ಜಮುಯಿ (ಬಿಹಾರ): ಬಿಹಾರದ ಜಮುಯಿ ಮೂಲದ ವಿದ್ಯಾರ್ಥಿಯೊಬ್ಬರು ಸೋಮವಾರ ರಾತ್ರಿ ಕೋಲ್ಕತ್ತಾದ ವೈದ್ಯಕೀಯ ಕಾಲೇಜಿನಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಈ ವಿಚಾರ ಮೃತರ ಗ್ರಾಮದಲ್ಲಿ ಕೋಲಾಹಲಕ್ಕೆ ಕಾರಣವಾಗಿದೆ. ಅವರ ಸಂಬಂಧಿಕರು ಸಾವಿಗೆ ರ‍್ಯಾಗಿಂಗ್ ಕಾರಣ ಎಂದು ಆರೋಪಿಸಿದ್ದಾರೆ.
ಮೃತರನ್ನು ಬಿಹಾರದ ಜಮುಯಿ ಜಿಲ್ಲೆಯ ಸಿಕಂದರಾ ಬ್ಲಾಕ್‌ನ ಮಹತ್‌ಪುರ ಗ್ರಾಮದ ನಿವಾಸಿ ಪವನ್ ಕುಮಾರ್ ಸಿಂಗ್ ಅವರ ಪುತ್ರ ಪ್ರಿಯರಂಜನ್ ಕುಮಾರ್ ಸಿಂಗ್ (22) ಎಂದು ಗುರುತಿಸಲಾಗಿದೆ. ಅವರು ಕೋಲ್ಕತ್ತಾದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ಲೊಕೊಮೊಟಾರ್ ಡಿಸಬಿಲಿಟೀಸ್‌ನಲ್ಲಿ ಎರಡನೇ ವರ್ಷ ವ್ಯಾಸಂಗ ಮಾಡುತ್ತಿದ್ದರು. ಅವರ ಪಾರ್ಥಿವ ಶರೀರ ಇಂದು (ಬುಧವಾರ) ಬೆಳಗ್ಗೆ ಗ್ರಾಮವನ್ನು ತಲುಪಿದೆ.
ನ್ಯಾಯ ಕೊಡಿಸುವಂತೆ ಕುಟುಂಬಸ್ಥರ ಒತ್ತಾಯ: ಕೊಲೆ ಎಂದು ಆರೋಪಿಸಿ ಅಪಾರ ಸಂಖ್ಯೆಯ ಗ್ರಾಮಸ್ಥರು ಕುಟುಂಬ ಸದಸ್ಯರು ಮೃತದೇಹ ಇಟ್ಟುಕೊಂಡು ರಸ್ತೆ ತಡೆ ನಡೆಸಿ ನ್ಯಾಯ ಕೊಡಿಸುವಂತೆ ಒತ್ತಾಯಿಸಿದರು. ಎರಡೂವರೆ ಗಂಟೆಗಳ ಕಾಲ ರಸ್ತೆ ತಡೆ ನಡೆಸಿದರು. ಈ ವೇಳೆ ಪೊಲೀಸರು ಸ್ಥಳಕ್ಕಾಗಮಿಸಿ ರಸ್ತೆ ತಡೆ ಹಿಂಪಡೆಯುವಂತೆ ಮನವೊಲಿಸಿದರು.
ಹಾಸ್ಟೆಲ್‌ನಲ್ಲಿ ಅನುಮಾನಾಸ್ಪದವಾಗಿ ನಿಧನ: 'ಪ್ರಿಯಾರಂಜನ್ ಅವರು ಕಾಲೇಜಿನಲ್ಲಿ ವಿದ್ಯಾರ್ಥಿಗಳಿಂದ ರ್ಯಾಗಿಂಗ್ಗೆ ಒಳಗಾಗಿದ್ದರು. ಈ ಬಗ್ಗೆ ಅವರು ಹಿಂದೆಯೇ ಕಾಲೇಜಿನ ಆ್ಯಂಟಿ ರ‍್ಯಾಗಿಂಗ್ ಸೆಲ್ನಲ್ಲಿ ದೂರು ನೀಡಿದ್ದರು. ಆದರೆ, ಕಾಲೇಜು ಆಡಳಿತ ಮಂಡಳಿಯಿಂದ ಸೂಕ್ತ ಕ್ರಮ ಕೈಗೊಳ್ಳದ ಕಾರಣ ಮನೆಗೆ ಮರಳಿದ್ದರು. ನಂತರ ಆಗಸ್ಟ್ ತಿಂಗಳಿನಲ್ಲಿ ಕಾಲೇಜಿನಿಂದ ಕರೆ ಮಾಡಿ, ಕಾಲೇಜಿನಲ್ಲಿ ಯಾವುದೇ ತೊಂದರೆಯಾಗುವುದಿಲ್ಲ ಮತ್ತು ಎಲ್ಲವೂ ಸರಿಯಾಗಲಿದೆ ಎಂದು ಭರವಸೆ ನೀಡಿದ್ದರಿಂದ ಮರಳಿ ಕಲಿಕೆಗೆ ತೆರಳಿದ್ದರು. ಆದರೆ, ಅವರು ಸೋಮವಾರ ಹಾಸ್ಟೆಲ್‌ನಲ್ಲಿ ಇದ್ದಕ್ಕಿದ್ದಂತೆ ಅನುಮಾನಾಸ್ಪದವಾಗಿ ನಿಧನರಾಗಿದ್ದಾರೆ' ಎಂದು ಮೃತನ ಸಹೋದರ ಹೇಳಿಕೆ ನೀಡಿದ್ದಾರೆ.
ಓದಿ: ಏಮ್ಸ್ನ ವೈದ್ಯಕೀಯ ವಿದ್ಯಾರ್ಥಿ ಸಾವು.. ಸಂಸ್ಥೆ ವಿರುದ್ಧ ಸಹಪಾಠಿಗಳಿಂದ ಪ್ರತಿಭಟನೆ