ಪುಣೆ (ಮಹಾರಾಷ್ಟ್ರ): ಪುಣೆ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ (ಎನ್‌ಡಿಎ) ಯಲ್ಲಿ ತರಬೇತಿ ಪಡೆಯಲು ಸೇರಿಕೊಂಡಿದ್ದ ಕೆಡೆಟ್ ಒಬ್ಬರು ಅನುಮಾನಾಸ್ಪದ ಸಾವನ್ನಪ್ಪಿದ್ದಾರೆ.
ಮೃತರನ್ನು 147ನೇ ಬ್ಯಾಚ್‌ನ ಕೆಡೆಟ್ ಹಾಗೂ ಬೆಂಗಳೂರು ಮೂಲದ ಜಿ ಪ್ರತ್ಯೂಷ್ ಎಂದು ಗುರುತಿಸಲಾಗಿದೆ. ಇವರು ಫೆಬ್ರವರಿ 7 ರಂದು ಅಕಾಡೆಮಿಯನ್ನು ಪ್ರವೇಶಿಸಿದ್ದು, ಫೆಬ್ರವರಿ 8 ರಂದು, ಅಂದರೆ ತರಬೇತಿಯ ಎರಡನೇ ದಿನವೇ ಮೃತಪಟ್ಟಿದ್ದಾರೆ.
ಇದನ್ನೂ ಓದಿ: ಕ್ರಿಕೆಟ್ ಬಾಲ್ ವಿಚಾರವಾಗಿ ಗಲಾಟೆ: ನಡು ರಸ್ತೆ ಮೇಲೆ ಬಡಿದಾಡಿಕೊಂಡ ಗ್ರಾಮಸ್ಥರು
ಮಂಗಳವಾರ ಸಂಜೆ 5 ಗಂಟೆಗೆ ಪ್ರತ್ಯೂಷ್ ತನ್ನ ಹಾಸ್ಟೆಲ್ ಕೊಠಡಿಯ ಮುಂದೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಪತ್ತೆಯಾಗಿದೆ. ತಕ್ಷಣವೇ ಅವರನ್ನು ಎನ್‌ಡಿಎ ವ್ಯಾಪ್ತಿಯಲ್ಲಿ ಬರುವ ಮಿಲಿಟರಿ ಆಸ್ಪತ್ರೆಗೆ ಸೇರಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ಎನ್‌ಡಿಎ ಆಡಳಿತ ಮಂಡಳಿ ತಿಳಿಸಿದೆ.