ETV Bharat / bharat

ತೆಲಂಗಾಣದಲ್ಲಿ ಮಹಿಳೆಯರಿಗೆ ಉಚಿತ ಬಸ್​ ಯೋಜನೆ ಮಾರ್ಗಸೂಚಿ ಇಂದು ಬಿಡುಗಡೆ ಸಾಧ್ಯತೆ

ಈಗಾಗಲೇ ಕರ್ನಾಟದಲ್ಲಿ ಯೋಜನೆ ಜಾರಿ ಹೇಗೆ ನಡೆದಿದೆ. ಇದರ ಪರಿಣಾಮ ಏನು ಎಂಬ ಕುರಿತು ತೆಲಂಗಾಣ ಆರ್​ಟಿಸಿ ಅಧಿಕಾರಿಗಳ ತಂಡ ಅಧ್ಯಯನ ನಡೆಸಿದೆ.

telangana-free-bus-for-women-guidelines-will-out-today

author img

By ETV Bharat Karnataka Team

Published : Dec 8, 2023, 10:44 AM IST

ಹೈದರಾಬಾದ್​: ರಾಜ್ಯದ ಆರ್​ಸಿಟಿಸಿ ಬಸ್​ನಲ್ಲಿ ಮಹಿಳೆಯರಿಗೆ ಉಚಿತ ಸಾರಿಗೆ ಸೌಲಭ್ಯ ಕಲ್ಪಿಸುವ ಯೋಜನೆ ಇದೇ ತಿಂಗಳ 9 ರಿಂದ ಆರಂಭವಾಗಲಿದ್ದು, ಇದಕ್ಕೆ ಸಂಬಂಧಿಸಿದಂತೆ ಆರ್​ಟಿಸಿ ಸಿದ್ಧತೆ ನಡೆಸಿದೆ. ಈ ಸಂಬಂಧ ಇಡಿ ಮುನಿಶೇಖರ್​​ ನೇತೃತ್ವದ ಅಧಿಕಾರಿಗಳ ತಂಡ ಗುರುವಾರ ಕರ್ನಾಟಕಕ್ಕೆ ತೆರಳಿತ್ತು. ಇಲ್ಲಿ ಈಗಾಗಲೇ ಜಾರಿಯಲ್ಲಿರುವ ಈ ಯೋಜನೆ ಕುರಿತು ಮಾಹಿತಿಯನ್ನು ಪಡೆದಿದ್ದಾರೆ. ಈ ವೇಳೆ, ಅಧಿಕಾರಿಗಳು ರಾಜ್ಯದಲ್ಲಿ ಮಹಿಳೆಯರಿಗೆ ಉಚಿತ ಬಸ್​ ಸಾರಿಗೆ ಸೌಲಭ್ಯ ಕಲ್ಪಿಸುವುದರ ಪರಿಣಾಮ ಮತ್ತು ಸಂಸ್ಥೆಯ ಮೇಲೆ ಬೀರುವ ಆರ್ಥಿಕ ಪರಿಣಾಮದ ಕುರಿತು ಸಲಹೆಯನ್ನು ಸರ್ಕಾರದಿಂದ ಪಡೆದಿದೆ. ಸಂಸ್ಥೆಯ ಎಂಡಿ ಸಜ್ಜನರ್​​ಗೆ ಈ ಸಂಬಂಧ ಮೂಲ ಮಾಹಿತಿಯನ್ನು ನೀಡಲಾಗಿದ್ದು, ಶುಕ್ರವಾರವೂ ಈ ಅಧ್ಯಯನ ಸಾಗಲಿದೆ.

ಆರ್​ಟಿಸಿ ಸಜ್ಜನರ್​​ ಶುಕ್ರವಾರ ಮುಖ್ಯಮಂತ್ರಿ ರೇವಂತ್​ ರೆಡ್ಡಿ ಜೊತೆಗೆ ಈ ಸಂಬಂದ ಚರ್ಚಿಸಲು ಮುಂದಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಸಭೆಯಲ್ಲಿ ಮುಖ್ಯಮಂತ್ರಿಗಳು ಮಹಿಳೆಯರಿಗೆ ಉಚಿತ ಬಸ್​ ಸೇವೆ ಕುರಿತಾದ ಮಾಹಿತಿಯನ್ನು ಚರ್ಚಿಸಲಿದ್ದಾರೆ. ಇದಾದ ಬಳಿಕ ಅವರು ಸಂಪೂರ್ಣ ಮಾರ್ಗಸೂಚಿಯೊಂದಿಗೆ ಯೋಜನೆ ಕುರಿತು ಘೋಷಣೆ ಮಾಡಲಿದ್ದಾರೆ. ಘೋಷಣೆಯಲ್ಲಿ ಯಾವ ಬಸ್​ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಲಭ್ಯವಿದೆ. ಯಾವ ಗುರುತಿನ ಚೀಟಿಯನ್ನು ಅವರು ತೋರಿಸಬೇಕು ಎಂಬ ಎಲ್ಲ ಮಾಹಿತಿಯನ್ನು ನೀಡಲಿದ್ದಾರೆ.

ಯೋಜನೆಗೆ ಬಸ್​​ಗಳ ಲಭ್ಯತೆ​: ಕರ್ನಾಟಕ ಸರ್ಕಾರ ಜೂನ್​ನಿಂದಲೇ ಮಹಿಳೆಯರಿಗೆ ಉಚಿತ ಬಸ್​ ಸೌಲಭ್ಯವನ್ನು ನೀಡಿದೆ. ರಾಜ್ಯದಲ್ಲಿ 22 ಸಾವಿರ ಬಸ್​​ಗಳಿವೆ. ಕರ್ನಾಟಕದಲ್ಲಿ ಶೇ 45ರಷ್ಟು ಮಹಿಳೆಯರು ಮತ್ತು ಶೇ 55ರಷ್ಟು ಪುರುಷರು ಪ್ರಯಾಣಿಸುತ್ತಿದ್ದಾರೆ. ಈ ಯೋಜನೆ ಜಾರಿಗೆ ಮುನ್ನ ಮಹಿಳಾ ಪ್ರಯಾಣಿಕರ ಸಂಖ್ಯೆ ಶೇ 40-41ರಷ್ಟಿತ್ತು. ಯೋಜನೆ ಜಾರಿಗೆ ಬಂದ ಬಳಿಕ ಮಹಿಳಾ ಪ್ರಯಾಣಿಕರ ದರ ಶೇ 12-15ರಷ್ಟು ಏರಿಕೆಯಾಗಿದೆ. ಸದ್ಯ ತೆಲಂಗಾಣದಲ್ಲಿ ಒಟ್ಟು 8,571 ಬಸ್​ಗಳಿದ್ದು, ಈ ಸಂಖ್ಯೆಯನ್ನು ಗಮನಾರ್ಹವಾಗಿ ಏರಿಕೆ ಮಾಡಬೇಕಿದೆ ಎಂಬ ಮಾಹಿತಿಯನ್ನು ಆರ್​ಟಿಸಿ ಅಧಿಕಾರಿಗಳು ಈಟಿವಿ ಭಾರತ್​​ಗೆ ತಿಳಿಸಿದ್ದಾರೆ. ಕರ್ನಾಟಕದಲ್ಲಿ ಮಹಿಳೆಯರಿಗೆ ಉಚಿತ ಬಸ್​ ಸೌಲಭ್ಯವನ್ನು ಸಾಮಾನ್ಯ ಬಸ್, ವೇಗದೂತ ಬಸ್​ಗಳಲ್ಲಿ ಮಾತ್ರ ನೀಡುತ್ತಿದೆ. ಅಲ್ಲದೇ, ಕರ್ನಾಟಕದಲ್ಲಿ ಮಾತ್ರ ಸಂಚಾರಕ್ಕೆ ಅವಕಾಶ ನೀಡಲಾಗಿದೆ.

ಯಾವ ಬಸ್​​ಗಳಲ್ಲಿ ಅವಕಾಶ?: ತೆಲಂಗಾಣದಲ್ಲಿ ಯಾವ ಬಸ್​​ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ಯೋಜನೆಯನ್ನು ಜಾರಿಗೆ ತರಬೇಕು ಎಂಬ ಕುರಿತು ನಿರ್ಧರಿಸಲಾಗುವುದು. ಆರ್​ಟಿಸಿ ಸರಾಸರಿ ಆದಾಯ 14 ಕೋಟಿ ಆಗಿದೆ. ಪ್ರಸ್ತುತ ಶೇ 40ರಷ್ಟು ಮಹಿಳಾ ಪ್ರಯಾಣಿಕರು ಸಂಚರಿಸುತ್ತಿದ್ದಾರೆ. ಇದೀಗ ಮಹಿಳೆಯರಿಗೆ ಉಚಿತ ಬಸ್​ ಸೌಲಭ್ಯ ಜಾರಿಗೆ ತರುವುದರಿಂದ ದಿನಕ್ಕೆ ನಾಲ್ಕು ಕೋಟಿ ಆದಾಯ ಕಡಿಮೆ ಆಗುವ ಸಾಧ್ಯತೆ ಇದೆ ಎಂದು ಆರ್​ಟಿಸಿ ಎಂಡಿ ವಿಸಿ ಸಜ್ಜನರ್​ ತಿಳಿಸಿದ್ದಾರೆ.

ಇದನ್ನೂ ಓದಿ: ಆಸ್ಪತ್ರೆಗೆ ದಾಖಲಾದ ತೆಲಂಗಾಣದ ಮಾಜಿ ಸಿಎಂ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.