ETV Bharat / bharat

ಮುಖೇಶ್​ ಅಂಬಾನಿಗೆ ಇಮೇಲ್​ ಬೆದರಿಕೆ ಸಂದೇಶ ಪ್ರಕರಣ: ತೆಲಂಗಾಣ ಮೂಲದ ವ್ಯಕ್ತಿ ಬಂಧನ - 19 year old Ganesh Vanapardhi

A telangana Man arrested for the threatening message to Ambani: ಖ್ಯಾತ ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿಗೆ ಇಮೇಲ್​ ಮೂಲಕ ಸತತ 3 ಬಾರಿ ಬೆದರಿಕೆ ಸಂದೇಶ ಕಳುಹಿಸುವ ಮೂಲಕ ಹಣಕ್ಕೆ ಬೇಡಿಕೆ ಇಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲಂಗಾಣ ಮೂಲದ ವ್ಯಕ್ತಿಯನ್ನು ಮುಂಬೈ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.

Ambani
ಖ್ಯಾತ ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿ
author img

By ETV Bharat Karnataka Team

Published : Nov 4, 2023, 7:47 PM IST

ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಹಾಗೂ ಖ್ಯಾತ ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿಗೆ ಇಮೇಲ್ ಮೂಲಕ ಬೆದರಿಕೆ ಸಂದೇಶ ಕಳುಹಿಸಿದ್ದ ಆರೋಪದ ಮೇಲೆ ತೆಲಂಗಾಣ ಮೂಲದ ವ್ಯಕ್ತಿಯನ್ನು ಮಹಾರಾಷ್ಟ್ರ ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಸಂದೇಶದಲ್ಲಿ ಬೆದರಿಕೆ ಅಲ್ಲದೇ ಕೋಟಿ ಕೋಟಿ ಹಣಕ್ಕೆ ಬೇಡಿಕೆ ಇಡಲಾಗಿತ್ತು. ಈ ಹಿನ್ನೆಲೆಯಲ್ಲಿ 19 ವರ್ಷದ ಗಣೇಶ್ ವನಪರ್ಧಿಯನ್ನು ಪೊಲೀಸರು ಬಂಧಿಸಿದ್ದಾರೆ. ಅಕ್ಟೋಬರ್ 28 ಮತ್ತು ನವೆಂಬರ್ 3ರ ನಡುವೆ ಮುಖೇಶ್​ ಅಂಬಾನಿಗೆ 3 ಬೆದರಿಕೆಯ ಸಂದೇಶ ಬಂದಿದ್ದು, ಇದನ್ನು ಕಳುಹಿಸಿದವನು ತನ್ನನು ತಾನು 'ಶಾದಾಬ್ ಖಾನ್' ಎಂದು ಪರಿಚಯಿಸಿಕೊಂಡಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈತ 400 ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದ. ಹಿಂದಿನ ಇಮೇಲ್‌ಗಳನ್ನು ನಿರ್ಲಕ್ಷಿಸಿದರೆ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಮುಖೇಶ್ ಅಂಬಾನಿಗೆ ಸಂದೇಶ ಕಳುಹಿಸಿ ಎಚ್ಚರಿಕೆ ನೀಡಿದ್ದ. ಇದೀಗ ಮುಂಬೈ ಪೊಲೀಸರು ಆರೋಪಿ ವನಪರ್ಧಿಯನ್ನು ಬಂಧಿಸಿ ಶನಿವಾರ ಮುಂಬೈನ ಕೆಳ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ ಆರೋಪಿಯನ್ನು ನವೆಂಬರ್ 8 ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ಹಿಂದಿನ ಇಮೇಲ್‌ಗಳನ್ನು ನಿರ್ಲಕ್ಷಿಸಿದರೆ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಹೊಸ ಬೆದರಿಕೆ ಇಮೇಲ್‌ಗಳು ಬಂದ ಕೆಲವೇ ದಿನಗಳಲ್ಲಿ ಆರೋಪಿಯ ಬಂಧನವಾಗಿದೆ.

ಇದಕ್ಕೂ ಹಿಂದೆ, ಅಂಬಾನಿ ಅವರಿಗೆ ಇಮೇಲ್ ಮೂಲಕ 20 ಕೋಟಿ ರೂಪಾಯಿ ನೀಡಲು ಬೇಡಿಕೆ ಇಟ್ಟಿದ್ದು ಇದು ವಿಫಲವಾದರೆ, ಶೂಟ್​ ಮಾಡುವುದಾಗಿ ಜೀವ ಬೆದರಿಕೆ ಹಾಕಲಾಗಿತ್ತು. ಪ್ರತಿ ಬಾರಿ ಹೊಸ ಇಮೇಲ್ ಕಳುಹಿಸಿದಾಗ ಬೇಡಿಕೆ ಇಡುತ್ತಿದ್ದ ಹಣದ ಮೌಲ್ಯ 200 ಕೋಟಿ , 400 ಕೋಟಿಗೆ ಹೆಚ್ಚುತ್ತಲೇ ಹೋಗಿದೆ. ಹೊಸ ಇಮೇಲ್ ಸಂದೇಶ ಕಳುಹಿಸುವಾಗ ಹಿಂದಿನ ಇಮೇಲ್‌ಗೆ ಪ್ರತಿಕ್ರಿಯೆ ನೀಡದನ್ನು ಉಲ್ಲೇಖಿಸಿ ಹಣದ ಬೇಡಿಕೆಯನ್ನು ಹೆಚ್ಚಿಸುತ್ತಿದ್ದ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.

ಅಕ್ಟೋಬರ್​ 28 ರಂದು ಬೆದರಿಕೆಯ ಮೊದಲ ಇಮೇಲ್​ ಸಂದೇಶ ಬಂದಿತ್ತು. ಇದಾದ ಬಳಿಕ ಮುಖೇಶ್ ಅಂಬಾನಿ ಅವರ ಭದ್ರತಾ ಉಸ್ತುವಾರಿ ದೂರಿನ ಆಧಾರದ ಮೇಲೆ ಮುಂಬೈನ ಗಾಮ್‌ದೇವಿ ಪೊಲೀಸರು ಅಪರಿಚಿತ ವ್ಯಕ್ತಿಯ ವಿರುದ್ಧ ಸೆಕ್ಷನ್ 387 ರ ಅಡಿ ಮತ್ತು ಭಾರತೀಯ ದಂಡ ಸಂಹಿತೆಯ (IPC) 506 ರ ಕ್ರಿಮಿನಲ್​ ಬೆದರಿಕೆಯ ಅಡಿ (2) ಪ್ರಕರಣವನ್ನು ದಾಖಲಿಸಿದ್ದರು.

ಇದನ್ನೂ ಓದಿ: Death threat to Ambani: 20 ಕೋಟಿ ಕೊಡಲೇಬೇಕು.. ಮುಖೇಶ್​ ಅಂಬಾನಿಗೆ ಮತ್ತೊಮ್ಮೆ ಬೆದರಿಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.