ETV Bharat / bharat

ಸೆಂಗೋಲ್​ 'ವಾಕಿಂಗ್​ ಸ್ಟಿಕ್​': ಕಾಂಗ್ರೆಸ್​ ತಮಿಳಿಗರ ಕ್ಷಮೆ ಕೋರಲು ಅಣ್ಣಾಮಲೈ ಆಗ್ರಹ - ರಾಜದಂಡ ಸೆಂಗೋಲ್​

ರಾಜದಂಡವಾದ ಸೆಂಗೋಲ್​ ಬಗ್ಗೆ ತೀವ್ರ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಹೇಳಿಕೆ ನೀಡಿದ್ದಾರೆ.

ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ
ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ
author img

By

Published : May 27, 2023, 9:41 AM IST

ಚೆನ್ನೈ (ತಮಿಳುನಾಡು): ನೂತನ ಸಂಸತ್​ ಭವನದ ಸ್ಪೀಕರ್​ ಪಕ್ಕದಲ್ಲಿ ಅಳವಡಿಸಲಾಗಿರುವ 'ಸೆಂಗೋಲ್' ​(ಅಧಿಕಾರ ದಂಡ) ಬಿಜೆಪಿ ಮತ್ತು ಕಾಂಗ್ರೆಸ್​ ನಡುವಿನ ವಾಗ್ವಾದಕ್ಕೆ ಕಾರಣವಾಗಿದೆ. ಇಂತಹ ಪವಿತ್ರ ದಂಡವನ್ನು ನೆಹರೂ ಅವರು ವಾಕಿಂಗ್​ ಸ್ಟಿಕ್​ ಆಗಿ ಮಾಡಿಕೊಂಡಿದ್ದರ ಬಗ್ಗೆ ಕಾಂಗ್ರೆಸ್​ ಸ್ಪಷ್ಟನೆ ನೀಡಬೇಕು ಎಂದು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ, ಮಾಜಿ ಐಪಿಎಸ್​ ಅಧಿಕಾರಿ ಕೆ. ಅಣ್ಣಾಮಲೈ ಒತ್ತಾಯಿಸಿದ್ದಾರೆ.

ಸೆಂಗೋಲ್​ ಎಂದು ಹೇಳಲಾಗುವ ದಂಡವು ವಾಕಿಂಗ್​ ಸ್ಟಿಕ್​ ಆಗಿದೆ ಎಂದು ಹೇಳುತ್ತಿರುವ ಕಾಂಗ್ರೆಸ್​ಗೆ ಛಾಟಿ ಬೀಸಿರುವ ಮಾಜಿ ಐಪಿಎಸ್​ ಅಧಿಕಾರಿ, 1947 ರಲ್ಲಿ ಸ್ವಾತಂತ್ರ್ಯ ಹಸ್ತಾಂತರದ ವೇಳೆ ಬ್ರಿಟಿಷರು ನೀಡಿದ ಸೆಂಗೋಲ್​ ಅನ್ನು ಇಷ್ಟು ದಿನ ವಾಕಿಂಗ್​​ ಸ್ಟಿಕ್​​ ಮಾದರಿಯಲ್ಲಿ ಮ್ಯೂಸಿಯಂನಲ್ಲಿ ಇಟ್ಟು ಕಾಂಗ್ರೆಸ್​ ತಪ್ಪು ಮಾಡಿದೆ. ಅಂತಹ ದಂಡವನ್ನು ನಿರ್ಲಕ್ಷಿಸಿದ ಪಕ್ಷ ಈ ಬಗ್ಗೆ ಸ್ಪಷ್ಟನೆ ನೀಡಿ, ತಮಿಳುನಾಡಿನ ಜನರ ಕ್ಷಮೆ ಕೋರಬೇಕು ಎಂದು ಆಗ್ರಹಿಸಿದ್ದಾರೆ.

ರಾಜಕೀಯ ಕಾರಣಕ್ಕಾಗಿ ಸೆಂಗೋಲ್​ ಅನ್ನು ವಾಕಿಂಗ್​​ ಸ್ಟಿಕ್​ ಎಂದೇಳಿ ಅದನ್ನು ವಸ್ತುಸಂಗ್ರಹಾಲಯದಲ್ಲಿ ಬಿಸಾಡಲಾಗಿತ್ತು. ಇದನ್ನು ಬ್ರಿಟಿಷ್​ ವೈಸ್​ರಾಯ್​ ಲಾರ್ಡ್​ ಮೌಂಟ್​ಬ್ಯಾಟನ್​ ಅವರು ನೀಡಿದ್ದರು. ಚೋಳ ಸಾಮ್ರಾಜ್ಯದ ಕಾಲದಿಂದಲೂ ಇದು ಖ್ಯಾತಿಯಲ್ಲಿದೆ. ಇಂತಹ ದಂಡವನ್ನು ನಿರ್ಲಕ್ಷಿಸಿ ಅಗೌರವ ತೋರಲಾಗಿದೆ. ಇದೀಗ ಪ್ರಧಾನಿ ಮೋದಿ ಅವರು ಆ ದಂಡಕ್ಕೆ ಘನತೆ ತಂದು ಸಂಸತ್ತಿನಲ್ಲಿ ಅಳವಡಿಸುತ್ತಿದ್ದಾರೆ. ಇದನ್ನು ವಿರೋಧಿಸುವ ಮೂಲಕ ಕಾಂಗ್ರೆಸ್​ ರಾಜಕೀಯವನ್ನು ಮೂರ್ಖತ್ವದ ಮಟ್ಟಕ್ಕೆ ಕೊಂಡೊಯ್ಯುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು.

ಬ್ರಿಟಿಷರಿಂದ ಭಾರತಕ್ಕೆ ಅಧಿಕಾರದ ಹಸ್ತಾಂತರದ ಸಂಕೇತವನ್ನು ಪ್ರತಿನಿಧಿಸಲು ಐತಿಹಾಸಿಕ ರಾಜದಂಡ 'ಸೆಂಗೊಲ್' ಅನ್ನು ಆಗಸ್ಟ್ 14, 1947 ರಂದು ಪಂಡಿತ್ ಜವಾಹರಲಾಲ್ ನೆಹರು ಅವರು ಲಾರ್ಡ್​ ಮೌಂಟ್​ ಬ್ಯಾಟನ್​ ಅವರಿಂದ ಸ್ವೀಕರಿಸಿದ್ದರು. ಸ್ವಾತಂತ್ರ್ಯ ಅಮೃತ ಮಹೋತ್ಸವದ ಕಾಲದಲ್ಲಿ ರಾಷ್ಟ್ರೀಯ ಚಿಹ್ನೆಯಾದ ಸೆಂಗೋಲ್ ಅನ್ನು ಅಳವಡಿಸಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ನಿರ್ಧಾರ ಕೈಗೊಂಡಿದ್ದಾರೆ. ಸಂಸತ್ತಿನ ಹೊಸ ಕಟ್ಟಡವು ಇದಕ್ಕೆ ಸಾಕ್ಷಿಯಾಗಲಿದೆ ಎಂದರು.

1947 ರಲ್ಲಿ ನೀಡಲಾದ ಅದೇ ಸೆಂಗೋಲ್ ಅನ್ನು ಪ್ರಧಾನಿಯವರು ಲೋಕಸಭೆಯಲ್ಲಿ ಸ್ಥಾಪಿಸಿದ್ದಾರೆ. ಮುಖ್ಯವಾಗಿ ಸ್ಪೀಕರ್ ವೇದಿಕೆಯ ಹತ್ತಿರ ಇಡಲಾಗಿದೆ. ಇದನ್ನು ರಾಷ್ಟ್ರವೇ ನೋಡುವಂತೆ ಪ್ರದರ್ಶಿಸಲಾಗುತ್ತದೆ. ವಿಶೇಷ ಸಂದರ್ಭಗಳಲ್ಲಿ ಮಾತ್ರ ಇದನ್ನು ಹೊರತೆಗೆಯಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ನಾಳೆ(ಮೇ 28) ಹೊಸ ಸಂಸತ್ ಭವನವನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ.

ಏನಿದು ಸೆಂಗೋಲ್​?: ಸಂಸತ್ತಿನಲ್ಲಿ ರಾಜದಂಡದ ಸ್ಥಾಪನೆಯಿಂದ ಸ್ವಾತಂತ್ರ್ಯ ದಿನದ ಸ್ಮರಣೆಯನ್ನು ಮರುಕಳಿಸಿದಂತಾಗುತ್ತದೆ. ಮಿತಿಯಿಲ್ಲದ ಭರವಸೆ, ಸಾಧ್ಯತೆಗಳು, ಬಲವಾದ ಮತ್ತು ಸಮೃದ್ಧ ರಾಷ್ಟ್ರವನ್ನು ನಿರ್ಮಿಸುವ ಸಂಕಲ್ಪದ ಸಂಕೇತವಾಗಿದೆ. ಸೆಂಗೋಲ್ ಎಂಬ ಪದವು ತಮಿಳಿನ 'ಸೆಮ್ಮೈ' ಎಂಬ ಪದದಿಂದ ಬಂದಿದೆ. ಇದರರ್ಥ 'ಸದಾಚಾರ'. ಇದು ಚೋಳ ಸಾಮ್ರಾಜ್ಯದ ಇಂಡಿಕ್ ನಾಗರಿಕತೆಯ ಕಾಲದಿಂದಲೂ ರೂಢಿಸಿಕೊಂಡು ಬಂದ ಪದ್ಧತಿಯಾಗಿದೆ. ರಾಜರು ಅಧಿಕಾರ ಹಸ್ತಾಂತರದ ವೇಳೆ ಈ ದಂಡವನ್ನು ನೀಡಲಾಗುತ್ತಿತ್ತು.

ಓದಿ: ಅಂದು ನೆಹರು... ಇಂದು ಮೋದಿ... ಸೆಂಗೋಲ್ ಚಿನ್ನದ ರಾಜದಂಡದ ಐತಿಹಾಸಿಕ ಹಿನ್ನೆಲೆ ತಿಳಿಯಿರಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.