್​ ಆರೋಪಿಗಳ ಮರುವಶ ಅಥವಾ ಶರಣಾಗತಿಗೆ ಆದೇಶಿಸಿತ್ತು.

ಬಿಜೆಪಿಯ ನಾಲ್ವರು, ಟಿಆರ್​ಎಸ್​ ಶಾಸಕರನ್ನು ಭೇಟಿ ಮಾಡಿ ಪಕ್ಷಾಂತರಕ್ಕೆ ಆಮಿಷ ಒಡ್ಡಿದ ಬಗ್ಗೆ ದೂರು ದಾಖಲಾಗಿತ್ತು. ಬಳಿಕ ಬಿಜೆಪಿ ಕಡೆಯ ನಾಲ್ವರನ್ನು ಬಂಧಿಸಲಾಗಿತ್ತು. ಸಾಕ್ಷ್ಯಾಧಾರಗಳಿಲ್ಲದೇ ಬಂಧಿಸಲಾಗಿದೆ ಎಂದು ಬಿಜೆಪಿ ವಾದಿಸಿತ್ತು. ಬಳಿಕ ವಿಚಾರಣಾ ನ್ಯಾಯಾಲಯದಲ್ಲಿ ವಾದ ನಡೆದು ಮೂವರನ್ನು ಬಿಡುಗಡೆ ಮಾಡಲಾಗಿತ್ತು.

ಇದನ್ನೂ ಓದಿ: ಟಿಆರ್​ಎಸ್​ ಶಾಸಕರ ಖರೀದಿ ಯತ್ನ ಆರೋಪ: ಮಹತ್ವದ ಆಡಿಯೋ ಸಂಭಾಷಣೆ ವೈರಲ್​

ಇದರ ವಿರುದ್ಧ ಟಿಆರ್​ಎಸ್​ ಹೈಕೋರ್ಟ್​ ಮೆಟ್ಟಿಲೇರಿತ್ತು. ವಿಚಾರಣೆ ನಡೆಸಿದ ಪೀಠ, ಕೆಳ ಹಂತದ ಕೋರ್ಟ್​ ಆದೇಶವನ್ನು ರದ್ದುಗೊಳಿಸಿ, ಆಮಿಷ ಒಡ್ಡಿದ ಆರೋಪಿಗಳನ್ನು ಮತ್ತೆ ವಶಕ್ಕೆ ಪಡೆಯಲು ಆದೇಶಿಸಿತ್ತು. ಇಲ್ಲವಾದಲ್ಲಿ ಅವರೇ ಪೊಲೀಸರ ಎದುರು ಶರಣಾಗುವಂತೆಯೂ ಸೂಚಿಸಿತ್ತು.

ಇದೀಗ ಮೂವರು ಆರೋಪಿಗಳನ್ನು ಮರುವಶಕ್ಕೆ ಪಡೆದಿರುವ ಪೊಲೀಸರು, ಭ್ರಷ್ಟಾಚಾರ ನಿಗ್ರಹ ದಳದ ಎದುರು ಹಾಜರುಪಡಿಸಿದ್ದಾರೆ. ಬಳಿಕ ಮೂವರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ, ಚಂಚಲಗೂಡ ಜೈಲಿಗೆ ಕಳುಹಿಸಿದ್ದಾರೆ.

ಸಿಬಿಐ ತನಿಖೆಗೆ ಬಿಜೆಪಿ ಅರ್ಜಿ: ಈ ಮಧ್ಯೆ ತನ್ನ ಮೇಲೆ ಕೇಳಿಬಂದ ಆಪರೇಷನ್​ ಕಮಲ ಆರೋಪದ ವಿರುದ್ಧ ಸಿಬಿಐ ತನಿಖೆ ನಡೆಸಬೇಕು ಎಂದು ಕೋರಿ ಕೇಸರಿ ಪಡೆ ಹೈಕೋರ್ಟ್​ಗೆ ರಿಟ್​ ಅರ್ಜಿ ಸಲ್ಲಿಸಿತ್ತು. ಇದರ ವಿಚಾರಣೆಯನ್ನು ನವೆಂಬರ್ 4 ಕ್ಕೆ ಮುಂದೂಡಲಾಗಿದೆ. ಅಲ್ಲಿಯವರೆಗೆ ಪ್ರಕರಣದ ತನಿಖೆಯನ್ನು ರದ್ದುಗೊಳಿಸಲಾಗಿದೆ.

ಪ್ರಕರಣವೇನು?: ಟಿಆರ್​ಎಸ್​ ಶಾಸಕ ರೋಹಿತ್ ರೆಡ್ಡಿ ಎಂಬುವವರು ತಮ್ಮ ಶಾಸಕರನ್ನು ಸೆಳೆಯಲು ಬಿಜೆಪಿ ಕಡೆಯವರು 250 ಕೋಟಿ ರೂಪಾಯಿ ಆಮಿಷ ಒಡ್ಡಿದ್ದಾರೆ. ಟಿಆರ್​ಎಸ್​ ತೊರೆದು ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದರೆ, ಪ್ರತಿ ಶಾಸಕನಿಗೆ 100 ಕೋಟಿ ರೂ ನೀಡುವುದಾಗಿ ಆಫರ್​ ಬಂದಿದೆ ಎಂದು ದೂರು ನೀಡಿದ್ದರು.

ಇದನ್ನೂ ಓದಿ:

ಟಿಆರ್​ಎಸ್ ಶಾಸಕರ ಖರೀದಿ ಯತ್ನ ಪ್ರಕರಣ: ದೇವಸ್ಥಾನದಲ್ಲಿ ಆಣೆ ಮಾಡಿದ ಬಿಜೆಪಿ ರಾಜ್ಯಾಧ್ಯಕ್ಷ

ಪ್ರತಿ ಶಾಸಕರಿಗೆ 100 ಕೋಟಿ.. ಬಿಜೆಪಿ ಖರೀದಿಗೆ ಗುತ್ತಿಗೆ ನೀಡಿದೆ ಎಂದು ಟಿಆರ್​ಎಸ್​​ ಆರೋಪ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.