ಹೈದರಾಬಾದ್, ತೆಲಂಗಾಣ: ಮಾಜಿ ಸಿಎಂ ಕೆಸಿಆರ್ ಅವರನ್ನು ಗುರುವಾರ ಮಧ್ಯರಾತ್ರಿ ಯಶೋದಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಮನೆಯ ವಾಶ್ರೂಂನಲ್ಲಿ ಕೆಸಿಆರ್ ಜಾರಿಬಿದ್ದು ಗಾಯಗೊಂಡಿದ್ದರು. ಕೂಡಲೇ ಅವರು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಕೆಸಿಆರ್ ಅವರ ಸೊಂಟದ ಮೂಳೆ ಮುರಿದಿರುವುದನ್ನು ವೈದ್ಯರು ಪತ್ತೆ ಮಾಡಿದ್ದಾರೆ. ಕೆಸಿಆರ್ ಸದ್ಯ ಸೋಮಾಜಿಗುಡ ಯಶೋದಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಗಬಹುದು ಎಂದು ವೈದ್ಯರು ಹೇಳಿದ್ದಾರೆ. ವೈದ್ಯಕೀಯ ಪರೀಕ್ಷೆಗಳು ಮುಗಿದ ನಂತರ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.
ಕೆಸಿಆರ್ ಅವರ ಆರೋಗ್ಯ ಸ್ಥಿತಿಯನ್ನು ಮೇಲ್ವಿಚಾರಣೆ ಮಾಡುವಂತೆ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ರಾಜ್ಯ ಆರೋಗ್ಯ ಇಲಾಖೆ ಕಾರ್ಯದರ್ಶಿ ರಿಜ್ವಿಗೆ ಸೂಚಿಸಿದ್ದಾರೆ. ಸಿಎಂ ಆದೇಶದಂತೆ ಯಶೋದಾ ಆಸ್ಪತ್ರೆಗೆ ತೆರಳಿದ ರಿಜ್ವಿ ಅವರು ವೈದ್ಯರೊಂದಿಗೆ ಮಾತನಾಡಿ ಕೆಸಿಆರ್ ಅವರ ಆರೋಗ್ಯದ ಬಗ್ಗೆ ಮಾಹಿತಿ ಪಡೆದರು. ಬಳಿಕ ಕೆಸಿಆರ್ ಅವರ ಆರೋಗ್ಯ ಸ್ಥಿತಿಯನ್ನು ರಿಜ್ವಿ ಅವರು ರೇವಂತ್ ಅವರಿಗೆ ವಿವರಿಸಿದ್ದಾರೆ. ಗುರುವಾರ ರಾತ್ರಿ ಕೆಸಿಆರ್ ಅವರನ್ನು ಆಂಬ್ಯುಲೆನ್ಸ್‌ಗೆ ಮೂಲಕ ಆಸ್ಪತ್ರೆಗೆ ಕರೆದೊಯ್ಯುವಾಗ ಅಧಿಕಾರಿಗಳು ಜೀರೋ ಟ್ರಾಫಿಕ್ ವ್ಯವಸ್ಥೆ ಮಾಡಿದ್ದರು.
-
Distressed to know that former Telangana CM Shri KCR Garu has suffered an injury. I pray for his speedy recovery and good health.
— Narendra Modi (@narendramodi) December 8, 2023 " class="align-text-top noRightClick twitterSection" data="
">Distressed to know that former Telangana CM Shri KCR Garu has suffered an injury. I pray for his speedy recovery and good health.
— Narendra Modi (@narendramodi) December 8, 2023Distressed to know that former Telangana CM Shri KCR Garu has suffered an injury. I pray for his speedy recovery and good health.
— Narendra Modi (@narendramodi) December 8, 2023
ತುಂಬಾ ನೋವಾಯಿತು ಎಂದ ಪ್ರಧಾನಿ: ಕೆಸಿಆರ್ ಆರೋಗ್ಯದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯಿಸಿದ್ದಾರೆ. 'ತೆಲಂಗಾಣದ ಮಾಜಿ ಮುಖ್ಯಮಂತ್ರಿ ಕೆಸಿಆರ್ ಗಾಯಗೊಂಡಿರುವ ವಿಚಾರ ತಿಳಿದು ನನಗೆ ತುಂಬಾ ನೋವಾಗಿದೆ. ಅವರು ಶೀಘ್ರ ಗುಣಮುಖರಾಗಲಿ ಮತ್ತು ಉತ್ತಮ ಆರೋಗ್ಯದೊಂದಿಗೆ ತಿರುಗಿ ಬರಲಿ ಎಂದು ಪ್ರಾರ್ಥಿಸುತ್ತೇನೆ' ಅಂತಾ ಮೋದಿ ಟ್ವೀಟ್ ಮಾಡಿದ್ದಾರೆ.
-
BRS supremo KCR Garu sustained a minor injury and is currently under expert care in the hospital. With the support and well-wishes pouring in, Dad will be absolutely fine soon.
— Kavitha Kalvakuntla (@RaoKavitha) December 8, 2023 " class="align-text-top noRightClick twitterSection" data="
Grateful for all the love 🙏🏼
">BRS supremo KCR Garu sustained a minor injury and is currently under expert care in the hospital. With the support and well-wishes pouring in, Dad will be absolutely fine soon.
— Kavitha Kalvakuntla (@RaoKavitha) December 8, 2023
Grateful for all the love 🙏🏼BRS supremo KCR Garu sustained a minor injury and is currently under expert care in the hospital. With the support and well-wishes pouring in, Dad will be absolutely fine soon.
— Kavitha Kalvakuntla (@RaoKavitha) December 8, 2023
Grateful for all the love 🙏🏼
ಟ್ವೀಟ್ ಮಾಡಿ ಮಾಹಿತಿ ನೀಡಿದ ಕೆ ಕವಿತಾ: ತೆಲಂಗಾಣ ಬಿಆರ್‌ಎಸ್ ಎಂಎಲ್‌ಸಿ ಹಾಗೂ ಅವರ ಪುತ್ರಿ ಕೆ.ಕವಿತಾ ಟ್ವೀಟ್ ಮಾಡಿದ್ದಾರೆ "ಬಿಆರ್‌ಎಸ್ ಮುಖ್ಯಸ್ಥ ಕೆಸಿಆರ್ ಅವರಿಗೆ ಸಣ್ಣ ಗಾಯವಾಗಿದ್ದು, ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ತಜ್ಞರ ಆರೈಕೆಯಲ್ಲಿದ್ದಾರೆ. ಜನರ ಬೆಂಬಲ ಮತ್ತು ಶುಭಾಶಯಗಳ ಮಹಾಪೂರದಿಂದ, ನಮ್ಮ ತಂದೆ ಶೀಘ್ರದಲ್ಲೇ ಸಂಪೂರ್ಣವಾಗಿ ಗುಣಮುಖರಾಗುತ್ತಾರೆ" ಎಂದು ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ.
ಇದನ್ನು ಓದಿ:ತೆಲಂಗಾಣ: 6 ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಅಂದಾಜು ವಾರ್ಷಿಕ 70 ಸಾವಿರ ಕೋಟಿ ರೂ.!
ಆಸ್ಪತ್ರೆಯತ್ತ ಪಕ್ಷದ ಮುಖಂಡರು: ಇದೇ ವೇಳೆ ಯಶೋದಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಸಿಎಂ ಚಂದ್ರಶೇಖರ್ ರಾವ್ ಜತೆ ಅವರ ಜತೆ ಪತ್ನಿ ಶೋಭಾ, ಪುತ್ರಿ ಕಲ್ವಕುಂಟ್ಲ ಕವಿತಾ, ಸಂಸದ ಜೋಗಿನಪಲ್ಲಿ ಸಂತೋಷಕುಮಾರ್ ಇದ್ದಾರೆ. ನಾಯಕನನ್ನು ನೋಡಲು ಪಕ್ಷದ ಮುಖಂಡರು ಒಬ್ಬೊಬ್ಬರಾಗಿ ಆಸ್ಪತ್ರೆಗೆ ಆಗಮಿಸುತ್ತಿದ್ದಾರೆ. ಜಗದೀಶ್ ರೆಡ್ಡಿ ಮತ್ತು ಪಲ್ಲಾ ರಾಜೇಶ್ವರ್ ರೆಡ್ಡಿ ಮಾಜಿ ಸಿಎಂ ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ವೈದ್ಯರೊಂದಿಗೆ ಮಾತನಾಡಿ ಕೆ ಸಿ ಆರ್ ಆರೋಗ್ಯ ಹೇಗಿದೆ ಎಂಬುದರ ಬಗ್ಗೆ ತಿಳಿದುಕೊಂಡರು.
ಮಾಜಿ ಸಿಎಂ ಆಸ್ಪತ್ರೆಗೆ ದಾಖಲಾಗಿರುವ ಸುದ್ದಿ ತಿಳಿದು ಅವರ ಅಭಿಮಾನಿಗಳು ಆಸ್ಪತ್ರೆಯತ್ತ ಮುಖ ಮಾಡಿದ್ದಾರೆ. ಅವರ ಆರೋಗ್ಯ ವಿಚಾರಿಸುವ ಕಾತರದಲ್ಲಿದ್ದಾರೆ.
ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಂಡಿದ್ದ ಬಿಎಆರ್ಎಸ್: ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಬಿಆರ್‌ಎಸ್ ಪಕ್ಷ ಸೋಲನುಭವಿಸಿತ್ತು. ಕಳೆದ ಬಾರಿ 88 ಸ್ಥಾನಗಳಲ್ಲಿ ಗೆದ್ದು ಅಧಿಕಾರಕ್ಕೆ ಮರಳಿದ್ದ ಕೆಸಿಆರ್ ಈ ಬಾರಿ 39 ಸ್ಥಾನಗಳಿಗೆ ಕುಸಿತ ಕಂಡು, ಸಿಎಂ ಪಟ್ಟ ಕಳೆದುಕೊಂಡಿದ್ದರು. ಕಾಮಾರೆಡ್ಡಿ ವಿಧಾನಸಭಾ ಕ್ಷೇತ್ರದಲ್ಲಿ ಸೋಲು ಅನುಭವಿಸಿದ್ದ ಅವರು, ಇನ್ನೊಂದು ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದರು.