ETV Bharat / bharat

ತಮಿಳುನಾಡಿನ ವೈರಲ್ ವಿಡಿಯೋ ಪ್ರಕರಣ, ಮೂವರು ಆರೋಪಿಗಳ ಬಂಧನ: 42 ಬಳಕೆದಾರರಿಗೆ ನೋಟಿಸ್​ - ತನಿಖೆಗೆ 10 ಸದಸ್ಯರ ತಂಡ

ತಮಿಳುನಾಡಿನಲ್ಲಿ ಸಾವಿಗೀಡಾದ ಬಿಹಾರಿ ಜನರು ಅಪಘಾತದಲ್ಲಿ ಬಲಿಯಾಗಿದ್ದರು. ಅವರ ಸಾವಿಗೆ ಕಾರಣ ತಮಿಳರು ಅಲ್ಲ ಎಂದು ತಮಿಳುನಾಡು ಹಾಗೂ ಬಿಹಾರ ಪೊಲೀಸರು ಕೈಗೊಂಡ ಜಂಟಿ ತನಿಖೆಯಲ್ಲಿ ಮಾಹಿತಿ ಹೊರಬಿದ್ದಿದೆ. ನಕಲಿ ವಿಡಿಯೋ ಚಿತ್ರೀಕರಿಸಿದ ಪ್ರಮುಖ ಆರೋಪಿ ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

Tamil Nadu Viral Video Case
ತಮಿಳುನಾಡಿನ ವೈರಲ್ ವಿಡಿಯೋ ಪ್ರಕರಣ
author img

By

Published : Mar 11, 2023, 5:35 PM IST

ಪಾಟ್ನಾ:ಬಿಹಾರಿಗಳನ್ನು ಕೊಲ್ಲಲಾಗುತ್ತಿದೆ ಎಂಬ ವೈರಲ್ ವಿಡಿಯೋ ಪ್ರಕರಣವೂ ತಮಿಳುನಾಡಿನಲ್ಲಿ ಭಾರಿ ಸದ್ದು ಮಾಡಿತ್ತು. ರಾಜಕೀಯ ಪ್ರಮುಖ ಪಕ್ಷಗಳು ಸರ್ಕಾರದ ವಿರುದ್ಧ ಆರೋಪದ ಚಾಟಿ ಬೀಸಿ,ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದವು. ತಮಿಳುನಾಡಿನಲ್ಲಿ ಸಾವಿಗೀಡಾದ ಬಿಹಾರಿ ಜನರು ಅಪಘಾತದಲ್ಲಿ ಬಲಿಯಾಗಿದ್ದರು. ಅವರ ಸಾವಿಗೆ ಕಾರಣ ತಮಿಳರು ಅಲ್ಲ. ಎರಡೂ ರಾಜ್ಯಗಳ ಪೊಲೀಸರು ನಡೆಸಿದ ತನಿಖೆಯಲ್ಲಿ ಈ ಮಾಹಿತಿ ಹೊರಬಿದ್ದಿದೆ. ಇಡೀ ಪ್ರಕರಣದ ತನಿಖೆ ಇನ್ನೂ ಮುಂದುವರೆದಿದ್ದು, ನಕಲಿ ವಿಡಿಯೋ ಚಿತ್ರೀಕರಿಸಿದ ಪ್ರಮುಖ ಆರೋಪಿ ಸೇರಿ ಒಟ್ಟು ಮೂವರನ್ನು ಬಂಧಿಸಲಾಗಿದೆ.

ಎರಡು ರಾಜ್ಯ ಪೊಲೀಸರ ಜಂಟಿ ತನಿಖೆ: ವೈರಲ್ ವಿಡಿಯೋ ಪ್ರಕರಣದ ತನಿಖೆಗಾಗಿ ತಮಿಳುನಾಡಿನ ಪೊಲೀಸರ ತಂಡ ಬಿಹಾರಕ್ಕೆ ಆಗಮಿಸಿತು. ಇಒಯು ಹಾಗೂ ಬಿಹಾರ ಪೊಲೀಸರು ಆರೋಪಿಗಳಾದ ಅಮನ್ ಕುಮಾರ್, ಮನೀಶ್ ಕಶ್ಯಪ್, ರಾಕೇಶ್ ರಂಜನ್ ಕುಮಾರ್ ಮತ್ತು ಯುವರಾಜ್ ಸಿಂಗ್ ರಜಪೂತ್ ಸೇರಿದಂತೆ ನಾಲ್ವರನ್ನು ಗುರುತಿಸಿದ್ದಾರೆ. ಆದರೆ, ಆರೋಪಿ ಮನೀಶ್ ಕಶ್ಯಪ್ ಮತ್ತು ಯುವರಾಜ್ ಸಿಂಗ್ ರಜಪೂತ್ ಅವರ ಬಂಧನ ಇನ್ನೂ ಆಗಿಲ್ಲ. ಇಬ್ಬರ ವಿರುದ್ಧವೂ ಬಂಧನ ವಾರಂಟ್ ನೀಡುವಂತೆ ಪೊಲೀಸರು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.

42 ಬಳಕೆದಾರರಿಗೆ ನೋಟಿಸ್​: ಬಿಹಾರ ಪೊಲೀಸರ ಮಾಹಿತಿ ಪ್ರಕಾರ, ಪೊಲೀಸರು ಈಗಾಗಲೇ ಜಮುಯಿದ ಅಮನ್ ಕುಮಾರ್ ಮತ್ತು ಗೋಪಾಲಗಂಜ್‌ ನಗರದ ರಾಕೇಶ್ ರಂಜನ್​ಕುಮಾರ್ ಅವರನ್ನು ಬಂಧಿಸಿದ್ದಾರೆ. ಮತ್ತೊಬ್ಬ ಆರೋಪಿ ಉಮೇಶ್ ಮಹತೋ ಎಂಬಾತನನ್ನು ಗೋಪಾಲ್‌ಗಂಜ್‌ನಲ್ಲಿ ಬಂಧಿಸಿದ್ದು, ಆತನ ವಿಚಾರಣೆ ನಡೆಯುತ್ತಿದೆ. ವೈರಲ್ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ 42 ಸಾಮಾಜಿಕ ಮಾಧ್ಯಮ ಬಳಕೆದಾರರಿಗೆ ನೋಟಿಸ್ ಜಾರಿ ಮಾಡಲಾಗಿದೆ.

ವೈರಲ್ ವಿಡಿಯೋ ಒಪ್ಪಿಕೊಂಡ ಆರೋಪಿ: ಗೋಪಾಲಗಂಜ್​ದಲ್ಲಿ ಬಂಧಿತ ಆರೋಪಿ ರಾಕೇಶ್ ರಂಜನ್ ಕುಮಾರ್ ಅವರನ್ನು ವಿಚಾರಣೆಗೆ ಒಳಪಡಿಸಿದಾಗ ಇಬ್ಬರ ನೆರವಿನಿಂದ ನಕಲಿ ವಿಡಿಯೋ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ. ಈ ವಿಡಿಯೋವನ್ನು ಜಕ್ಕನ್‌ಪುರದ ಬೆಂಗಾಲಿ ಕಾಲೋನಿಯಲ್ಲಿ ಬಾಡಿಗೆ ಮನೆಯಲ್ಲಿ ಚಿತ್ರೀಕರಿಸಲಾಗಿದೆ ಎಂದು ತಿಳಿಸಿದ್ದಾನೆ. ಎಲ್ಲ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 468, 471, 153, 153ಎ, 153ಬಿ, 505 1ಬಿ, 505 1ಬಿ, 120ಬಿ ಮತ್ತು 67 ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತನಿಖೆಗೆ 10 ಸದಸ್ಯರ ತಂಡ: ವೈರಲ್ ವಿಡಿಯೋ ಪ್ರಕರಣ ತನಿಖೆ ನಡೆಸಲು 10 ಸದಸ್ಯರ ತಂಡ ರಚಿಸಲಾಗಿದೆ, ಈ ತನಿಖೆಯಲ್ಲಿ ಇದು ವರೆಗೆ 30 ದಾರಿತಪ್ಪಿಸುವ ವಿಡಿಯೋಗಳು ಮತ್ತು ಪೋಸ್ಟ್‌ಗಳನ್ನು ಗುರುತಿಸಲಾಗಿದೆ. 26 ಟ್ವೀಟ್‌ಗಳು ಮತ್ತು ಫೇಸ್‌ಬುಕ್ ಖಾತೆಗಳನ್ನು ಸಹ ಪತ್ತೆ ಹಚ್ಚಲಾಗಿದೆ. ತಮಿಳುನಾಡು ಪೊಲೀಸರು ಇದುವರೆಗೆ 13 ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ.

ದಾರಿ ತಪ್ಪಿಸುವ ವಿಡಿಯೋಗಳು: ಬಿಹಾರದ ಎಡಿಜಿ ಜಿತೇಂದ್ರ ಸಿಂಗ್ ಗಂಗ್ವಾರ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಹೋರಾಟದ ಎಲ್ಲಾ ವಿಡಿಯೋಗಳು ದಾರಿತಪ್ಪಿಸುವಂತಿವೆ ಎಂದು ಹೇಳಿದ್ದಾರೆ. ಈ ವಿಡಿಯೋ ಬಿಡುಗಡೆ ಮಾಡಿ ಜನರಲ್ಲಿ ಗಾಬರಿ ಮೂಡಿಸುವ ಕೆಲಸ ಮಾಡಿರುವ ಎಲ್ಲ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿದ್ದಾರೆ. ಕೆಲವು ದಿನಗಳ ಹಿಂದೆ ಸಾಮಾಜಿಕ ಮಾಧ್ಯಮದಲ್ಲಿ ತಮಿಳರು ಬಿಹಾರಿ ಕಾರ್ಮಿಕರನ್ನು ಥಳಿಸುತ್ತಿರುವ ವಿಡಿಯೋವನ್ನು ತೋರಿಸಲಾಗಿದೆ ಈ ವಿಷಯದ ಕುರಿತಾಗಿ ಪ್ರತಿಪಕ್ಷಗಳು ಬಿಹಾರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದವು. ಈ ಘಟನೆಗೆ ಸಂಬಂಧಿಸಿದಂತೆ ಬಿಹಾರ ಸರ್ಕಾರ ತನಿಖಾ ತಂಡವನ್ನು ತಮಿಳುನಾಡಿಗೆ ಕಳುಹಿಸಿ ತನಿಖೆ ನಡೆಸಿದಾಗ ಸಂಪೂರ್ಣ ಸತ್ಯ ಬಯಲಿಗೆ ಬಂದಿದೆ.

ಕಾರ್ಮಿಕರ ಮೇಲಿನ ಹಲ್ಲೆ ಪ್ರಕರಣದ ತನಿಖೆಗಾಗಿ ತಮಿಳುನಾಡಿಗೆ ನಾಲ್ವರು ಸದಸ್ಯರ ತಂಡವನ್ನು ಕಳುಹಿಸಲಾಗಿದೆ. ನಾಲ್ಕು ಜಿಲ್ಲಾ ಜಿಲ್ಲಾಧಿಕಾರಿ, ಎಸ್ಪಿ, ಕಂದಾಯ ಅಧಿಕಾರಿಗಳೊಂದಿಗೆ ಕೈಗಾರಿಕಾ ಒಕ್ಕೂಟಕ್ಕೆ ಸಂಬಂಧಿಸಿದಂತೆ ಜನರೊಂದಿಗೆ ಮಾತುಕತೆ ನಡೆಸಿ ವರದಿಯನ್ನು ಸಿಎಂ ನಿತೀಶ್ ಅವರಿಗೆ ಸಲ್ಲಿಸಲಾಗಿದೆ. ಕಾರ್ಮಿಕ ಸಂಘ ಮತ್ತು ರೈತ ಸಂಘಟನೆಯಿಂದ ಯಾವುದೇ ಘಟನೆ ನಡೆದಿಲ್ಲ. ಅಂತರ್ಜಾಲ ಮಾಧ್ಯಮದಲ್ಲಿ ಸುಳ್ಳು ಪ್ರಸಾರ ವಿಡಿಯೋ ವೈರಲ್ ಮಾಡಲಾಗಿದೆ ಎಂದು ಹೇಳಲಾಗಿದೆ.

ಪ್ರಕರಣ ತನಿಖೆ: ವೈರಲ್ ಆಗಿರುವ ನಕಲಿ ವಿಡಿಯೋಗಳಲ್ಲಿ ತಮಿಳುನಾಡಿನಲ್ಲಿ ಬಿಹಾರಿಗಳನ್ನು ಕೊಲ್ಲಲಾಗುತ್ತಿದೆ ಎಂಬ ಸುದ್ದಿ ಹಬ್ಬಿಸುವ ಪ್ರಯತ್ನ ನಡೆದಿದೆ. ವಿಡಿಯೋ ನೋಡಿದ ಬಿಹಾರಿಗಳ ಮನಸ್ಸಿನಲ್ಲಿ ಭಯ ಹುಟ್ಟಿಕೊಂಡಿದೆ. ಇದರಿಂದ ಬಿಹಾರದ ಬಹಳಷ್ಟು ಕಾರ್ಮಿಕರು ತಮ್ಮ ಕೆಲಸವನ್ನು ಬಿಟ್ಟು ಬಿಹಾರಕ್ಕೆ ಬಂದರು.

ಬಿಹಾರದಲ್ಲಿ ವಾಸಿಸುವ ಅನೇಕ ಜನರು ತಮ್ಮ ಪುತ್ರರು, ಸಹೋದರರು ಮತ್ತು ಗಂಡನ ಬಗ್ಗೆ ಚಿಂತಿಸಲಾರಂಭಿಸಿದರು. ತಮಿಳುನಾಡಿನ ಹಲವು ಗಿರಣಿಗಳನ್ನು ಮುಚ್ಚಲಾಗಿತು. ಬಿಹಾರಿಗಳನ್ನು ತಮಿಳುನಾಡು ತೊರೆಯುವಂತೆ ವದಂತಿಗಳೂ ಹಬ್ಬಿದ್ದವು. ಆದರೆ ಪ್ರಕರಣಕ್ಕೆ ರಾಜ್ಯದಲ್ಲಿ ಘರ್ಷಣೆ ಹೊತ್ತಿಕೊಂಡ ನಂತರ ಎರಡೂ ರಾಜ್ಯಗಳ ಪೊಲೀಸರು ತನಿಖೆ ಆರಂಭಿಸಿದಾಗ ಇಡೀ ವಿಷಯ ಸುಳ್ಳು ಎಂದು ಮಾಹಿತಿ ಎಂಬ ಹೊರಬಿದ್ದಿದೆ.

ಇದನ್ನೂಓದಿ:ಇಡಿ ಅಧಿಕಾರಿಗಳಿಂದ ಕವಿತಾ ವಿಚಾರಣೆ: ಬಿಜೆಪಿ ಕಿರುಕುಳದ ವಿರುದ್ಧ ಹೋರಾಡುವುದಾಗಿ ಕೆಸಿಆರ್ ಶಪಥ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.