ನವದೆಹಲಿ: ಸರ್ಕಾರಿ ಸ್ವಾಮ್ಯದಿಂದ ಟಾಟಾ ತೆಕ್ಕೆಗೆ ಸೇರಿರುವ ಏರ್ ಇಂಡಿಯಾ ಇಂದು ಹೂಡಿಕೆ ಹಿಂಪಡೆತಕ್ಕೆ ಸಂಬಂಧಿಸಿದಂತೆ ಎಲ್ಲ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುವ ಸಾಧ್ಯತೆ ಇದ್ದು, ಈ ಪ್ರಕ್ರಿಯೆಗೂ ಮುನ್ನ ಟಾಟಾ ಸನ್ಸ್ ಅಧ್ಯಕ್ಷ ಎನ್.ಚಂದ್ರಶೇಖರನ್ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಲಿದ್ದಾರೆ ಎಂದು ತಿಳಿದು ಬಂದಿದೆ.
ಟಾಟಾ ಸನ್ಸ್ 18 ಸಾವಿರ ಕೋಟಿ ರೂಪಾಯಿಗೆ ಏರ್ ಇಂಡಿಯಾವನ್ನು ಹರಾಜಿನಲ್ಲಿ ಖರೀದಿ ಮಾಡಿತ್ತು. ಏರ್ ಇಂಡಿಯಾ 61,562 ಕೋಟಿ ರೂಪಾಯಿ ಸಾಲದ ಸುಳಿಯಲ್ಲಿದ್ದು, ಕೇಂದ್ರ ಸರ್ಕಾರಕ್ಕೆ 2,700 ಕೋಟಿ ರೂಪಾಯಿಯನ್ನು ನಗದು ಮೂಲಕ ಡಿಸೆಂಬರ್ ಅಂತ್ಯದೊಳಗೆ ಪಾವತಿ ಮಾಡಲು ಸೂಚನೆ ನೀಡಲಾಗಿತ್ತು.
ಏರ್ ಇಂಡಿಯಾದಲ್ಲಿ ಕೇಂದ್ರ ಸರ್ಕಾರದ ಹೂಡಿಕೆ ಹಿಂತೆಗೆತ ಪ್ರಕ್ರಿಯೆಯನ್ನು ಜನವರಿ 27ರಂದು (ಗುರುವಾರ) ಪೂರ್ಣಗೊಳಿಸಲು ನಿರ್ಧಾರ ಮಾಡಲಾಗಿದೆ. ಜನವರಿ 20ರಂದು ಮುಕ್ತಾಯವಾದ ಬ್ಯಾಲೆನ್ಸ್ ಶೀಟ್ ಅನ್ನು ಇಂದು ಜನವರಿ 24ರಂದು ಒದಗಿಸಬೇಕು. ಇದನ್ನು ಟಾಟಾ ಸಂಸ್ಥೆ ಪರಿಶೀಲಿಸಬಹುದು ಅಥವಾ ಬೇರೆ ಬದಲಾವಣೆಗಳನ್ನು ಸೂಚಿಸಬಹುದು ಎಂದು ಏರ್ ಇಂಡಿಯಾ ಅಧಿಕಾರಿಗಳಿಗೆ ವಿನೋದ್ ಹೆಜ್ಮಾಡಿ ಕಳೆದ ವಾರ ಮಾಹಿತಿ ನೀಡಿದ್ದರು.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ನಾವು ಹೂಡಿಕೆ ಹಿಂತೆಗೆದುಕೊಳ್ಳುವ ಪ್ರಕ್ರಿಯೆಗೆ ಎಲ್ಲ ಕೆಲಸವನ್ನು ಇಲ್ಲಿಯವರೆಗೆ ಅತ್ಯುತ್ತಮವಾಗಿ ನಿರ್ವಹಿಸಿದ್ದೇವೆ ಎಂದು ವಿನೋದ್ ಹೆಜ್ಮಾಡಿ ಅಭಿಪ್ರಾಯಪಟ್ಟಿದ್ದು, ಇಂದು ಏರ್ ಇಂಡಿಯಾ ಹೂಡಿಕೆ ಹಿಂತೆಗೆತ ಪ್ರಕ್ರಿಯೆ ಪೂರ್ಣಗೊಳಿಸಲು ಸಹಕಾರ ನೀಡುವಂತೆ ಕೋರಿದ್ದಾರೆ.
ಇದನ್ನೂ ಓದಿ: ಷೇರುಪೇಟೆಯಲ್ಲಿ ಭಾರಿ ಕುಸಿತ.. ಸತತ ನಷ್ಟದಿಂದ ಹೂಡಿಕೆದಾರರು ಕಂಗಾಲು!