ETV Bharat / bharat

'ಸ್ವರ್ಣಿಮ್ ​ವಿಜಯ್ ವರ್ಷ': 1971 ರ ಯುದ್ಧ ಸ್ಮರಣಾರ್ಥ 'ವಿಕ್ಟರಿ ಫ್ಲೇಮ್' ಸ್ವೀಕರಿಸಿದ ಜೆಕೆಎಲ್ಐ ರೆಜಿಮೆಂಟ್‌

author img

By

Published : Jun 20, 2021, 8:54 PM IST

1971 ರ ಇಂಡೋ-ಪಾಕ್​ ಯುದ್ಧದ ನೆನಪಿಗಾಗಿ ಜೆಕೆಎಲ್ಐ ರೆಜಿಮೆಂಟ್‌ನ ಸೈನಿಕರು ಮತ್ತು ಯುದ್ಧ ಪರಿಣತರು ಭಾನುವಾರ ವಿಜಯ ಜ್ಯೋತಿಯನ್ನು ಸ್ವೀಕರಿಸಿದರು.

srinagar
srinagar

ಶ್ರೀನಗರ(ಜಮ್ಮು ಮತ್ತು ಕಾಶ್ಮೀರ): 1971 ರ ಇಂಡೋ ಪಾಕ್​ ಯುದ್ಧ ನಡೆದು 50 ವರ್ಷಗಳು ಕಳೆದಿವೆ. ಈ ಯುದ್ಧದಲ್ಲಿ ಭಾರತ ಗೆದ್ದ ವಿಜಯದ ಸಂಭ್ರಮಾಚರಣೆಯ ಅಂಗವಾಗಿ, ಶ್ರೀನಗರದ ಜಮ್ಮು ಮತ್ತು ಕಾಶ್ಮೀರ ಜೆಕೆಎಲ್ಐ ರೆಜಿಮೆಂಟಲ್ ಸೆಂಟರ್​​ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸೈನಿಕರು ಮತ್ತು ಯುದ್ಧ ಪರಿಣತರು ಭಾನುವಾರ ವಿಜಯ ಜ್ಯೋತಿಯನ್ನು ಸ್ವೀಕರಿಸಿದರು.

ಈ ಹಿನ್ನೆಲೆ ಗೆಲುವಿನ ನೆನಪಿಗಾಗಿ, ಆರ್ಮಿ ಬ್ಯಾಂಡ್‌ಗಳು ಸಮರ ಸಂಗೀತದ ಅದ್ಭುತ ಪ್ರದರ್ಶನವನ್ನು ನೀಡಿದರು. ನಂತರ ಜೆಕೆಎಲ್ಐ ರೆಜಿಮೆಂಟ್‌ನ ಹುತಾತ್ಮರಿಗೆ ಗೌರವ ಸಲ್ಲಿಸಲು ಮಾಲಾರ್ಪಣೆ ಮಾಡಲಾಯ್ತು.

ಈ ವರ್ಷ 1971 ರ ಯುದ್ಧ ನಡೆದು 50 ವರ್ಷಗಳಾದ ಹಿನ್ನೆಲೆ ಈ ವರ್ಷವನ್ನು 'ಸ್ವರ್ಣಿಮ್ ​ವಿಜಯ್ ವರ್ಷ' ಎಂದು ಆಚರಿಸಲು ನಿರ್ಧರಿಸಿದ್ದೇವೆ. 'ವಿಕ್ಟರಿ ಫ್ಲೇಮ್' ಅನ್ನು ಇಂದು ಜೆಕೆಎಲ್ಐ ರೆಜಿಮೆಂಟಲ್ ಸೆಂಟರ್ಗೆ ತರಲಾಗಿದೆ. ಇದನ್ನು ಯುದ್ಧ ಪರಿಣತರು ಮತ್ತು ಸೈನಿಕರು ಸ್ವಾಗತಿಸಿದ್ದಾರೆ ಎಂದು ಜೆಕೆಎಲ್‌ಐ ಕೇಂದ್ರದ ಕಮಾಂಡೆಂಟ್ ಹೇಳಿದ್ರು. ನಮ್ಮ ರೆಜಿಮೆಂಟ್‌ಗೆ ಮೂರು ಬ್ಯಾಟಲ್ ಹಾನರ್ ಮತ್ತು 28 ಶೌರ್ಯ ಪ್ರಶಸ್ತಿಗಳು ದೊರೆತಿವೆ. ಹುತಾತ್ಮರಾದವರನ್ನು ಮತ್ತು ಅವರ ಶೌರ್ಯವನ್ನು ಎಂದಿಗೂ ಮರೆಯಲಾಗುವುದಿಲ್ಲ ಎಂದು ಅವರು ತಿಳಿಸಿದರು.

1971 ರ ಯುದ್ಧದ ಸಂದರ್ಭವನ್ನು ವಿವರಿಸುತ್ತಾ, ನಾವು ನಮ್ಮ ರಾಷ್ಟ್ರವನ್ನು ರಕ್ಷಿಸಲು ಮತ್ತು ಶತ್ರುಗಳನ್ನು ಎದುರಿಸಲು ಯಾವಾಗಲೂ ಸಿದ್ಧ "ಎಂದು ಕೆಚ್ಚೆದೆಯಿಂದ ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.