ನವದೆಹಲಿ: ಭಾರತದ ಮುಂಚೂಣಿ ಆಟೋಮೋಟಿವ್ ಸಂಸ್ಥೆ ಟಾಟಾ ಮೋಟರ್ಸ್ ಇಂದು ತನ್ನ ಪ್ರೀಮಿಯಮ್ ಪ್ರಧಾನ ಎಸ್‍ಯುವಿ - ಹೊಚ್ಚ ಹೊಸ ಸಫಾರಿಯನ್ನು ಬಿಡುಗಡೆ ಮಾಡಿತು.
![Tata Motors launches its iconic flagship SUV](https://etvbharatimages.akamaized.net/etvbharat/prod-images/image-2---adventure-persona1614058186182-88_2302email_1614058197_503.jpg)
ಸಫಾರಿಯ ಸೆರೆ ಹಿಡಿದಿಡುವ ವಿನ್ಯಾಸ, ಸರಿಸಾಟಿಯಿಲ್ಲದ ವೈವಿಧ್ಯತೆ, ಐಶಾರಾಮಿ, ಮತ್ತು ಆರಾಮದಾಯಕವಾದ ಒಳಾಂಗಣಗಳು, ಮತ್ತು ಶಕ್ತಿಶಾಲಿ ಕಾರ್ಯಕ್ಷಮತೆ ನವಯುಗದ ಎಸ್‍ಯುವಿ ಗ್ರಾಹಕರ ಆಧುನಿಕ ಬಹುಮುಖ ಜೀವನಶೈಲಿ ಮತ್ತು ಅಭಿವ್ಯಕ್ತಿ ಹಾಗೂ ಮೋಜಿನ ಜೊತೆಗೆ ಘನತೆ ಮತ್ತು ಸೂಕ್ಷ್ಮತೆಯ ನಿಖರ ಸಂಯೋಜನೆಯೆಡೆಗಿನ ಅವರ ಆಶಯಗಳನ್ನು ಪೂರೈಸುತ್ತದೆ. ಹೊಚ್ಚ ಹೊಸ ಸಫಾರಿ, ಈಗ ನಿಮ್ಮ ಹತ್ತಿರದ ಟಾಟಾ ಮೋಟರ್ಸ್ ಡೀಲರ್ಶಿಪ್ನಲ್ಲಿ ಲಭ್ಯವಿದೆ.
ಇದರ ಜೊತೆಗೆ, ಟಾಟಾ ಮೋಟರ್ಸ್, ಗ್ರಾಹಕರು ತಮ್ಮ ವ್ಯಕ್ತಿತ್ವಕ್ಕೆ ತಕ್ಕಂತಹ ಎಸ್‍ಯುವಿಗಳನ್ನು ಆಯ್ಕೆ ಮಾಡಿಕೊಳ್ಳುವುದಕ್ಕಾಗಿ ಹೆಚ್ಚು ಅಭಿವ್ಯಕ್ತಶೀಲವಾಗಿರುವ ಹೊಂದಿರುವ ಸಫಾರಿಯ ‘ಅಡ್ವೆಂಚರ್ ಪರ್ಸೊನ’ ಆವೃತ್ತಿಯನ್ನೂ ಅನಾವರಣಗೊಳಿಸಿತು. ಅಡ್ವೆಂಚರ್ ಪರ್ಸೊನ, ನಮ್ಮ ದೇಶದ ಪ್ರಜ್ವಲ ಭೂಚಿತ್ರಗಳಾದ್ಯಂತ ಕಂಡುಬರುವ ಸಮೃದ್ಧವಾದ ಹಾಗೂ ವೈವಿಧ್ಯಮಯ ಹೂಗಳಿಂದ ಪ್ರೇರಿತವಾದ ಟ್ರಾಪಿಕಲ್ ಮಿಸ್ಟ್ ಬಣ್ಣದಲ್ಲಿ ಲಭ್ಯವಿರಲಿದೆ.
ಹೊಚ್ಚ ಹೊಸ ಸಫಾರಿಯ ಪರಿಚಯದ ಬಗ್ಗೆ ಮಾತನಾಡುತ್ತ, ಟಾಟಾ ಮೋಟರ್ಸ್‍ನ ಎಮ್‍ಡಿ ಮತ್ತು ಸಿಇಒ ಶ್ರೀ ಗ್ವೆಂಟರ್ ಬ್ಯುಟ್ಶೆಕ್, “ನಮ್ಮ ಹೊಸ ಪ್ರಧಾನ ಉತ್ಪನ್ನವಾಗಿ ಸಫಾರಿ, ಮಹತ್ವಾಕಾಂಕ್ಷೆಯುಳ್ಳ ಮತ್ತು ಅಭಿವೃದ್ಧಿಹೊಂದಿರುವ ಗ್ರಾಹಕರ ನಿರೀಕ್ಷೆಗಳನ್ನು ಸಂಪರ್ಕಿಸುತ್ತದೆ. ಅದು, 2020ರಲ್ಲಿ ಪರಿಚಯಿಸಲಾದ “ಎಂದೆಂದಿಗೂ ಹೊಸತು” ಕಾರು ಮತ್ತು ಎಸ್‍ಯುವಿಗಳ ಶ್ರೇಣಿಯ ಪೈಕಿ ಅಗ್ರಸ್ಥಾನದಲ್ಲಿದ್ದು, ಟಾಟಾ ಮೋಟರ್ಸ್‍ನ ಪ್ರಮುಖ ಪರಿವರ್ತನೆಯಲ್ಲಿ ಮತ್ತೊಂದು ಮೈಲಿಗಲ್ಲಾಗಿದೆ. ಹೊಸ ಸಫಾರಿಯು, ಶೀಘ್ರವಾಗಿ ಬೆಳೆಯುತ್ತಿರುವ ಮಾರುಕಟ್ಟೆ ವರ್ಗಗಳಲ್ಲಿ ಅಸ್ತಿತ್ವವನ್ನು ವರ್ಧಿಸುವ ನಮ್ಮ ನಿಶ್ಚಲ ಉದ್ದೇಶದ ಮಹತ್ತರ ಪ್ರಮಾಣವಾಗಿದೆ. ಇದರ ಅದ್ವಿತೀಯ ನಿರ್ಮಾಣ ಗುಣಮಟ್ಟ ಮತ್ತು ಪ್ರೀಮಿಯಮ್ ಫಿನಿಶ್, ಶಕ್ತಿ ಹಾಗು ಕಾರ್ಯಕ್ಷಮತೆ ಬ್ರ್ಯಾಂಡ್‍ನ ಐತಿಹಾಸಿಕ ಪರಂಪರೆಯನ್ನು ವರ್ಧಿಸುವುದರ ಜೊತೆಗೆ “ಎಂದೆಂದಿಗೂ ಹೊಸತು” ಶ್ರೇಣಿಯ, ಅಂದರೆ, ಸುರಕ್ಷತೆ, ಸ್ಟೈಲ್, ಚಲನಶೀಲತೆ, ಹಾಗೂ ವರ್ಗದಲ್ಲೇ ಅತ್ಯುತ್ತಮ ಅಂಶಗಳು ಮುಂತಾದ ಪ್ರಮುಖಾಂಶಗಳನ್ನು ಇನ್ನಷ್ಟು ಹೆಚ್ಚಿಸುತ್ತದೆ. ನಾವು, ಮತ್ತೊಮ್ಮೆ ಸಫಾರಿಯು ಭಾರತೀಯ ರಸ್ತೆಗಳನ್ನು ಆಳುವಂತೆ ಮಾಡುತ್ತೇವೆ'' ಎಂದರು.
ಟಾಟಾ ಮೋಟರ್ಸ್‍ನ ಪ್ಯಾಸೆಂಜರ್ ವಾಹನಗಳ ವ್ಯಾಪಾರ ಘಟಕದ ಅಧ್ಯಕ್ಷ ಶ್ರೀ ಶೈಲೇಶ್ ಚಂದ್ರ, “ಸಫಾರಿಯು ಭಾರತಕ್ಕೆ ಎಸ್‍ಯುವಿ ಜೀವನಶೈಲಿಯನ್ನು ಪರಿಚಯಿಸಿತ್ತು. ಈಗ ತನ್ನ ಹೊಸ ಅವತಾರದಲ್ಲಿ ಹೊಚ್ಚಹೊಸ ಸಫಾರಿಯು ಇಂದಿನ ಎಸ್‍ಯುವಿ ಗ್ರಾಹಕರ ಬಹುಮುಖ ಜೀವನಶೈಲಿಗಳಿಗೆ ಅನುಗುಣವಾಗಿದೆ. ತನ್ನ ಐಶಾರಾಮೀ ಒಳಾಂಗಣಗಳು, ಅತ್ಯಾಧುನಿಕ ಸಂಪರ್ಕಶೀಲತೆ, ಮತ್ತು ಪ್ರೀಮಿಯಮ್ ಅಂಶಗಳಿಂದಾಗಿ ಸಫಾರಿಯು ಜೀವನಶೈಲಿ ಕೋಶೆಂಟ್‍ನೊಳಗೆ ಕೇವಲ ಸೇರಿಹೋಗುವುದಷ್ಟೇ ಅಲ್ಲದೆ, ಅದನ್ನು ಹಲವು ಸ್ತರಗಳಷ್ಟು ಮೇಲಕ್ಕೆ ಉನ್ನತೀಕರಿಸುತ್ತದೆ. ಅಡ್ವೆಂಚರ್ ಪರ್ಸೊನದ ಪರಿಚಯದೊಂದಿಗೆ, ಗ್ರಾಹಕರು ತಮ್ಮ ವೈಯಕ್ತಿಕ ವ್ಯಕ್ತಿತ್ವವಾದ”ನಿಮ್ಮ ಜೀವನ ಮರಳಿಪಡೆಯಿರಿ” ಅತ್ಯಂತ ಪೂರಕವಾಗಿರುವ ಸಫಾರಿಯನ್ನು ಆರಿಸಿಕೊಳ್ಳಲು ಇನ್ನೂ ಹೆಚ್ಚಿನ ಆಯ್ಕೆಗಳನ್ನು ನೀಡುತ್ತದೆ.” ಎಂದು ಹೊಸ ಫಿಚರ್ಸ್ಗಳ ಬಗ್ಗೆ ವಿವರಣೆ ನೀಡಿದರು.
ಶಕ್ತಿಶಾಲಿಯಾದ 2.0 ಲೀ ಟರ್ಬೋಚಾರ್ಜ್ ಆದ ಕೈರೋಟೆಕ್ ಇಂಜಿನ್ ಮತ್ತು 2741 ವೀಲ್‍ಬೇಸ್‍ನೊಂದಿಗೆ ಸಫಾರಿಯು ವಿಶಿಷ್ಟವಾದ ಮುತ್ತಿನ ಬಿಳುಪಿನ ಒಳಾಂಗಣಗಳು, ಆ್ಯಶ್‍ವುಡ್ ಫಿನಿಶ್ ಇರುವ ಡ್ಯಾಶ್‍ಬೋರ್ಡ್, ಭವ್ಯವಾದ ದೃಶ್ಯಾಂತ ಸನ್‍ರೂಫ್-ಅಂದರೆ, ಅತಿ ವಿಶಾಲವಾದ ಮತ್ತು ವರ್ಗದಲ್ಲೇ ಅತ್ಯುತ್ತಮವಾದ ದೃಶ್ಯಾವಳಿ ಒದಗಿಸುವ ಸನ್‍ರೂಫ್, 6ರಿಂದ 7 ಸೀಟ್‍ವರೆಗಿನ ಆಯ್ಕೆಗಳನ್ನು ಹೊಂದಿದೆ.
ಎಲ್ಲ ಟಾಟಾ ಮೋಟರ್ಸ್ ಉತ್ಪನ್ನಗಳಲ್ಲಿ ಇರುವಂತೆ ಸಫಾರಿಯು ಕೂಡ ಆಲ್ ಡಿಸ್ಕ್ ಬ್ರೇಕ್‍ಗಳು, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಮತ್ತು 14 ರೀತಿಯ ಕಾರ್ಯಾಚರಣೆಗಳಿರುವ ಆಧುನಿಕ ಇಎಸ್‍ಪಿ ಮುಂತಾದ ಹಲವು ರೀತಿಯ ಸುರಕ್ಷತಾ ಅಂಶಗಳನ್ನು ಹೊಂದಿದೆ. ವರ್ಧಿತ ಚಾಲನಾ ಆರಾಮ ನೀಡುವುದಕ್ಕಾಗಿ ಬಾಸ್ ಮೋಡ್ ಇರುವ ಸಫಾರಿ, ಎಕ್ಸಿಕ್ಯೂಟಿವ್ ಗ್ರಾಹಕರಿಗೆ ಲಿವಿಂಗ್ ರೂಮ್ ಶೈಲಿಯ ಚಾಲನಾ ಅನುಭವವನ್ನು ನೀಡುತ್ತದೆ. ಎಲ್ಲಕ್ಕಿಂತ ಮಿಗಿಲಾಗಿ, ವಾಹನವು, ವಿಶಿಷ್ಟ ರಾಯಲ್ ಬ್ಲೂ ಬಣ್ಣದ ಜೊತೆಗೆ ಡೇಟೋನಾ ಗ್ರೇ, ಟ್ರಾಪಿಕಲ್ ಮಿಸ್ಟ್ ಮತ್ತು ಆರ್ಕಸ್ ವೈಟ್ ಬಣ್ಣಗಳಲ್ಲಿ ಲಭ್ಯವಿರುತ್ತದೆ.
ಹೊಸದಾಗಿ ಪರಿಚಯಗೊಂಡಿರುವ ಅಡ್ವೆಂಚರ್ ಪರ್ಸೊನ ಆರ್18 ಬ್ಲ್ಯಾಕ್ ಟಿಂಟೆಡ್ ಚಾರ್ಕೋಲ್ ಗ್ರೇ ಯಾಂತ್ರೀಕರಣಗೊಂಡ ಅಲಾಯ್‍ಗಳು ಮತ್ತು ತನ್ನ ಗ್ರಿಲ್, ರೂಫ್ ರೇಲ್ಸ್ ಇನ್ಸರ್ಟ್ಸ್, ಹೊರಗಿನ ಬಾಗಿಲ ಹಿಡಿಗಳಲ್ಲಿ ಆಲ್ ಪಿಯಾನೊ ಬ್ಲ್ಯಾಕ್ ಫಿನಿಶ್ ಹೊಂದಿರುವುದರ ಜೊತೆಗೆ ಬಾನೆಟ್ ಮೇಲೆ ಸಫಾರಿ ಮ್ಯಾಸ್ಕಾಟ್ ಹೊಂದಿರುತ್ತದೆ.
ದೇಶದಲ್ಲಿ, ಎಸ್‍ಯುವಿಗಳು, ಅತಿವೇಗವಾಗಿ ಬೆಳೆಯುತ್ತಿರುವ ಪ್ಯಾಸೆಂಜರ್ ವಾಹನ ವರ್ಗವಾಗಿದ್ದು, ಸಫಾರಿಯು ಸಂಸ್ಥೆಯ ನಿರಂತರವಾಗಿ ಬೆಳೆಯುತ್ತಿರುವ ಎಸ್‍ಯುವಿ ಮಾರಾಟಗಳಿಂದಾಗಿ ಪಡೆದುಕೊಂಡ ಚಲನೆಯನ್ನು ವರ್ಧಿಸಿ, ಕಳೆದ ವರ್ಷದ ಇದೇ ಸಮಯಕ್ಕೆ ಹೋಲಿಸಿದರೆ ಶೇ 20ರಷ್ಟು ವೈಟಿಡಿ ಬೆಳವಣಿಗೆಯನ್ನು ಸಾಧಿಸಿದೆ.
ಸವಾಲೊಡ್ಡುವಂತಹ ವರ್ಷದಲ್ಲಿ ಟಾಟಾ ಮೋಟರ್ಸ್, ಅಕ್ಟೋಬರ್ 2020ರಿಂದ ಪ್ರತಿ ತಿಂಗಳೂ ಸತತವಾಗಿ 23,000 ಯೂನಿಟ್‍ಗಳನ್ನು ತಯಾರಿಸುವ ಮೂಲಕ ಕಳೆದ ವರ್ಷ ಪ್ಯಾಸೆಂಜರ್ ವಾಹನ ಮಾರುಕಟ್ಟೆಯಲ್ಲಿ ಅದ್ವಿತೀಯ ಕಾರ್ಯ ಪ್ರದರ್ಶನ ನೀಡಿದೆ. ಮೇಲಾಗಿ, ಟಾಟಾ ಮೋಟರ್ಸ್ ಕಳೆದ 33 ತ್ರೈಮಾಸಿಕಗಳಲ್ಲಿ ತನ್ನ ಅತ್ಯಧಿಕ ಮಾರಾಟವನ್ನು ಸಾಧಿಸಿತ್ತು. ಸಂಸ್ಥೆಯ ಎಂದೆಂದಿಗೂ ಹೊಸತು ಸಿದ್ಧಾಂತದಡಿ ಕಳೆದ ವರ್ಷ ಆರಂಭಿಸಲಾದ ಬಿಎಸ್6 ಶ್ರೇಣಿಯು ಈ ಹೆಚ್ಚುತ್ತಿರುವ ಬೇಡಿಕೆಗೆ ಕಾರಣವಾಗಿದ್ದಿರಬಹುದು. ಪ್ರದರ್ಶನದಲ್ಲಿ ಎಲ್ಲರ ಕಣ್ಸೆಳೆದ ಪ್ರೀಮಿಯಮ್ ಹ್ಯಾಚ್‍ಬ್ಯಾಕ್ ಟಾಟಾ ಆಲ್ಟ್ರೋಜ್, ಮತ್ತು ಬಿಎಸ್6 ಹ್ಯಾರಿಯರ್ ಒಳಗೊಂಡಂತೆ ಎಂದೆಂದಿಗೂ ಹೊಸತು ಶ್ರೇಣಿಯ ಎಲ್ಲಾ ಉತ್ಪನ್ನಗಳಾದ್ಯಂತ ಬೇಡಿಕೆಯು ನಿಚ್ಚಳವಾಗಿತ್ತು.