ETV Bharat / bharat

ಸ್ವಯಂ ಘೋಷಿತ ದೇವಮಾನವ ರಾಮ್ ರಹೀಮ್‌ಗೆ Z+ ಭದ್ರತೆ

ಫೆಬ್ರವರಿ 7ರಂದು, ಹರಿಯಾಣ ಸರ್ಕಾರದ ಈ ನಿರ್ಧಾರದ ವಿರುದ್ಧ ಪರಮ್‌ಜಿತ್ ಸಿಂಗ್ ಸೊಹಾಲಿ ಅವರು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ ಬಳಿಕವೂ ಹರಿಯಾಣ ಜೈಲು ಆಡಳಿತ ರಾಮ್ ರಹೀಮ್‌ಗೆ ಮೂರು ವಾರಗಳ ಪೆರೋಲ್‌ ಮಂಜೂರು ಮಾಡಿದೆ..

ಸ್ವಯಂ ಘೋಷಿತ ದೇವಮಾನವ ರಾಮ್ ರಹೀಮ್‌
ಸ್ವಯಂ ಘೋಷಿತ ದೇವಮಾನವ ರಾಮ್ ರಹೀಮ್‌
author img

By

Published : Feb 22, 2022, 3:42 PM IST

ಚಂಡೀಗಢ : ಲೈಂಗಿಕ ಕಿರುಕುಳ ಮತ್ತು ಕೊಲೆ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿರುವ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್‌ಗೆ Z+ ಭದ್ರತೆ ನೀಡಲಾಗಿದೆ. ಖಲಿಸ್ತಾನಿಗಳಿಂದ ಜೀವ ಬೆದರಿಕೆ ಇದೆ ಎಂಬುದನ್ನು ಉಲ್ಲೇಖಿಸಿ ಹರಿಯಾಣ ಸರ್ಕಾರ ಭದ್ರತೆ ಹೆಚ್ಚಿಸಿದೆ.

ಹರಿಯಾಣದ ಜೈಲು ಆಡಳಿತವು ಇವರಿಗೆ 21 ದಿನಗಳ ಪೆರೋಲ್‌ ಮಂಜೂರು ಮಾಡಿದ ಮೂರು ವಾರಗಳ ನಂತರ, ಈ ಕ್ರಮಕ್ಕೆ ಸರ್ಕಾರ ಮುಂದಾಗಿದೆ. ಫೆಬ್ರವರಿ 6ರಂದು ಎಡಿಜಿ ಸಿಐಡಿ ರೋಹ್ಟಕ್ ರೇಂಜ್ ಕಮಿಷನರ್‌ಗೆ ಪತ್ರ ಬರೆದಿದ್ದರು.

ಅದರಲ್ಲಿ "ರಾಮ್ ರಹೀಮ್‌ಗೆ ಖಲಿಸ್ತಾನಿ ಭಯೋತ್ಪಾದಕರಿಂದ ಜೀವ ಬೆದರಿಕೆ ಇದೆ ಎಂದು ಗೃಹ ವ್ಯವಹಾರಗಳ ಸಚಿವಾಲಯದಿಂದ ಮಾಹಿತಿ ಬಂದಿದೆ" ಎಂದು ಬರೆಯಲಾಗಿದೆಂದು ಮೂಲಗಳು ತಿಳಿಸಿವೆ. ರಾಮ್ ರಹೀಮ್‌ಗೆ ಶಿಕ್ಷೆಯಾಗುವ ಮುನ್ನವೇ ಬೆದರಿಕೆಗಳು ಬರುತ್ತಿದ್ದವು ಎನ್ನಲಾಗ್ತಿದೆ.

ಸ್ವಯಂ ಘೋಷಿತ ದೇವಮಾನವನಿಗೆ ಆಗಸ್ಟ್ 28, 2017ರಂದು ಸಿಬಿಐ ನ್ಯಾಯಾಲಯವು ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ 10 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿತು.

ಜನವರಿ 2019ರಲ್ಲಿ, ಪತ್ರಕರ್ತ ರಾಮಚಂದ್ರ ಛತ್ರಪತಿ ಹತ್ಯೆ ಪ್ರಕರಣದಲ್ಲಿ ವಿಶೇಷ ಸಿಬಿಐ ನ್ಯಾಯಾಲಯವು ರಾಮ್ ರಹೀಮ್‌ಗೆ ಜೀವಾವಧಿ ಶಿಕ್ಷೆ ವಿಧಿಸಿತು. ಅಕ್ಟೋಬರ್ 2021ರಲ್ಲಿ, ಮಾಜಿ ಡೇರಾ ಮ್ಯಾನೇಜರ್ ರಂಜಿತ್ ಸಿಂಗ್ ಅವರ ಹತ್ಯೆಯಲ್ಲಿ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಯಿತು.

ಇದನ್ನೂ ಓದಿ: ಪಟಾಕಿ ಕಾರ್ಖಾನೆಯಲ್ಲಿ ಭೀಕರ ಸ್ಫೋಟ: ಸುಟ್ಟು ಕರಕಲಾದ 6 ಕಾರ್ಮಿಕರು

ಫೆಬ್ರವರಿ 7ರಂದು, ಹರಿಯಾಣ ಸರ್ಕಾರದ ಈ ನಿರ್ಧಾರದ ವಿರುದ್ಧ ಪರಮ್‌ಜಿತ್ ಸಿಂಗ್ ಸೊಹಾಲಿ ಅವರು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ ಬಳಿಕವೂ ಹರಿಯಾಣ ಜೈಲು ಆಡಳಿತ ರಾಮ್ ರಹೀಮ್‌ಗೆ ಮೂರು ವಾರಗಳ ಪೆರೋಲ್‌ ಮಂಜೂರು ಮಾಡಿದೆ.

ಈ ಪ್ರಕರಣದ ವಿಚಾರಣೆಯನ್ನು ಫೆಬ್ರವರಿ 23ರಂದು ನಿಗದಿಪಡಿಸಲಾಗಿದೆ. ದೇವಮಾನವ ಪ್ರಸ್ತುತ ಗುರುಗ್ರಾಮ್‌ನಲ್ಲಿ ತನ್ನ ಕುಟುಂಬದೊಂದಿಗೆ ವಾಸಿಸುತ್ತಿದ್ದಾನೆ. ಪಂಜಾಬ್‌ನ ಪಟಿಯಾಲ ಜಿಲ್ಲೆಯ ಭಡ್ಸನ್ ಗ್ರಾಮದ ನಿವಾಸಿಯಾಗಿರುವ ಅರ್ಜಿದಾರರು, ಫೆಬ್ರವರಿ 8ರಂದು ಪೆರೋಲ್ ರದ್ದುಗೊಳಿಸುವಂತೆ ಹರಿಯಾಣ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಆದರೆ, ಯಾವುದೇ ಕ್ರಮ ಕೈಗೊಂಡಿಲ್ಲ.

ಕಳೆದ ವರ್ಷವೂ ಡೇರಾ ಮುಖ್ಯಸ್ಥರು ತಮ್ಮ ಅಸ್ವಸ್ಥ ತಾಯಿಯನ್ನು ಭೇಟಿ ಮಾಡಲು ಬೆಳಗ್ಗೆಯಿಂದ ಸಂಜೆಯವರೆಗೆ ತುರ್ತು ಪೆರೋಲ್‌ ನೀಡಲಾಗಿತ್ತು. ಆರೋಗ್ಯದ ಕಾರಣ ನೀಡಿ ಕೆಲವು ಸಂದರ್ಭಗಳಲ್ಲಿ ಜೈಲಿನಿಂದ ಹೊರ ಬಂದಿದ್ದರು. ರಾಮ್ ರಹೀಮ್ ಇದುವರೆಗೆ ಹರಿಯಾಣದ ರೋಹ್ಟಕ್ ಜಿಲ್ಲೆಯ ಸುನಾರಿಯಾ ಜೈಲಿನಲ್ಲಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.