ETV Bharat / bharat

ತಾಳೆ ಹಣ್ಣು ತಿಂದರೆ ಸ್ತನಗಳು ದೊಡ್ಡದಾಗುತ್ತವೆ ಎಂದ ಯೂಟ್ಯೂಬ್​ ವೈದ್ಯೆಗೆ ಸಂಕಷ್ಟ - ವೈದ್ಯೆ ಶರ್ಮಿಕಾ

ತಮಿಳುನಾಡಿನಲ್ಲಿ ಸಿದ್ಧ ವೈದ್ಯ ಪದ್ಧತಿಯಲ್ಲಿ ಹೆಸರು ಮಾಡಿರುವ ವೈದ್ಯೆ ಶರ್ಮಿಕಾ ಯೂಟ್ಯೂಬ್ ಚಾನಲ್​ನಲ್ಲಿ ಜನರಿಗೆ ತಪ್ಪು ಮಾಹಿತಿ ನೀಡಿರುವ ಆರೋಪ ಎದುರಿಸುತ್ತಿದ್ದಾರೆ. ಈ ಬಗ್ಗೆ ವಿವರಣೆ ನೀಡುವಂತೆ ಭಾರತೀಯ ಔಷಧ ಮತ್ತು ಹೋಮಿಯೋಪತಿ ಇಲಾಖೆ ಸೂಚನೆ ನೀಡಿದೆ.

tamil-nadu-siddha-doctor-sharmika-who-is-in-trouble-with-the-wrong-medical-advice
ತಾಳೆ ಹಣ್ಣು ತಿಂದರೆ ಸ್ತನಗಳು ದೊಡ್ಡದಾಗುತ್ತವೆ ಎಂದ ಯೂಟ್ಯೂಬ್​ ವೈದ್ಯೆಗೆ ಸಂಕಷ್ಟ
author img

By

Published : Jan 25, 2023, 8:12 PM IST

Updated : Jan 27, 2023, 6:49 PM IST

ತಾಳೆ ಹಣ್ಣು ತಿಂದರೆ ಸ್ತನಗಳು ದೊಡ್ಡದಾಗುತ್ತವೆ ಎಂದ ಯೂಟ್ಯೂಬ್​ ವೈದ್ಯೆಗೆ ಸಂಕಷ್ಟ

ಚೆನ್ನೈ (ತಮಿಳುನಾಡು): ಇತ್ತೀಚೆಗೆ ಸಾಮಾಜಿಕ ಜಾಲತಾಣವು ಸಾಕಷ್ಟು ಜನರಿಗೆ ತಮಗೆ ತಿಳಿದ ವಿಷಯಗಳನ್ನು ಹಂಚಿಕೊಳ್ಳಲು ಉತ್ತಮ ವೇದಿಕೆಯಾಗಿ ಮಾರ್ಪಟ್ಟಿದೆ. ಫೇಸ್​ಬುಕ್​, ಇನ್​​ಸ್ಟಾಗ್ರಾಮ್​, ಯೂಟ್ಯೂಬ್ ಚಾನಲ್‌ಗಳಲ್ಲಿ ಆರೋಗ್ಯ, ಆಹಾರ, ಜೀವನ ಶೈಲಿ, ಶೈಕ್ಷಣಿಕ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ವಿಷಯ ಪರಿಣಿತರು, ಪಂಡಿತರು, ವೃತ್ತಿಪರರು ಮಾತ್ರವಲ್ಲದೇ ಯಾರೇ ಆಗಿದ್ದರೂ ಸಹ ಮುಕ್ತವಾಗಿ ಮಾಹಿತಿ ಹಂಚಿಕೊಳ್ಳುವುದು ಮತ್ತು ಸಲಹೆಗಳನ್ನು ನೀಡುವುದು ಸಾಮಾನ್ಯವಾಗಿದೆ. ಹೀಗೆ.. ಯೂಟ್ಯೂಬ್ ಚಾನಲ್‌ನಲ್ಲಿ ವೈದ್ಯಕೀಯ ಸಲಹೆ ನೀಡುತ್ತಿದ್ದ ತಮಿಳುನಾಡಿನ ವೈದ್ಯೆಯೊಬ್ಬರು ತಪ್ಪು ಸಲಹೆ ನೀಡಿದ ಆರೋಪವನ್ನು ಎದುರಿಸುತ್ತಿದ್ದು, ಇದರಿಂದ ಅವರು ಸಂಕಷ್ಟಕ್ಕೂ ಸಿಲುಕಿದ್ದಾರೆ.

ಹೌದು, ಸಿದ್ಧ ವೈದ್ಯ ಪದ್ಧತಿಯಲ್ಲಿ ಹೆಸರು ಮಾಡಿರುವ ವೈದ್ಯೆ ಶರ್ಮಿಕಾ ಎಂಬುವವರು ಇತ್ತೀಚೆಗೆ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಎರಡು ವೈದ್ಯಕೀಯ ಸಲಹೆಗಳನ್ನು ನೀಡಿದ್ದರು. ತಾಳೆ ಹಣ್ಣು ತಿಂದರೆ ಮಹಿಳೆಯರ ಸ್ತನಗಳು ದೊಡ್ಡದಾಗುತ್ತವೆ ಎಂದು ಡಾ. ಶರ್ಮಿಕಾ ಹೇಳಿದ್ದರು. ಈ ವಿಡಿಯೋ ಸಾಕಷ್ಟು ವೀಕ್ಷಕರನ್ನು ತಲುಪಿತ್ತು. ಅದೇ ರೀತಿ ಒಂದು ಕಪ್ ಗುಲಾಬ್​ ಜಾಮೂನ್ ತಿಂದರೆ 3 ಕೆಜಿ ದೇಹದ ತೂಕ ಹೆಚ್ಚುತ್ತದೆ ಎಂದು ಶರ್ಮಿಕಾ ಸಲಹೆ ನೀಡಿದ್ದರು. ಆದರೆ, ಈ ವಿಚಾರಗಳು ವೈಜ್ಞಾನಿಕವಾಗಿ ಸತ್ಯವಲ್ಲ ಎಂಬ ಟೀಕೆ ಕೇಳಿ ಬಂದಿದೆ.

ಅವೈಜ್ಞಾನಿಕ ಮಾಹಿತಿ ಆರೋಪ: ಅಂದಹಾಗೆ ಯೂಟ್ಯೂಬ್ ಚಾನಲ್‌ನಲ್ಲಿ ವೈದ್ಯಕೀಯ ಸಲಹೆ ನೀಡುವಲ್ಲಿ ಜನಪ್ರಿಯರಾಗಿ ಶರ್ಮಿಕಾ, ತಮಿಳುನಾಡಿನ ಬಿಜೆಪಿ ಅಲ್ಪಸಂಖ್ಯಾತ ವಿಭಾಗದ ನಾಯಕಿ ಡೈಸಿ ಚರಣ್ ಅವರ ಪುತ್ರಿ. ಇವರು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದ ಸಾಕಷ್ಟು ವಿಚಾರಗಳನ್ನು ಜನರು ಮೆಚ್ಚಿಕೊಂಡಿದ್ದರು. ನಿಮ್ಮ ಸಲಹೆಗಳು ಹಾಗೂ ಅರ್ಥ ಮಾಡಿಕೊಳ್ಳಲು ಸುಲಭ ಎಂದೆಲ್ಲ ಜನರಿಂದ ಪ್ರತಿಕ್ರಿಯೆ ಬರುತ್ತಿತ್ತು. ಆದರೆ, ತಾಳೆ ಹಣ್ಣು ಹಾಗೂ ಗುಲಾಬ್​ ಜಾಮೂನ್ ವಿಚಾರವಾಗಿ ನೀಡಿರುವ ಸಲಹೆಗಳು ಅವೈಜ್ಞಾನಿಕವಾಗಿವೆ ಎಂಬ ಆರೋಪ ಕೇಳಿ ಬಂದಿದೆ.

ಈ ಕುರಿತ ವಿಡಿಯೋ ವೈರಲ್ ಕೂಡ​ ಆಗಿ ಶರ್ಮಿಕಾ ಸಲಹೆಗಳ ವಿರುದ್ಧ ಸಾಕಷ್ಟು ಖಂಡನೆ ವ್ಯಕ್ತವಾಗಿದೆ. ತಪ್ಪು ವೈದ್ಯಕೀಯ ಸಲಹೆ ನೀಡಿ ಜನರ ಜೀವದ ಚೆಲ್ಲಾಟವಾಡಲಾಗುತ್ತಿದೆ. ಆದ್ದರಿಂದ ಶರ್ಮಿಕಾ ವಿರುದ್ಧ ಕ್ರಮ ಕೈಗೊಳ್ಳುವಂತೆ ತಜ್ಞ ವೈದ್ಯರು ಸೇರಿದಂತೆ ಹಲವರು ಭಾರತೀಯ ವೈದ್ಯಕೀಯ ಸಂಘಕ್ಕೆ ಇ-ಮೇಲ್, ಇತರ ಮಾರ್ಗಗಳ ಮೂಲಕ ದೂರುಗಳನ್ನು ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ.

ಶರ್ಮಿಕಾಗೆ ವಿವರಣೆ ನೀಡುವಂತೆ ಸೂಚನೆ: ತಪ್ಪು ವೈದ್ಯಕೀಯ ಸಲಹೆ ನೀಡಿದ ಆರೋಪದ ಮೇಲೆ ಶರ್ಮಿಕಾ ವಿರುದ್ಧ ದೂರುಗಳು ಬರುತ್ತಿದ್ದಂತೆ ಸಂಬಂಧಪಟ್ಟ ಅಧಿಕಾರಿಗಳು ಸಹ ಎಚ್ಚೆತ್ತುಕೊಂಡಿದ್ದಾರೆ. ಅಲ್ಲದೇ, ಇದೇ ವಿಷಯವಾಗಿ ಭಾರತೀಯ ಔಷಧ ಮತ್ತು ಹೋಮಿಯೋಪತಿ ಇಲಾಖೆ ಮತ್ತು ತಮಿಳುನಾಡು ಸಿದ್ಧ ವೈದ್ಯಕೀಯ ಮಂಡಳಿಯು ಶರ್ಮಿಕಾ ಅವರಿಗೆ ಜನವರಿ 6ರಂದು ನೋಟಿಸ್ ಜಾರಿ ಮಾಡಿತ್ತು. ಇದರ ಬೆನ್ನಲ್ಲೇ, ಜನವರಿ 24ರಂದು ತಮಿಳುನಾಡು ಭಾರತೀಯ ಔಷಧ ಮತ್ತು ಹೋಮಿಯೋಪತಿ ವೈದ್ಯಕೀಯ ನಿರ್ದೇಶಕರ ಕಚೇರಿಗೆ ಶರ್ಮಿಕಾ ಹಾಜರಾಗಿ ವಿವರಣೆ ನೀಡಿದ್ದರು.

ಲಿಖಿತ ವಿವರಣೆ ಸಲ್ಲಿಸಲು ಗಡುವು: ಸದ್ಯ ಶರ್ಮಿಕಾ ನೀಡಿರುವ ಮೌಖಿಕ ವಿವರಣೆಗಳನ್ನು ಪರಿಶೀಲಿಸಲು ಸಮಿತಿಯನ್ನು ರಚಿಸಲಾಗಿದ್ದು, ಸಮಿತಿಯ ವರದಿ ಆಧರಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೇ, ಈ ವಿಷಯವಾಗಿ ಲಿಖಿತ ವಿವರಣೆ ನೀಡುವಂತೆ ಫೆಬ್ರವರಿ 10ರವರೆಗೆ ಶರ್ಮಿಕಾ ಅವರಿಗೆ ಕಾಲಾವಕಾಶ ನೀಡಲಾಗಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಋತುಚಕ್ರ ಸಮಯದಲ್ಲಿ ಅಗತ್ಯವಾಗಿ ಬೇಕಾಗಿರುವ ಸೌಲಭ್ಯಗಳಿಂದ ಮಹಿಳೆಯರು ವಂಚಿತ: ಋತುಚಕ್ರ ಬಡತನ ಎಂದರೇನು?

Last Updated : Jan 27, 2023, 6:49 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.