ನವದೆಹಲಿ : ಚಾಲನೆ ಮಾಡುವಾಗ ಫೋನ್‌ನಲ್ಲಿ ಮಾತನಾಡುವುದನ್ನು ಶೀಘ್ರದಲ್ಲೇ ಭಾರತದಲ್ಲಿ ಕಾನೂನುಬದ್ಧಗೊಳಿಸಲಾಗುವುದು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದರು.
ಲೋಕಸಭೆಯಲ್ಲಿ ಮಾತನಾಡಿದ ಅವರು, ಕಾರು ಚಾಲನೆ ಮಾಡುವಾಗ ಹ್ಯಾಂಡ್ ಫ್ರೀ ಡಿವೈಸ್ ಅಂದ್ರೆ ಬ್ಲೂಟೂತ್, ಇಯರ್‌ಫೋನ್ ಉಪಯೋಗಿಸಿ ಫೋನ್‍ನಲ್ಲಿ ಮಾತನಾಡಿದರೆ ಅದನ್ನು ಅಪರಾಧ ಎಂದು ಪರಿಗಣಿಸಲ್ಲ. ಆದರೆ, ಆಗ ಚಾಲಕ ಫೋನನ್ನು ಕಾರಿನಲ್ಲಿಡದೆ ಜೇಬಲ್ಲಿ ಇಟ್ಟುಕೊಂಡಿರಬೇಕು.
ಇದಕ್ಕೆ ಪೊಲೀಸರು ದಂಡ ವಿಧಿಸಬಾರದು. ಒಂದು ವೇಳೆ ಯಾರಾದ್ರೂ ದಂಡ ವಿಧಿಸಿದ್ರೆ ಇದನ್ನು ಕೋರ್ಟ್‍ನಲ್ಲಿ ಪ್ರಶ್ನಿಸಬಹುದು ಎಂದು ಸ್ಪಷ್ಟಪಡಿಸಿದ್ದಾರೆ. ಫೋನ್‌ನಲ್ಲಿ ಮಾತನಾಡುತ್ತಲೇ ಚಾಲನೆ ಮಾಡಬಹುದು ಎಂದ ಮಾತ್ರಕ್ಕೆ ಮೊಬೈಲ್ ಅನ್ನು ನೇರವಾಗಿ ಕಿವಿಗೆ ಇಟ್ಟುಕೊಂಡು ಸಾಗುವುದಕ್ಕೆ ಯಾವತ್ತಿಗೂ ಕೂಡ ಅನುಮತಿ ನೀಡಲ್ಲ.
ಮೊಬೈಲ್ ಅಥವಾ ಸ್ಮಾರ್ಟ್‌ಫೋನ್‌ಗಳು ದ್ವಿಚಕ್ರ, ತ್ರಿಚಕ್ರ, ಕಾರು, ಲಾರಿ, ಬಸ್‌ಗಳ ಚಾಲಕರ ಜೇಬಿನಲ್ಲಿ ಇರಬೇಕು. ಇಯರ್‌ಫೋನ್ ಅಥವಾ ಹ್ಯಾಂಡ್ಸ್‌ಫ್ರೀ ಸಾಧನಗಳನ್ನು ಬಳಸಿಕೊಂಡು ಜೇಬಿನಲ್ಲಿರುವ ಮೊಬೈಲ್ ಜೊತೆಗೆ ಸಂಪರ್ಕ ಸಾಧಿಸಿದ ಬಳಿಕ ಕರೆ ಸ್ವೀಕರಿಸಿ ಮಾತನಾಡಲು ಮಾತ್ರವೇ ಅವಕಾಶ ನೀಡಲಾಗುವುದು.
ರಸ್ತೆ ಅಪಘಾತಕ್ಕೆ ಅಥವಾ ರಸ್ತೆ ಸಂಚಾರದಲ್ಲಿ ಅಶಿಸ್ತು ಉಂಟು ಮಾಡುವ ಯಾವುದೇ ವರ್ತನೆಗೆ ಸಚಿವಾಲಯ ಪ್ರೋತ್ಸಾಹಿಸಲ್ಲಎಂದು ಸಚಿವ ಗಡ್ಕರಿ ಸ್ಪಷ್ಟಪಡಿಸಿದ್ದಾರೆ. ಈ ಹಿಂದೆ ಡ್ರೈವಿಂಗ್ ವೇಳೆ ಫೋನ್‍ನಲ್ಲಿ ಮಾತನಾಡಿದರೆ ಟ್ರಾಫಿಕ್ ಪೊಲೀಸರು ದಂಡ ವಿಧಿಸುತ್ತಿದ್ದರು. ಆದರೆ, ಇದೀಗ ಸರ್ಕಾರ ಈ ನಿಯಮದಲ್ಲಿ ಬದಲಾವಣೆಗೆ ಮುಂದಾಗಿದೆ.
ಇದನ್ನೂ ಓದಿ: ಹಿಜಾಬ್ ಬಗ್ಗೆ ವಿವಾದ ಸೃಷ್ಟಿಸುವವರ ಮೇಲೆ ಕಾನೂನು ಕ್ರಮ: ಬೊಮ್ಮಾಯಿ