ತೆಲಂಗಾಣ : ರಾಜ್ಯದಲ್ಲಿ ಮೂರನೇ ದಿನವೂ ಭಾರಿ ಮಳೆ ಮುಂದುವರಿದಿದೆ. ಪರಿಣಾಮ, ರಾಜ್ಯ ಸರ್ಕಾರವು ಇಂದು ಮತ್ತು ನಾಳೆ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಲು ನಿರ್ಧರಿಸಿದೆ. ಭದ್ರಾಚಲಂನಲ್ಲಿ ನೀರಿನ ಮಟ್ಟ ಹೆಚ್ಚುತ್ತಿದ್ದು, ತಗ್ಗು ಪ್ರದೇಶಗಳ ಜನರಿಗೆ ಎಚ್ಚರಿಕೆ ನೀಡಲಾಗಿದೆ. ಹಾಗೆಯೇ, ಗೋದಾವರಿ ಹರಿವು ಸಹ ಅಧಿಕವಾಗಿದ್ದು, ಪ್ರವಾಹ ಸ್ಥಿತಿ ಎದುರಾಗಿದೆ.
ವರುಣನ ಆರ್ಭಟಕ್ಕೆ ಸಿದ್ದಿಪೇಟೆ ಜಿಲ್ಲೆಯ ಕೋಹೆಡ ಮಂಡಲದ ಬಸ್ವಾಪುರದಲ್ಲಿ ಸಿದ್ದಿಪೇಟೆ-ಹನುಮಕೊಂಡ ಮುಖ್ಯರಸ್ತೆ ಜಲಾವೃತಗೊಂಡಿದೆ. ಮೋಯ ತುಮ್ಮೆದ ಹೊಳೆ ತುಂಬಿ ಹರಿಯುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಸಂಚಾರ ಸ್ಥಗಿತಗೊಳಿಸಿದ್ದಾರೆ.
-
#WATCH | Severe water logging witnessed at Sion area in Mumbai, Maharashtra. pic.twitter.com/58KMMwyzGj
— ANI (@ANI) July 19, 2023 " class="align-text-top noRightClick twitterSection" data="
">#WATCH | Severe water logging witnessed at Sion area in Mumbai, Maharashtra. pic.twitter.com/58KMMwyzGj
— ANI (@ANI) July 19, 2023#WATCH | Severe water logging witnessed at Sion area in Mumbai, Maharashtra. pic.twitter.com/58KMMwyzGj
— ANI (@ANI) July 19, 2023
ಭದ್ರಾದ್ರಿ ಕೊತಗುಡೆಂ ಜಿಲ್ಲೆಯ ತಾಳಿಪೇರು ಜಲಾಶಯದಿಂದ 21 ಗೇಟ್‌ಗಳಲ್ಲಿ 60,000 ಕ್ಯೂಸೆಕ್ ನೀರನ್ನು ಗೋದಾವರಿಗೆ ಬಿಡಲಾಗುತ್ತಿದೆ. ಮೇಲಿಂದ ಮೇಲೆ ಬರುತ್ತಿರುವ ಪ್ರವಾಹದಿಂದಾಗಿ ಭದ್ರಾಚಲಂನಲ್ಲಿ ಗೋದಾವರಿ ನೀರಿನ ಮಟ್ಟ ಕ್ರಮೇಣ ಹೆಚ್ಚುತ್ತಿದ್ದು, ಬೆಳಗ್ಗೆ 9 ಗಂಟೆಗೆ ನೀರಿನ ಮಟ್ಟ 40 ಅಡಿ ತಲುಪಿದೆ. ಕಾಳೇಶ್ವರಂ, ಇಂದ್ರಾವತಿ, ಪ್ರಾಣಹಿತ, ತಾಳಿಪೇರು ಕಡೆಯಿಂದ ನೀರು ಹರಿದು ಬರುವುದರಿಂದ ನೀರಿನ ಮಟ್ಟ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ಜೊತೆಗೆ, ತಗ್ಗು ಪ್ರದೇಶದ ಜನರು ಜಾಗೃತರಾಗುವಂತೆ ಭದ್ರಾದ್ರಿ ಜಿಲ್ಲಾಧಿಕಾರಿ ಪ್ರಿಯಾಂಕಾ ತಿಳಿಸಿದ್ದು, ಪ್ರವಾಹ ಪೀಡಿತ ಗ್ರಾಮಗಳಲ್ಲಿ ಪುನರ್ವಸತಿ ಕೇಂದ್ರಗಳನ್ನು ಸ್ಥಾಪಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ವಾರಂಗಲ್ ಜಿಲ್ಲೆಯ ವರ್ಧನ್ನಪೇಟ್ ಮಂಡಲದ ರಾಮೋಜಿ ಕುಮ್ಮರಿಗುಡೆಂನಲ್ಲಿ ಮಳೆಗೆ ಮನೆಯೊಂದು ಕುಸಿದಿದೆ. ಮನೆಯಲ್ಲಿದ್ದವರೆಲ್ಲರೂ ಕೃಷಿ ಕೆಲಸಕ್ಕೆ ತೆರಳಿದ್ದಾಗ ಅವಘಡ ಸಂಭವಿಸಿದ್ದು, ಯಾವುದೇ ಪ್ರಾಣಹಾನಿಯಾಗಿಲ್ಲ. ಹೆಚ್ಚು ಮಳೆಯಿಂದಾಗಿ ರಾಮಗುಂಡಂ ಮೇಲ್ಮೈ ಗಣಿಗಳಲ್ಲಿ ಕಲ್ಲಿದ್ದಲು ಉತ್ಪಾದನೆ ಸ್ಥಗಿತಗೊಂಡಿದೆ. ಮಣ್ಣು ಶೇಖರಣೆಯಾಗಿ ಯಂತ್ರೋಪಕರಣಗಳು ಸಂಚರಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದ್ದು, 70,000 ಟನ್ ಕಲ್ಲಿದ್ದಲು ಉತ್ಪಾದನೆ ಸ್ಥಗಿತಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
-
#WATCH | Severe water logging witnessed at King Circle area in Mumbai, Maharashtra. pic.twitter.com/0Lsc2t7jF5
— ANI (@ANI) July 19, 2023 " class="align-text-top noRightClick twitterSection" data="
">#WATCH | Severe water logging witnessed at King Circle area in Mumbai, Maharashtra. pic.twitter.com/0Lsc2t7jF5
— ANI (@ANI) July 19, 2023#WATCH | Severe water logging witnessed at King Circle area in Mumbai, Maharashtra. pic.twitter.com/0Lsc2t7jF5
— ANI (@ANI) July 19, 2023
ಇನ್ನು ಮುಲುಗು ಜಿಲ್ಲೆಯ ಎತೂರುನಗರಂ ಮಂಡಲದ ಕೆಲ ಗ್ರಾಮಗಳಿಗೆ ಮುಲುಗು ಜಿಲ್ಲಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನದಿಗಳು ಉಕ್ಕಿ ಹರಿಯುತ್ತಿರುವುದರಿಂದ ಸಂಚಾರ ಸ್ಥಗಿತಗೊಂಡಿರುವ ಚಲಪಾಕ, ಎಲಿಶೆಟ್ಟಿಪಲ್ಲಿ ಗ್ರಾಮಗಳಲ್ಲಿ ಪರಿಶೀಲನೆ ನಡೆಸಲಾಯಿತು. ಪ್ರವಾಹದ ಸ್ಥಿತಿ ಹೆಚ್ಚಾದರೆ 150 ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಇದನ್ನೂ ಓದಿ : ತೆಲಂಗಾಣದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಭಾರಿ ಮಳೆ ಸಾಧ್ಯತೆ
ಮಹಾರಾಷ್ಟ್ರದಲ್ಲೂ ಭಾರಿ ಮಳೆ : ಮಹಾರಾಷ್ಟ್ರದ ಮುಂಬೈನ ಕಿಂಗ್ ಸರ್ಕಲ್, ಸಿಯೋನ್ ಪ್ರದೇಶ ಭಾರಿ ಮಳೆಯಿಂದಾಗಿ ಜಲಾವೃತವಾಗಿದೆ. ಹಾಗೆಯೇ, ರಾಯಗಢ ಜಿಲ್ಲೆಯ ಖಲಾಪುರ ತಾಲೂಕಿನ ಇರ್ಶಲವಾಡಿ ಗ್ರಾಮದಲ್ಲಿ ಭೂಕುಸಿತ ಸಂಭವಿಸಿದ್ದು, ಎನ್‌ಡಿಆರ್‌ಎಫ್‌ನಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ರಾಯಗಢ ಪೊಲೀಸರು ನೀಡಿದ ಮಾಹಿತಿ ಪ್ರಕಾರ, ನಾಲ್ವರು ಸಾವನ್ನಪ್ಪಿದ್ದಾರೆ ಮತ್ತು ಮೂವರು ಗಾಯಗೊಂಡಿದ್ದಾರೆ.
ಹಿಮಾಚಲ ಪ್ರದೇಶದಲ್ಲಿ ಮುಂದುವರೆದ ಮಳೆಯಾರ್ಭಟ: ರಾಜ್ಯದಲ್ಲಿ ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ರಸ್ತೆಗಳು ಜಲಾವೃತವಾಗಿದ್ದು, ಮನೆಗಳು ಕುಸಿದಿವೆ. ಶಾಲೆಗಳಿಗೆ ರಜೆ ನೀಡಲಾಗಿದೆ. ಮಳೆ, ಪ್ರವಾಹ ಮತ್ತು ಭೂಕುಸಿತದಿಂದ ರಾಜ್ಯದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಕಳೆದ 26 ದಿನಗಳಲ್ಲಿ 130 ದಾಟಿದೆ, ಬುಧವಾರ ಐದು ಹೊಸ ಸಾವುಗಳು ವರದಿಯಾಗಿವೆ.
ಇದನ್ನೂ ಓದಿ : 6 ತಾಸಲ್ಲಿ 300 ಮಿಮೀ! ಗುಜರಾತ್‌ನಲ್ಲಿ ಧಾರಾಕಾರ ಮಳೆ; ಮುಳುಗಿದ ವಾಹನಗಳು- ವಿಡಿಯೋ