ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಚುನಾವಣೆ ದಿನಾಂಕ ಘೋಷಣೆಯಾದ ಬೆನ್ನಲ್ಲೇ ವಿವಿಧ ರಾಜಕೀಯ ಪಕ್ಷಗಳಿಂದ ಚುನಾವಣಾ ಪ್ರಚಾರದ ಅಬ್ಬರ ಬಿರುಸುಗೊಂಡಿದೆ.
ಹೌದು, ಪಶ್ಚಿಮ ಬಂಗಾಳದ ಹೌರಾ ಜಿಲ್ಲೆ ಮೂಲದ ಮಿಠಾಯಿ ತಯಾರಕರಾದ ಮಾ ಗಂಧೇಶ್ವರಿ ಸ್ವೀಟ್ಸ್ ಅಂಗಡಿಯವರು, ಪಕ್ಷದ ಚಿಹ್ನೆಗಳನ್ನು ಹೊಂದಿರುವ ವಿವಿಧ ಬಗೆಯ ಸಿಹಿತಿಂಡಿಗಳನ್ನು ತಯಾರಿಸಿದ್ದಾರೆ.
ವಿವಿಧ ರಾಜಕೀಯ ಪಕ್ಷಗಳ ಚಿಹ್ನೆಗಳ ಬಣ್ಣವನ್ನು ಹೊಂದಿರುವ ಸಿಹಿತಿಂಡಿಗಳನ್ನು ತಯಾರಿಸಲಾಗಿದೆ. ಬಿಜೆಪಿಯ ಕಮಲದ ಚಿಹ್ನೆಯ ಬಣ್ಣವಾದ ಕೇಸರಿಯನ್ನು ಹೊಂದಿರುವ ಸಿಹಿತಿಂಡಿಗಳು, ತೃಣಮೂಲದ ಹಸಿರು ಬಣ್ಣದ "ಜೋರಾ ಘಾಸ್ ಫೂಲ್" ಚಿಹ್ನೆಯನ್ನು ಪ್ರದರ್ಶಿಸುವ ಸಿಹಿತಿಂಡಿ, ಕೆಂಪು ಬಣ್ಣದ "ಸುತ್ತಿಗೆ ಮತ್ತು ಕುಡಗೋಲು" ಅನ್ನು ಹೊಂದಿರುವ ವೈವಿಧ್ಯಮಯ ಸಿಹಿತಿಂಡಿಗಳನ್ನು ತಯಾರಿಸಲಾಗುತ್ತಿದೆ.
ಓದಿ:ಪ.ಬಂಗಾಳ ಚುನಾವಣೆ: ಬಿಜೆಪಿಗೆ ಕಡಿವಾಣ ಹಾಕಲು ಮಮತಾಗೆ ತೇಜಸ್ವಿ ಬೆಂಬಲ!
ಸ್ವೀಟ್ಗಳು ಬಂಗಾಳಿ ಸಂಸ್ಕೃತಿಯ ಅವಿಭಾಜ್ಯವಾಗಿವೆ. ಚುನಾವಣೆಯ ಸಮಯದಲ್ಲಿ ಜನರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಲು ಇವು ಸಹಕಾರಿಯಾಗಬಹುದು. ಆದ್ದರಿಂದ ರಾಜಕೀಯ ಪಕ್ಷಗಳ ಸಂಕೇತಗಳನ್ನು ಹೊಂದಿರುವ ಈ ಬಗೆಯ ಸಿಹಿತಿಂಡಿಗಳು ರಾಜಕೀಯಕ್ಕೆ ತುಂಬಾ ಸಹಕಾರಿ ಎಂದು ನಗರ ಮೂಲದ ವಿಶ್ಲೇಷಕರೊಬ್ಬರು ಹೇಳುತ್ತಾರೆ.
ಖರೀದಿದಾರರು ಸಹ ಈ ರೀತಿಯ ವಿವಿಧ ಬಗೆಯ ಸಿಹಿತಿಂಡಿಗಳನ್ನು ಸ್ವಾಗತಿಸಿದ್ದಾರೆ. ಈ ವಿಶೇಷ ಸಿಹಿತಿಂಡಿಗಳು ನಿಜವಾಗಿಯೂ ಬಾಯಲ್ಲಿ ನೀರೂರಿಸುತ್ತವೆ ಎಂದು ಗ್ರಾಹಕರೊಬ್ಬರು ಹೇಳಿದ್ದಾರೆ.