ETV Bharat / bharat

ತೆಲಂಗಾಣದಲ್ಲೂ ಲಾಕ್‌ಡೌನ್‌?: ಇಂದು ನಿರ್ಧಾರ ಪ್ರಕಟಿಸಲಿರುವ ಸಿಎಂ ಕೆಸಿಆರ್‌

author img

By

Published : May 11, 2021, 7:19 AM IST

ತೆಲಂಗಾಣದಲ್ಲಿ ಲಾಕ್‌ಡೌನ್‌ ಬೇಕೇ, ಬೇಡವೇ ಎಂದು ಇಂದಿನ ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ನಿರ್ಧಾರ ತೆಗೆದುಕೊಳ್ಳಲಿದ್ದಾರೆ.

Telangana Cabinet meeting today to decide on merits of lockdown
ಸಿಎಂ ಕೆಸಿಆರ್​​

ಹೈದರಾಬಾದ್ (ತೆಲಂಗಾಣ): ರಾಜ್ಯದಲ್ಲಿ ಲಾಕ್‌ಡೌನ್‌ ಹೇರುವ ಕುರಿತು ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ನೇತೃತ್ವದಲ್ಲಿಂದು ಮಹತ್ವದ ಸಚಿವ ಸಂಪುಟ ಸಭೆ ನಡೆಯಲಿದೆ.

ಇತರ ರಾಜ್ಯಗಳಿಗೆ ಹೋಲಿಸಿದರೆ ತೆಲಂಗಾಣದಲ್ಲಿ ಕೋವಿಡ್​ ಸಾವು-ನೋವು ಸ್ವಲ್ಪ ಕಡಿಮೆಯಿದ್ದರೂ ಕೂಡ ಮುನ್ನೆಚ್ಚರಿಕಾ ಕ್ರಮವಾಗಿ ಹಾಗೂ ಲಾಕ್​​ಡೌನ್​ ಮಾಡಬೇಕೆಂಬ ಹಲವರ ಅಭಿಪ್ರಾಯಕ್ಕೆ ಅನುಗುಣವಾಗಿ ಲಾಕ್‌ಡೌನ್‌ ಸಾಧಕ-ಬಾಧಕಗಳ ಕುರಿತು ಈ ಸಭೆಯಲ್ಲಿ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಕಚೇರಿ ತಿಳಿಸಿದೆ.

ಕೆಲವು ರಾಜ್ಯಗಳಲ್ಲಿ ಲಾಕ್​ಡೌನ್​ ವಿಧಿಸಿದ್ದರೂ ಪ್ರಕರಣಗಳಲ್ಲಿ ಯಾವುದೇ ಇಳಿಕೆ ಇಲ್ಲ. ಲಾಕ್​ಡೌನ್​ನಿಂದಾಗಿ ಧಾನ್ಯ ಸಂಗ್ರಹದ ಮೇಲೆ ಆಗುವ ದುಷ್ಪರಿಣಾಮಗಳನ್ನೂ ಗಮನದಲ್ಲಿ ಇಟ್ಟುಕೊಳ್ಳಲಾಗುವುದು ಎಂದು ಸಿಎಂ ಕಚೇರಿ ಹೇಳಿದೆ.

ಇದನ್ನೂ ಓದಿ: ತೆಲಂಗಾಣದಲ್ಲಿಲ್ಲ ಲಾಕ್​ಡೌನ್​, ಇದು ಆರ್ಥಿಕತೆ ಕುಸಿತಕ್ಕೆ ಕಾರಣ ಎಂದ ಕೆಸಿಆರ್​

ಈ ಹಿಂದೆ ಕೆಸಿಆರ್, ಆರ್ಥಿಕತೆ ಮೇಲೆ ಹೊಡೆತ ಬೀಳುವ ಪರಿಣಾಮ ಯಾವುದೇ ಕಾರಣಕ್ಕೂ ಲಾಕ್‌ಡೌನ್‌ ಹೇರುವುದಿಲ್ಲ ಎಂದಿದ್ದರು.

ರಾಜ್ಯದಲ್ಲಿ ನಿನ್ನೆ 4,826 ಸೋಂಕಿತರು ಪತ್ತೆಯಾಗಿದ್ದು, 32 ಮಂದಿ ಮೃತಪಟ್ಟಿದ್ದರು. ತೆಲಂಗಾಣ ಆರೋಗ್ಯ ಸಚಿವಾಲಯದ ಪ್ರಕಾರ 65,757 ಪ್ರಕರಣಗಳು ಸಕ್ರಿಯವಾಗಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.