ETV Bharat / bharat

ಬಾಲ್ಯದ ಗೆಳತಿ ಜೊತೆ ತೇಜಸ್ವಿ ಯಾದವ್ ಗಪ್ ಚುಪ್​​​ ಮದುವೆ.. ದೆಹಲಿಯಲ್ಲಿ ಸಮಾರಂಭ - RJD leader Tejeswi marriage

ಲಾಲೂ ಪ್ರಸಾದ್​ ಯಾದವ್​​ ಅವರ ಕೊನೆಯ ಪುತ್ರ ತೇಜಸ್ವಿ ಯಾದವ್​​ ಬಾಲ್ಯದ ಗೆಳತಿ ಜೊತೆ ಸಪ್ತಪದಿ ತುಳಿದಿದ್ದು, ದೆಹಲಿಯಲ್ಲಿ ಕುಟುಂಬಸ್ಥರು ಹಾಗೂ ಆಪ್ತರ ಸಮ್ಮುಖದಲ್ಲಿ ಮದುವೆ ಸಮಾರಂಭ ನಡೆದಿದೆ.

Tejashwi Yadav Marriage
Tejashwi Yadav Marriage
author img

By

Published : Dec 9, 2021, 5:46 PM IST

Updated : Dec 9, 2021, 10:56 PM IST

ನವದೆಹಲಿ: ಆರ್‌ಜೆಡಿ ನಾಯಕ ಮತ್ತು ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಅವರ ಕಿರಿಯ ಪುತ್ರ ತೇಜಸ್ವಿ ಯಾದವ್ ಅವರ ಮದುವೆ ಸಮಾರಂಭ ನಡೆದಿದ್ದು, ಬಾಲ್ಯದ ಗೆಳತಿ ರಾಜಶ್ರೀ ಜೊತೆ ದೆಹಲಿಯಲ್ಲಿ ಗಪ್​​ಚುಪ್​​ ಆಗಿ ಸಪ್ತಪದಿ ತುಳಿದಿದ್ದಾರೆ.

ದಕ್ಷಿಣ ದೆಹಲಿಯಲ್ಲಿರುವ ತೇಜಸ್ವಿ ಯಾದವ್​​​​ ಸಹೋದರಿ ಮಿಸಾ ಭಾರ್ತಿ ಫಾರ್ಮ್​ಹೌಸ್​​ನಲ್ಲಿ ಈ ಮದುವೆ ಸಮಾರಂಭ ನಡೆದಿದೆ. ಈ ವೇಳೆ, ಮಾಧ್ಯಮದವರಿಗೆ ಅನುಮತಿ ನೀಡಿರಲಿಲ್ಲ ಎಂಬ ಮಾಹಿತಿ ಸಹ ಹೊರಬಿದ್ದಿದೆ.

Tejashwi Yadav Marriage
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಲಾಲು ಪುತ್ರ ತೇಜಸ್ವಿ

2015ರಿಂದ 2017ರವರೆಗೆ ಬಿಹಾರ ಉಪಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿರುವ ತೇಜಸ್ವಿ ಯಾದವ್​​​ ಹಾಗೂ ರಾಜಶ್ರೀ ಒಂದೇ ಶಾಲೆಯಲ್ಲಿ ಶಿಕ್ಷಣ ಪಡೆದುಕೊಂಡಿದ್ದು, ಇದೀಗ ಸತಿ-ಪತಿಗಳಾಗಿದ್ದಾರೆ. ಲಾಲೂ ಪ್ರಸಾದ್​​ ಅವರ 9 ಮಕ್ಕಳ ಪೈಕಿ ತೇಜಸ್ವಿ ಯಾದವ್​ ಕೊನೆಯವರಾಗಿದ್ದು, ಮದುವೆ ಮಾಡಿಕೊಳ್ಳುವುದು ಬಾಕಿ ಉಳಿದಿತ್ತು. ಇದೀಗ ಕೋವಿಡ್​ ಕಾರಣದಿಂದಾಗಿ 40 - 50 ಆಪ್ತ ಸಂಬಂಧಿಕರ ಸಮ್ಮುಖದಲ್ಲಿ ಮದುವೆ ಕಾರ್ಯಕ್ರಮ ನಡೆದಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿರಿ: ಹೆಲಿಕಾಪ್ಟರ್​ ದುರಂತದಲ್ಲಿ ಬದುಕುಳಿದ ಕ್ಯಾ. ವರುಣ್​​ ಸಿಂಗ್​​.. ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಸ್ಥಳಾಂತರ

ಬಿಹಾರದ ರಾಘೋಪುರ್ ಕ್ಷೇತ್ರದ ಶಾಸಕರಾಗಿರುವ ತೇಜಸ್ವಿ ಯಾದವ್​​, ಕ್ರಿಕೆಟ್​​ನಲ್ಲೂ ತಮ್ಮನ್ನ ತೊಡಗಿಸಿಕೊಂಡಿದ್ದರು. ಈ ಹಿಂದೆ ಐಪಿಎಲ್​​ನಲ್ಲಿ ಡೆಲ್ಲಿ ಡೇರ್​ ಡೆವಿಲ್ಸ್​​ ತಂಡದಲ್ಲಿದ್ದರು. ಇದಕ್ಕೂ ಮುಂಚೆ ಸೈಯದ್​ ಮುಸ್ತಾಕ್​ ಅಲಿ ಹಾಗೂ ರಣಜಿ ಕ್ರಿಕೆಟ್​​ನಲ್ಲಿ ಮೈದಾನಕ್ಕಿಳಿದಿದ್ದರು.

Last Updated : Dec 9, 2021, 10:56 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.