ಪಾಟ್ನಾ(ಬಿಹಾರ): ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಗುರುವಾರ ದೆಹಲಿಗೆ ತೆರಳಿದ್ದು, ಇಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಲಿದ್ದಾರೆ. ಸಂಜೆ 5 ಗಂಟೆಗೆ ಸೋನಿಯಾ ಗಾಂಧಿ ಅವರನ್ನು ತೇಜಸ್ವಿ ಭೇಟಿ ಮಾಡಲಿದ್ದಾರೆ ಎನ್ನುವ ಮಾಹಿತಿ ಇದೆ.
ಬಿಹಾರದಲ್ಲಿ ಮಹಾಮೈತ್ರಿಕೂಟ ಸರ್ಕಾರ ರಚನೆಯಾದಾಗಿನಿಂದ ಸಚಿವ ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಎಲ್ಲ ಪಕ್ಷಗಳು ತಮ್ಮ ತಮ್ಮಲ್ಲೇ ಚರ್ಚೆ ನಡೆಸುತ್ತಿವೆ. ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರು ಮಹಾಮೈತ್ರಿಕೂಟದ ಎಲ್ಲ ಪಕ್ಷಗಳ ನಡುವೆ ಸಮತೋಲನ ಕಾಯ್ದುಕೊಳ್ಳುತ್ತಿದ್ದಾರೆ.
ಹಾಗಾಗಿ ಹೊಸ ಸರ್ಕಾರ ರಚನೆಯಾದ ತಕ್ಷಣ ಕಾಂಗ್ರೆಸ್ ಸೇರಿದಂತೆ ಇತರ ಪಕ್ಷಗಳು ತೇಜಸ್ವಿ ಯಾದವ್ ಮೂಲಕ ನಿತೀಶ್ ಕುಮಾರ್ ಸರ್ಕಾರದೊಂದಿಗೆ ಹೋಗಲು ‘ಬೆಂಬಲ ಪತ್ರ’ ಸಲ್ಲಿಸಿದ್ದವು. ಸೋನಿಯಾ ಗಾಂಧಿ ಭೇಟಿಯ ನಂತರ ಸಂಪುಟದಲ್ಲಿ ಸ್ಥಾನ ಮತ್ತು ಖಾತೆ ಹಂಚಿಕೆ ಬಗ್ಗೆ ಚರ್ಚೆ ನಡೆಯಲಿದೆ ಎಂದು ಹೇಳಲಾಗಿದೆ.
ಮಹಾಮೈತ್ರಿಕೂಟ ಸರ್ಕಾರ ರಚೆನೆಯಾಗಿದ್ದು, ಈಗಾಗಲೇ ಹಲವು ನಾಯಕರ ಜೊತೆ ಮಾತುಕತೆ ನಡೆಸಲಾಗಿದೆ. ಹಲವರು ನಮಗೆ ಅಭಿನಂದನೆ ಸಲ್ಲಿಸಿದ್ದಾರೆ. ದೆಹಲಿಯಲ್ಲೂ ಹಲವು ನಾಯಕರನ್ನು ಭೇಟಿಯಾಗಬೇಕಿದೆ. ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರೊಂದಿಗೂ ಮಾತುಕತೆ ನಡೆಸಿದ್ದೇವೆ. ದೆಹಲಿಯಲ್ಲೇ ವಾಸ್ತವ್ಯ ಹೂಡಿ ಉಳಿದ ನಾಯಕರನ್ನೂ ಭೇಟಿ ಮಾಡುತ್ತೇವೆ ಎಂದು ಗುರುವಾರದಂದು ದೆಹಲಿಗೆ ಹೊರಡುವ ಮೊದಲು ಮಾಧ್ಯಮದವರ ಪ್ರಶ್ನೆಗೆ ತೇಜಸ್ವಿ ಯಾದವ್ ಉತ್ತರಿಸಿದ್ದರು.
ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮಾತನಾಡಲು ತೇಜಸ್ವಿ ಯಾದವ್ ತಮ್ಮ ತಂದೆ, ಮಾಜಿ ಸಿಎಂ ಲಾಲು ಯಾದವ್ ಬಳಿ ಹೋಗಿದ್ದಾರೆ. ಲಾಲು ಯಾದವ್ ಅವರ ಆದೇಶದ ಮೇರೆಗೆ ಸಚಿವ ಸಂಪುಟ ವಿಸ್ತರಣೆ ಮಾಡುವುದಾಗಿ ಅವರು ಸ್ಪಷ್ಟವಾಗಿ ಹೇಳುತ್ತಿದ್ದು, ಈ ವಿಷಯಗಳ ಚರ್ಚೆಗೆ ಮಾತ್ರ ದೆಹಲಿಗೆ ತೆರಳಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ಶ್ರೀನಗರದಲ್ಲಿ ಹರ್ ಘರ್ ತಿರಂಗಾ ರ್‍ಯಾಲಿಗೆ ಚಾಲನೆ ನೀಡಿದ ಲೆಫ್ಟಿನೆಂಟ್ ಗವರ್ನರ್
ಬುಧವಾರ ಬಿಹಾರದಲ್ಲಿ ಮಹಾಘಟಬಂಧನ್ ಸರ್ಕಾರವು ಪ್ರಮಾಣವಚನ ಸ್ವೀಕರಿದೆ. ಸಚಿವ ಸಂಪುಟ ವಿಸ್ತರಣೆ ಕುರಿತ ಚರ್ಚೆಯೂ ತೀವ್ರಗೊಂಡಿದೆ. ಆಗಸ್ಟ್ 16ರಂದು ಸಚಿವ ಸಂಪುಟ ವಿಸ್ತರಣೆಯಾಗಲಿದೆ ಎಂದು ಹೇಳಲಾಗುತ್ತಿದೆ. ಹೊಸ ಸಂಪುಟದಲ್ಲಿ ಸಚಿವರ ಅನುಪಾತವು 2015ರಲ್ಲಿ ಇದ್ದಂತೆಯೇ ಇರಲಿದೆ ಎನ್ನಲಾಗುತ್ತಿದೆ. ಈ ಹಿಂದೆ ಬಿಜೆಪಿ ಜೊತೆಗಿದ್ದ ಆರ್ಜೆಡಿ ಸೇರಿದಂತೆ ಮಹಾಮೈತ್ರಿಕೂಟದ ಎಲ್ಲ ಪಕ್ಷಗಳಿಗೂ ಇಲಾಖೆಗಳನ್ನು ಹಂಚಿಕೆ ಮಾಡುವ ಸೂಚನೆಯಿದೆ.