ETV Bharat / bharat

ವಿದ್ಯಾರ್ಥಿನಿಯ ತಲೆಗೆ ಕತ್ತರಿಯಿಂದ ಹೊಡೆದು, ಮೊದಲ ಮಹಡಿಯಿಂದ ತಳ್ಳಿದ ಶಿಕ್ಷಕಿ! - ಮೊದಲ ಮಹಡಿಯಿಂದ ತಳ್ಳಿದ ಶಿಕ್ಷಕಿ

ದೆಹಲಿಯಲ್ಲಿ ಶಿಕ್ಷಕಿಯೊಬ್ಬರು ಶಾಲಾ ಕಟ್ಟಡದ ಮೊದಲ ಮಹಡಿಯಿಂದ ವಿದ್ಯಾರ್ಥಿನಿಯನ್ನು ಕೆಳಗೆ ತಳ್ಳಿದ್ದಾರೆ.

teacher-hits-class-5th-student-with-scissors-pushes-her-from-1st-floor
ವಿದ್ಯಾರ್ಥಿನಿಯ ತಲೆಗೆ ಕತ್ತರಿಯಿಂದ ಹೊಡೆದು, ಮೊದಲ ಮಹಡಿಯಿಂದ ತಳ್ಳಿದ ಶಿಕ್ಷಕಿ!
author img

By

Published : Dec 16, 2022, 6:49 PM IST

ನವ ದೆಹಲಿ: ಶಿಕ್ಷಕಿಯೊಬ್ಬರು ಐದನೇ ತರಗತಿಯ ವಿದ್ಯಾರ್ಥಿನಿಯ ತಲೆಗೆ ಕತ್ತರಿಯಿಂದ ಹೊಡೆದು ನಂತರ ಶಾಲಾ ಕಟ್ಟಡದ ಮೊದಲ ಮಹಡಿಯಿಂದ ತಳ್ಳಿರುವ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ. ಆರೋಪಿ ಶಿಕ್ಷಕಿ ಗೀತಾ ದೇಶ್ವಾಲ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.

ರಾಣಿ ಝಾನ್ಸಿ ರಸ್ತೆ ಬಳಿಯರುವ ಪ್ರಾರ್ಥಿಕ್ ವಿದ್ಯಾಲಯದಲ್ಲಿ ಶುಕ್ರವಾರ ಘಟನೆ ನಡೆಯಿತು. ಮಹಡಿಯಿಂದ ಬಿದ್ದ ವಿದ್ಯಾರ್ಥಿನಿ ಗಾಯಗೊಂಡಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಕೆ ಅಪಾಯದಿಂದ ಪಾರಾಗಿದ್ದಾಳೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಇಂದು ಬೆಳಗ್ಗೆ 11.15ರ ಸುಮಾರಿಗೆ ವಿದ್ಯಾರ್ಥಿನಿಯನ್ನು ಮೊದಲ ಮಹಡಿಯ ತರಗತಿಯಿಂದ ತಳ್ಳಿರುವ ಬಗ್ಗೆ ಡಿಬಿಜಿ ಪೊಲೀಸ್ ಠಾಣೆಗೆ ಮಾಹಿತಿ ಬಂದಿದೆ. ಪೊಲೀಸ್ ತಂಡ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ, ಪ್ರತ್ಯಕ್ಷದರ್ಶಿಗಳ ಹೇಳಿಕೆಯ ಆಧಾರದ ಮೇಲೆ ಶಿಕ್ಷಕಿಯನ್ನು ವಶಕ್ಕೆ ಪಡೆದಿದ್ದಾರೆ.

ಐಪಿಸಿ ಸೆಕ್ಷನ್ 307 (ಕೊಲೆ ಯತ್ನ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ಶಿಕ್ಷಕಿಯು ವಿದ್ಯಾರ್ಥಿನಿಯನ್ನು ಯಾವ ಕಾರಣಕ್ಕೆ ಥಳಿಸಿದರು ಮತ್ತು ಮಹಡಿಯಿಂದ ತಳ್ಳಿದ್ದೇಕೆ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

ಇದನ್ನೂ ಓದಿ: ಲೈಂಗಿಕ ಕಿರುಕುಳ ಆರೋಪ.. ಕೋಲು, ಕಸಬರಿಗೆ ಹಿಡಿದು ಶಿಕ್ಷಕನಿಗೆ ಥಳಿಸಿದ ಹೆಣ್ಮಕ್ಕಳು!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.