ನವದೆಹಲಿ: ತೆಲಂಗಾಣ ಐಟಿ ಸಚಿವ ಕೆಟಿಆರ್ ಮಂಗಳವಾರ ವಿಶ್ವ ಆರ್ಥಿಕ ವೇದಿಕೆಯ (ಡಬ್ಲ್ಯುಇಎಫ್) ಟಾಪ್ 30 ಪ್ರಭಾವಿಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ರಾವ್ ಅವರ ಹೊರತಾಗಿ, ಆಮ್ ಆದ್ಮಿ ಪಕ್ಷದ ನಾಯಕ ಮತ್ತು ವಕ್ತಾರ ರಾಘವ್ ಚಡ್ಡಾ ಅವರು ಪಟ್ಟಿಯಲ್ಲಿ ಕಾಣಿಸಿಕೊಂಡ ಇತರ ಭಾರತೀಯರಾಗಿದ್ದಾರೆ.
ಸಚಿವ ಕೆಟಿಆರ್ಎರಡು ಸಾಮಾಜಿಕ ಮಾಧ್ಯಮದ ಹ್ಯಾಂಡಲ್‌ಗಳನ್ನು ಹೊಂದಿದ್ದಾರೆ. ಅವರ ವೈಯಕ್ತಿಕ ಖಾತೆ ಮತ್ತು ತೆಲಂಗಾಣ ಸಚಿವಾಲಯದ ಟ್ವಿಟರ್ ಹ್ಯಾಂಡಲ್ ಅನ್ನು ಕ್ರಮವಾಗಿ ಪಟ್ಟಿಯಲ್ಲಿ 12 ಮತ್ತು 22 ಸ್ಥಾನದಲ್ಲಿದೆ ಎಂದು ಗುರುತಿಸಲಾಗಿದೆ. ಇನ್ನು ರಾಘವ್ ಚಡ್ಡಾ 23ನೇ ಸ್ಥಾನದಲ್ಲಿದ್ದಾರೆ. ಈ ಪಟ್ಟಿಯು ಜಾಗತಿಕವಾಗಿ ಗುರುತಿಸಬಹುದಾದ ಹೆಸರುಗಳಾದ ಹವಾಮಾನ ಕಾರ್ಯಕರ್ತ ಗ್ರೆಟಾ ಥನ್‌ಬರ್ಗ್, ಸ್ಥಳೀಯ ಹಕ್ಕುಗಳ ರಕ್ಷಕ ಹೆಲೆನಾ ಗುವಾಲಿಂಗ ಮತ್ತು ಯುರೋಪಿಯನ್ ಕಮಿಷನ್ ಅಧ್ಯಕ್ಷ ಉರ್ಸುಲಾ ವಾನ್ ಡೆರ್ ಲೇಯೆನ್ ಇತರರನ್ನು ಒಳಗೊಂಡಿದೆ.
ಈ ಮಧ್ಯೆ ಐಟಿ ಸಚಿವರು ಜನವರಿ 16 ರಂದು ಒಳ್ಳೆಯ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಅಪೊಲೊ ಇನೋವೇಷನ್ ಲಿಮಿಟೆಡ್ ಹೈದರಾಬಾದ್‌ನಲ್ಲಿ ಡಿಜಿಟಲ್ ಇನ್ನೋವೇಶನ್ ಸೆಂಟರ್ ಅನ್ನು ಸ್ಥಾಪಿಸಲು ತೆಲಂಗಾಣ ಸರ್ಕಾರದೊಂದಿಗೆ ಕೈಜೋಡಿಸಿದೆ ಎಂದು ಅವರು ತಮ್ಮ ಟ್ವಿಟರ್ನಲ್ಲಿ ಮಾಹಿತಿ ನೀಡಿದ್ದಾರೆ.
ಪೆಪ್ಸಿಕೋ, ಮಾಸ್ಟರ್‌ಕಾರ್ಡ್ ಮತ್ತು ಗೋದ್ರೇಜ್ ಮತ್ತು ಇತರರೊಂದಿಗೆ ಇದೇ ರೀತಿಯ ಒಪ್ಪಂದಗಳ ಹೊರತಾಗಿ, ವಿಶ್ವ ಆರ್ಥಿಕ ವೇದಿಕೆಯು ಹೈದರಾಬಾದ್‌ನಲ್ಲಿ C4IR (ನಾಲ್ಕನೇ ಕೈಗಾರಿಕಾ ಕ್ರಾಂತಿಯ ಕೇಂದ್ರ) ಅನ್ನು ಸ್ಥಾಪಿಸುವುದಾಗಿ ಘೋಷಿಸಿದೆ. ಇದು ಆರೋಗ್ಯ ಮತ್ತು ಜೀವ ವಿಜ್ಞಾನ ಕ್ಷೇತ್ರಗಳ ಅಭಿವೃದ್ಧಿಗೆ ಶ್ರಮಿಸಲಿದೆ ಎಂದು ಕೆಟಿಆರ್ ಸೋಮವಾರವಷ್ಟೇ ಘೋಷಿಸಿದ್ದರು. ಮತ್ತೊಂದೆಡೆ ಚಡ್ಡಾ ಅವರು ಈವೆಂಟ್‌ನ ಭಾಗವಾಗಲು ಉತ್ಸುಕರಾಗಿರುವುದಾಗಿ ಹೇಳಿದ್ದಾರೆ. WEF ಸಂಸ್ಥಾಪಕ ಪ್ರೊ.ಕ್ಲಾಸ್ ಶ್ವಾಬ್ ಅವರೊಂದಿಗೆ ಚಿತ್ರವನ್ನು ಚಡ್ಡಾ ಹಂಚಿಕೊಂಡಿದ್ದಾರೆ.
ದಾವೋಸ್-ಕ್ಲೋಸ್ಟರ್ಸ್: ಈ ನಡುವೆ ವಿಶ್ವ ಆರ್ಥಿಕ ವೇದಿಕೆಯ ಸಮೀಕ್ಷೆಯಲ್ಲಿ ಸುಮಾರು ಮೂರನೇ ಎರಡರಷ್ಟು ಖಾಸಗಿ ಮತ್ತು ಸಾರ್ವಜನಿಕ ವಲಯದ ಪ್ರಮುಖ ಅರ್ಥಶಾಸ್ತ್ರಜ್ಞರು 2023 ರಲ್ಲಿ ಜಾಗತಿಕ ಆರ್ಥಿಕ ಹಿಂಜರಿತ ಉಂಟಾಗುವ ಸಾಧ್ಯತೆಯಿದೆ ಎಂದು ಭವಿಷ್ಯ ನುಡಿದಿದ್ದಾರೆ. ಸುಮಾರು 18 ಪ್ರತಿಶತದಷ್ಟು ಜನರು ಆರ್ಥಿಕ ಹಿಂಜರಿತದ ಸಾಧ್ಯತೆ ಹೆಚ್ಚಾಗಿದೆ ಎಂದು ಹೇಳಿದ್ದಾರೆ. ಸಮೀಕ್ಷೆಯಲ್ಲಿ ಪಾಲ್ಗೊಂಡು ಪ್ರತಿಕ್ರಿಯೆ ನೀಡಿದ ಸುಮಾರು ಮೂರನೇ ಎರಡರಷ್ಟು ಜನ 2023 ರಲ್ಲಿ ಜಾಗತಿಕ ಆರ್ಥಿಕ ಹಿಂಜರಿತದ ಸಾಧ್ಯತೆಯನ್ನು ಒಪ್ಪಿದ್ದಾರೆ.
ಇದರಲ್ಲಿ ಶೇಕಡಾ 18 ರಷ್ಟು ಜನರು ಇದು ಅತ್ಯಂತ ಸಾಧ್ಯತೆಯಿದೆ ಎಂದು ಪರಿಗಣಿಸುತ್ತಾರೆ. ಈ ಹಿಂದೆ ಸೆಪ್ಟೆಂಬರ್ 2022 ರಲ್ಲಿ ನಡೆಸಲಾದ ಸಮೀಕ್ಷೆಯಲ್ಲಿ ಹೇಳಿದ್ದಕ್ಕಿಂತ ಎರಡು ಪಟ್ಟು ಹೆಚ್ಚು ಜನ ಈ ಬಾರಿ ಹಿಂಜರಿತ ಉಂಟಾಗುವ ಸಾಧ್ಯತೆ ಒಪ್ಪಿದ್ದಾರೆ ಎಂದು ಜನವರಿ 2023 ರಲ್ಲಿ ವಿಶ್ವ ಆರ್ಥಿಕ ವೇದಿಕೆಯ ಹೊಸ ಆರ್ಥಿಕತೆ ಮತ್ತು ಸಮಾಜಕ್ಕಾಗಿ ನಡೆದ ಮುಖ್ಯ ಅರ್ಥಶಾಸ್ತ್ರಜ್ಞರ ಅಂದಾಜು ಸಮೀಕ್ಷೆ ಹೇಳಿದೆ.
ಅದಾಗ್ಯೂ ಅಭಿಪ್ರಾಯಗಳು ವಿಭಿನ್ನವಾಗಿವೆ. ಪ್ರತಿಕ್ರಿಯಿಸಿದವರಲ್ಲಿ ಮೂರನೇ ಒಂದು ಭಾಗದಷ್ಟು ಜನರು ಜಾಗತಿಕ ಆರ್ಥಿಕ ಹಿಂಜರಿತವನ್ನು ಈ ವರ್ಷ ಅಸಂಭವ ಎಂದು ಪರಿಗಣಿಸಿದ್ದಾರೆ. ಸಮೀಕ್ಷೆಯು ಪ್ರಸ್ತುತ ಆರ್ಥಿಕ ಪರಿಸ್ಥಿತಿಯನ್ನು ಸಾರಾಂಶ ಮಾಡುವ ಗುರಿಯನ್ನು ಹೊಂದಿದೆ. ಜೊತೆಗೆ ಭೌಗೋಳಿಕ-ಆರ್ಥಿಕ ಮತ್ತು ಭೌಗೋಳಿಕ ರಾಜಕೀಯ ಘಟನೆಗಳಿಂದ ಜಾಗತಿಕ ಆರ್ಥಿಕತೆಗೆ ಉಂಟಾಗುತ್ತಿರುವ ಆಘಾತಗಳಿಗೆ ಪ್ರತಿಕ್ರಿಯೆಯಾಗಿ ನೀತಿ ನಿರೂಪಕರು ಮತ್ತು ವ್ಯಾಪಾರ ಮುಖಂಡರು ಮುಂದೆ ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳಬಹುದು ಎಂಬುದನ್ನು ಗುರುತಿಸುತ್ತದೆ. ಸಮೀಕ್ಷೆಯನ್ನು ನವೆಂಬರ್-ಡಿಸೆಂಬರ್ 2022 ರಲ್ಲಿ ನಡೆಸಲಾಗಿದೆ.