ವಾರಂಗಲ್(ತೆಲಂಗಾಣ): ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿರುವ ಆರೋಪ ಹೊತ್ತಿರುವ ಖಾಸಗಿ ಶಾಲೆ ಶಿಕ್ಷಕನೋರ್ವನಿಗೆ 10 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿ ಕೋರ್ಟ್ ತೀರ್ಪು ನೀಡಿದೆ.
ಓದಿ: ಸ್ವತಂತ್ರ ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ ಮಹಿಳೆಗೆ ಗಲ್ಲು.. ಯಾರು ಈ ಶಬ್ನಮ್!? ಏನು ಆಕೆ ಎಸಗಿದ ಅಪರಾದ!?
ರಾಮ್ಕೊಡಾದಲ್ಲಿನ ಖಾಸಗಿ ಶಾಲೆವೊಂದರಲ್ಲಿ ಶಿಕ್ಷಕನಾಗಿ ಶಿವಶೈನಿ ಸಾಯಿಮನಿ ಕೆಲಸ ನಿರ್ವಹಿಸುತ್ತಿದ್ದ ವೇಳೆ 9ನೇ ತರಗತಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿದ್ದ ಎನ್ನಲಾಗಿದೆ. ಇದರ ಜತೆಗೆ ಆಕೆಗೆ ಪರೀಕ್ಷೆಯಲ್ಲಿ ಹೆಚ್ಚಿನ ಮಾರ್ಕ್ಸ್ ನೀಡಿ, ಮದುವೆಯಾಗುವುದಾಗಿ ಭರವಸೆ ನೀಡಿ ಮೇಲಿಂದ ಮೇಲೆ ದೈಹಿಕ ಸಂಪರ್ಕ ಬೆಳೆಸಿದ್ದನಂತೆ. ಇದಕ್ಕೆ ಸಂಬಂಧಿಸಿದಂತೆ ಪೋಷಕರಿಗೆ ಮಾಹಿತಿ ಗೊತ್ತಾಗುತ್ತಿದ್ದಂತೆ ಪೊಲೀಸರಿಗೆ ದೂರು ನೀಡಿದ್ದರು.
ಪ್ರಕರಣ ದಾಖಲು ಮಾಡಿಕೊಂಡಿದ್ದ ಪೊಲೀಸರು ವಿಚಾರಣೆ ನಡೆಸಿ, ಕೋರ್ಟ್ಗೆ ಪ್ರಕರಣ ವರ್ಗಾವಣೆ ಮಾಡಿದ್ದರು. ಇದೀಗ ವಾದ-ವಿವಾದ ಆಲಿಸಿದ ಕೋರ್ಟ್ಈ ತೀರ್ಪು ನೀಡಿದ್ದು, ಆರೋಪಿಗೆ 4,500 ರೂ. ದಂಡ ಕೂಡ ವಿಧಿಸಿದೆ.