ETV Bharat / bharat

ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿ ಬಲಿ.. ಕಾನ್ಸ್​ಟೇಬಲ್ ಮಗಳನ್ನು ರೈಲಿಗೆ ತಳ್ಳಿ ಕೊಂದ ಪಾಪಿ - ಪ್ರೇಮಿಯೊಬ್ಬ ಯುವತಿಯನ್ನು ರೈಲಿನಡಿ ತಳ್ಳಿ ಕೊಲೆ

ಪ್ರೀತಿಸಲಿಲ್ಲ ಎಂಬ ಕಾರಣಕ್ಕೆ ಪ್ರೇಮಿಯೊಬ್ಬ ಯುವತಿಯನ್ನು ರೈಲಿನಡಿ ತಳ್ಳಿ ಕೊಲೆ ಮಾಡಿದ್ದಾನೆ. ಈ ದಾರುಣ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

Tamil Nadu Police arrests Satish  pushed his girlfriend before train  young woman murder over love issue  ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿ ಬಲಿ  ಕಾನ್ಸ್​ಟೇಬಲ್ ಮಗಳನ್ನು ರೈಲಿಗೆ ತಳ್ಳಿ ಕೊಂದ ಪಾಪಿ  ಪ್ರೀತಿಸಲಿಲ್ಲ ಎಂಬ ಕಾರಣಕ್ಕೆ ಯುವತಿ ಕೊಲೆ  ಸೇಂಟ್ ಥಾಮಸ್ ಮೌಂಟ್ ರೈಲು ನಿಲ್ದಾಣ  ಪ್ರೇಮಿಯೊಬ್ಬ ಯುವತಿಯನ್ನು ರೈಲಿನಡಿ ತಳ್ಳಿ ಕೊಲೆ  ಖಾಸಗಿ ಕಾಲೇಜಿನಲ್ಲಿ ಬಿಕಾಂ ದ್ವಿತೀಯ ವರ್ಷ
ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿ ಬಲಿ
author img

By

Published : Oct 14, 2022, 9:26 AM IST

ಚೆನ್ನೈ, ತಮಿಳುನಾಡು: ಇಲ್ಲಿನ ಸೇಂಟ್ ಥಾಮಸ್ ಮೌಂಟ್ ರೈಲು ನಿಲ್ದಾಣದಲ್ಲಿ ದಾರುಣ ಘಟನೆ ನಡೆದಿದೆ. ಪ್ರೀತಿಯನ್ನು ತಿರಸ್ಕರಿಸಿದ್ದಕ್ಕೆ ಯುವಕನೊಬ್ಬ ಯುವತಿಯನ್ನು ರೈಲಿನಡಿ ತಳ್ಳಿ ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಸಂತ್ರಸ್ತೆಯ ತಂದೆ ಮಾಣಿಕ್ಯಂ (47) ಪೊಲೀಸ್ ಕಾನ್ಸ್​ಟೇಬಲ್ ಆಗಿ ಕೆಲಸ ಮಾಡುತ್ತಿದ್ದಾರೆ. ಇವರ ಮಗಳು ಸತ್ಯ (20) ನಗರದ ಖಾಸಗಿ ಕಾಲೇಜಿನಲ್ಲಿ ಬಿಕಾಂ ದ್ವಿತೀಯ ವರ್ಷ ಓದುತ್ತಿದ್ದರು. ಆದಂಬಾಕ್ಕಂನ ಸತೀಶ್ (23) ಎಂಬ ಯುವಕ ಸತ್ಯಳನ್ನು ಪ್ರೀತಿಸುತ್ತಿದ್ದ. ಎಂದಿನಂತೆ ಪರಿಂಗಿಮಲೈ ಕಾಲೇಜಿಗೆ ಹೋಗಲು ರೈಲ್ವೇ ನಿಲ್ದಾಣದಲ್ಲಿ ಸತ್ಯ ನಿಂತಿದ್ದಾರೆ. ಆಗ ಅಲ್ಲಿಗೆ ಬಂದ ಸತೀಶ್, ಸತ್ಯ ಜತೆ ಜಗಳವಾಡಿದ್ದಾನೆ. ಬಳಿಕ ಬರುತ್ತಿದ್ದ ರೈಲಿನ ಕೆಳಗೆ ತಳ್ಳಿದ್ದಾನೆ. ಈ ವೇಳೆ ಸತ್ಯ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿ ಬಲಿ

ಆರೋಪಿ ಸತೀಶ್ ಅಲ್ಲಿಂದ ಪರಾರಿಯಾಗಿದ್ದನು. ಈ ಬಗ್ಗೆ ಪ್ರಯಾಣಿಕರು ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಸ್ಥಳಕ್ಕಾಗಮಿಸಿ ಸತ್ಯ ಅವರ ಶವವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದರು. ಸ್ಥಳಕ್ಕಾಗಮಿಸಿ ಪೋಷಕರು ಮಗಳನ್ನು ನೋಡಿ ಬಿಕ್ಕಿ ಬಿಕ್ಕಿ ಅತ್ತರು. ಆರೋಪಿ ಸತೀಶ್‌ಗಾಗಿ ತೀವ್ರ ಶೋಧ ನಡೆಸಿದ್ದ ವಿಶೇಷ ತಂಡ ಕೊನೆಗೂ ಆತನನ್ನು ಬಂಧಿಸಿದೆ. ಈ ಘಟನೆ ಕುರಿತು ಪೊಲೀಸರು ಹೆಚ್ಚಿನ ವಿಚಾರಣೆ ಕೈಗೊಂಡಿದ್ದಾರೆ.

ಓದಿ: ಅರೆ ನಗ್ನ ಫೋಟೋ ಹರಿಬಿಡುವುದಾಗಿ ಇನ್‌ಸ್ಟಾಗ್ರಾಮ್‌ ಯುವತಿಯಿಂದ ಬೆದರಿಕೆ: ಕಟ್ಟಡದಿಂದ ಜಿಗಿದು ಯುವಕ ಆತ್ಮಹತ್ಯೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.