ETV Bharat / bharat

ತೆಲಂಗಾಣ ದಶಮಾನೋತ್ಸವಕ್ಕೆ ರಾಜ್ಯಪಾಲರಿಗಿಲ್ಲ ಆಹ್ವಾನ!

ತೆಲಂಗಾಣ ದಶಮಾನೋತ್ಸವ ಆಚರಣೆಗೆ ರಾಜ್ಯ ಸರ್ಕಾರ ರಾಜ್ಯಪಾಲರಿಗೆ ಆಹ್ವಾನ ನೀಡಿಲ್ಲ ಎಂದು ವರದಿಯಾಗಿದೆ.

ತೆಲಂಗಾಣ ದಶಮಾನೋತ್ಸವಕ್ಕೆ ರಾಜ್ಯಪಾಲರಿಗಿಲ್ಲ ಆಹ್ವಾನ

author img

By

Published : Jun 2, 2023, 10:53 AM IST

Updated : Jun 2, 2023, 2:06 PM IST

ಹೈದರಾಬಾದ್: ಪ್ರತ್ಯೇಕ ರಾಜ್ಯವಾಗಿ ಉದಯಿಸಿದ ತೆಲಂಗಾಣ 10ನೇ ವರ್ಷಕ್ಕೆ ಕಾಲಿಟ್ಟಿದೆ. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ನೇತೃತ್ವದ ಸರ್ಕಾರ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಆದರೆ ಈ ಕಾರ್ಯಕ್ರಮಗಳಿಗೆ ರಾಜ್ಯಪಾಲೆ ಡಾ.ತಮಿಳಿಸೈ ಸೌಂದರರಾಜನ್ ಅವರನ್ನು ಆಹ್ವಾನಿಸಿಲ್ಲ ಎಂದು ವರದಿಯಾಗಿದೆ. ಸರ್ಕಾರದ ನಡೆ ಚರ್ಚೆಗೆ ಗ್ರಾಸವಾಗಿದೆ.

2014 ರಲ್ಲಿ ಆಂಧ್ರಪ್ರದೇಶವನ್ನು ರಾಜ್ಯ ಎರಡು ಭಾಗಗಳಾಗಿ ವಿಂಗಡಿಸಲಾಯಿತು. ಈ ವೇಳೆ ತೆಲಂಗಾಣ ಪ್ರತ್ಯೇಕ ರಾಜ್ಯವಾಗಿ ರಚನೆಯಾಯಿತು. 1969 ರಿಂದಲೂ ಪ್ರತ್ಯೇಕ ತೆಲಂಗಾಣ ರಾಜ್ಯಕ್ಕಾಗಿ ಅನೇಕ ಹೋರಾಟಗಳು ನಡೆಯುತ್ತಿದ್ದವು. ನಿರಂತರ ಹೋರಾಟದಲ್ಲಿ ಅನೇಕರು ಪ್ರಾಣತೆತ್ತಿದ್ದರು. ಕೊನೆಗೂ ಜೂನ್​ 2, 2014 ರಲ್ಲಿ ಭಾರತದ 29 ನೇ ರಾಜ್ಯವಾಗಿ ತೆಲಂಗಾಣ ಉದಯಿಸಿತು. ಈ ಹಿನ್ನೆಲೆಯಲ್ಲಿ ಪ್ರತಿ ವರ್ಷ ಜೂನ್ 2 ರಂದು ತೆಲಂಗಾಣ ರಾಜ್ಯ ರಚನೆ ದಿನವಾಗಿ ಆಚರಿಸಲಾಗುತ್ತಿದೆ.

9 ದಶಕಗಳನ್ನು ಪೂರೈಸಿರುವ ರಾಜ್ಯ ಇದೀಗ ಹತ್ತನೇ ವರ್ಷಕ್ಕೆ ಕಾಲಿಡುತ್ತಿರುವ ಹಿನ್ನೆಲೆಯಲ್ಲಿ ಅದ್ಧೂರಿ ದಶಮಾನೋತ್ಸವ ಆಚರಣೆಗೆ ಸಿದ್ಧತೆಗಳು ನಡೆದಿವೆ. ಮೂರು ವಾರಗಳ ಕಾಲ ವಿಶೇಷ ಆಚರಣೆಗೆ ಸರ್ಕಾರ ನಿರ್ಧರಿಸಿದ್ದು, ಅದಕ್ಕೆ ತಕ್ಕಂತೆ ಅನುದಾನ ಬಿಡುಗಡೆ ಮಾಡಿದೆ. ಇದರ ನಡುವೆ ದಶಮಾನೋತ್ಸವ ದಿನಾಚರಣೆಗೆ ರಾಜ್ಯಪಾಲರಿಗೆ ಆಹ್ವಾನ ನೀಡದಿರುವುದು ಭಾರಿ ಚರ್ಚೆಗೆ ಕಾರಣವಾಗಿದೆ. ಈ ಮೂಲಕ ಮುಖ್ಯಮಂತ್ರಿ ಹಾಗೂ ರಾಜ್ಯಪಾಲರ ನಡುವಿನ ಸಂಘರ್ಷ ಮತ್ತೆ ಮುನ್ನೆಲೆಗೆ ಬಂದಿದೆ. ಈ ಬಗ್ಗೆ ಅಸಮಾಧಾನಗೊಂಡಿರುವ ಸೌಂದರರಾಜನ್ ಕೇವಲ ರಾಜ್ಯಪಾಲರ ಭವನದ ಕಾರ್ಯಕ್ರಮಗಳಲ್ಲಿ ಮಾತ್ರ ಭಾಗವಹಿಸಲು ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

  • On the Formation Day of Telangana, my greetings to the people of this wonderful state. The skills of its people and the richness of its culture are greatly admired. I pray for the well-being and prosperity of Telangana.

    — Narendra Modi (@narendramodi) June 2, 2023 " class="align-text-top noRightClick twitterSection" data=" ">

ಇದನ್ನೂ ಓದಿ: ತೆಲಂಗಾಣ ರಾಜ್ಯ ಸಂಸ್ಥಾಪನಾ ದಶಮಾನೋತ್ಸವ: 21 ದಿನಗಳ ಸಂಭ್ರಮಕ್ಕೆ ₹105 ಕೋಟಿ ಬಿಡುಗಡೆ

ಇದಕ್ಕೂ ಮುನ್ನ ಗುರುವಾರ, ರಾಜ್ಯಪಾಲೆ ತಮಿಳಿಸೈ ಸೌಂದರರಾಜನ್ ಹಾಗೂ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು ರಾಜ್ಯದ ಜನತೆಗೆ ತೆಲಂಗಾಣ ದಿನದ ಶುಭಾಶಯ ತಿಳಿಸಿದ್ದರು. ಪ್ರಧಾನಿ ಮೋದಿ ಕೂಡ ಟ್ವೀಟ್​ ಮೂಲಕ ತೆಲಂಗಾಣ ದಿನಾಚರಣೆಯ ಶುಭ ಕೋರಿದ್ದರು. "ತೆಲಂಗಾಣ ರಚನೆಯ ದಿನದಂದು, ರಾಜ್ಯದ ಜನತೆಗೆ ನನ್ನ ಶುಭಾಶಯಗಳು. ತೆಲಂಗಾಣ ಜನರ ಕೌಶಲ್ಯ ಮತ್ತು ರಾಜ್ಯದ ಸಂಸ್ಕೃತಿಯ ಶ್ರೀಮಂತಿಕೆಯ ಬಗ್ಗೆ ಅಭಿಮಾನವಿದೆ. ತೆಲಂಗಾಣದ ಯೋಗಕ್ಷೇಮ ಮತ್ತು ಸಮೃದ್ಧಿಗಾಗಿ ನಾನು ಪ್ರಾರ್ಥಿಸುತ್ತೇನೆ" ಎಂದು ಟ್ವೀಟ್​ ಮಾಡಿದ್ದರು.

ಪ್ರಿಯಾಂಕಾ ಗಾಂಧಿ ಕೂಡು ಶುಭಾಶಯ ಕೋರಿದ್ದು, "ಇಂದು ತೆಲಂಗಾಣ ತನ್ನ ರಾಜ್ಯತ್ವವನ್ನು ಗೆದ್ದ ದಿನ. ತೆಲಂಗಾಣ ಯುವಜನತೆಗೆ ಮೊದಲ ಸ್ಥಾನ ನೀಡುವ ಮತ್ತು ಅದರ ರಾಜ್ಯಕ್ಕಾಗಿ ಹೋರಾಡಿದ ಎಲ್ಲರ ಕನಸುಗಳನ್ನು ನನಸಾಗಿಸುವ ಭವಿಷ್ಯಕ್ಕಾಗಿ ಬದ್ಧರಾಗುವ ಮೂಲಕ ಈ ಹೋರಾಟಕ್ಕಾಗಿ ತಮ್ಮ ಪ್ರಾಣವನ್ನು ಅರ್ಪಿಸಿದ ಹುತಾತ್ಮರನ್ನು ಗೌರವಿಸೋಣ" ಎಂದು ಟ್ವೀಟ್​ ಮಾಡಿದ್ದಾರೆ.

ಇದನ್ನೂ ಓದಿ: ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ಹೆಚ್ಚು ಶಿಕ್ಷೆ ಪಡೆದ ಭಾರತದ ಮೊದಲ ವ್ಯಕ್ತಿ ನಾನು: ರಾಹುಲ್ ಗಾಂಧಿ

Last Updated : Jun 2, 2023, 2:06 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.