ತಿರುಪತ್ತೂರು(ತಮಿಳುನಾಡು): ತಿರುಪತ್ತೂರಿನ ನೆಕ್ಕನಮಲೈ ಗ್ರಾಮಕ್ಕೆ ರಸ್ತೆ ಸೌಕರ್ಯ ಇಲ್ಲದ ಕಾರಣ ಸ್ಥಳೀಯರು ವ್ಯಕ್ತಿಯೊಬ್ಬರ ಶವವನ್ನು ಡೋಲಿಯಲ್ಲಿ ಬೆಟ್ಟದ ತುದಿಯಲ್ಲಿರುವ ಗ್ರಾಮಕ್ಕೆ 7 ಕಿ.ಮೀ. ಹೊತ್ತುಕೊಂಡು ಸಾಗಿಸಿದ್ದಾರೆ. ಈ ದುಸ್ಥಿತಿಯ ಘಟನೆ ತಮಿಳುನಾಡಿನಲ್ಲಿ ಬೆಳಕಿಗೆ ಬಂದಿದೆ.
ಮೃತ ಸರವಣನ್ ನೆಕ್ಕನಮಲೈ ಗ್ರಾಮದವರಾಗಿದ್ದು, ಬೆಂಗಳೂರಿನ ಖಾಸಗಿ ರೆಸ್ಟೋರೆಂಟ್‌ನಲ್ಲಿ ಕೆಲಸ ಮಾಡುತ್ತಿದ್ದರು. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಸರವಣನ್ ನಿನ್ನೆ (ಮೇ 22) ನಿಧನರಾಗಿದ್ದಾರೆ. ಮೃತದೇಹವನ್ನು ಅವರ ಸ್ವಗ್ರಾಮದ ತಪ್ಪಲಿಗೆ ತರಲಾಯಿತು. ರಸ್ತೆ ಸೌಲಭ್ಯದ ಕೊರತೆಯಿಂದಾಗಿ ಸ್ಥಳೀಯರು ಮೃತ ದೇಹವನ್ನು ಗುಡ್ಡಗಾಡು ಪ್ರದೇಶದ ಬುಡದಿಂದ ಬೆಟ್ಟದ ತುದಿಗೆ ಡೋಲಿಯಲ್ಲಿ 7 ಕಿ.ಮೀ. ಹೊತ್ತು ಸಾಗಿದ್ದಾರೆ.
ಇದರ ಬೆನ್ನಲ್ಲೇ ಸೂಕ್ತ ರಸ್ತೆ ಕಲ್ಪಿಸಿಕೊಡಬೇಕು ಎಂಬುದು ಜನರ ಆಗ್ರಹವಾಗಿದೆ. ಪ್ರತಿದಿನವೂ ಈ ಗ್ರಾಮದ ಜನರು ಎಲ್ಲೇ ಹೋಗಬೇಕೆಂದರೂ ನಡೆದುಕೊಂಡೇ ಹೊರಬರಬೇಕಾಗಿದೆ.
ಇದನ್ನೂ ಓದಿ: ಪ್ರಮುಖ ಹೂಡಿಕೆ ಪ್ರೋತ್ಸಾಹ ಒಪ್ಪಂದಗಳಿಗೆ ಭಾರತ - ಅಮೆರಿಕ ಸಹಿ