ಶ್ರೀನಗರ (ಜಮ್ಮು ಕಾಶ್ಮೀರ): ಶ್ರೀನಗರದ ಖಾನಾರ್ ಪ್ರದೇಶದಿಂದ ಜಮ್ಮು ಮತ್ತು ಕಾಶ್ಮೀರ ಪೊಲೀಸರ ಬಾಂಬ್ ನಿಷ್ಕ್ರಿಯ ದಳ ಸೋಮವಾರ ಅನುಮಾನಾಸ್ಪದ ಬಾಕ್ಸನ್ನು ವಶಪಡಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
"ಇಂದು ಸಂಜೆ 6 ಗಂಟೆ ಸುಮಾರಿಗೆ ಖಾನಾರ್ ಪ್ರದೇಶದಲ್ಲಿ ರಸ್ತೆಯಲ್ಲಿ ಅನುಮಾನಾಸ್ಪದ ಡಬ್ಬಿಯೊಂದು ಬಿದ್ದಿರುವ ಬಗ್ಗೆ ನಮಗೆ ಕರೆ ಬಂತು. ಹೊರಗಿನಿಂದ ಕೆಲವು ತಂತಿಗಳು ಗೋಚರಿಸಿರುವುದರಿಂದ ಬಾಕ್ಸ್ನಲ್ಲಿ ಐಇಡಿ ಅಳವಡಿಸಿರಬಹುದೆಂದು ನಾವು ಅಂದುಕೊಂಡಿದ್ದೆವು" ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
"ಆದರೆ ಬಾಕ್ಸ್ನಲ್ಲಿ ತಂತಿಗಳಿವೆ, ಐಇಡಿ ಇಲ್ಲವೆಂದು ಬಾಂಬ್ ನಿಷ್ಕ್ರಿಯ ದಳ ಹೇಳಿದೆ. ಡಬ್ಬಿಯನ್ನು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಲಾಗಿದೆ" ಎಂದು ಅವರು ಹೇಳಿದರು.
ಸ್ಥಳೀಯರಲ್ಲಿ ಭಯ ಉಂಟುಮಾಡುವ ಉದ್ದೇಶದಿಂದ ದುಷ್ಕರ್ಮಿಗಳು ಈ ಪ್ರದೇಶದಲ್ಲಿ ಬಾಕ್ಸ್ಅನ್ನು ಇರಿಸಿದ್ದಾರೆ ಎಂದು ಪೊಲೀಸರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.