ಪಾಟ್ನಾ(ಬಿಹಾರ): ಒಂದೂವರೆ ವರ್ಷಗಳ ನಂತರ ಬಿಜೆಪಿ ಹಿರಿಯ ನಾಯಕ ಸುಶೀಲ್ ಕುಮಾರ್ ಮೋದಿ ಅವರಿಗೆ ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತೊಮ್ಮೆ ಮಣೆ ಹಾಕಿದೆ. ಮಾಜಿ ಉಪಮುಖ್ಯಮಂತ್ರಿಗಳೂ ಆಗಿರುವ ಇವರು ಜೆಡಿಯುನ ನಿತೀಶ್ ಕುಮಾರ್ ಮತ್ತು ಆರ್‌ಜೆಡಿಯ ಲಾಲು ಪ್ರಸಾದ್ ಯಾದವ್ ಅವರನ್ನು ಮುಂದಿನ ಚುನಾವಣೆಯಲ್ಲಿ ಎದುರಿಸುವ ಸಿದ್ಧತೆಯಲ್ಲಿ ತೊಡಗಿದ್ದಾರೆ ಎಂದು ರಾಜ್ಯದಲ್ಲೀಗ ಚರ್ಚೆ ನಡೆಯುತ್ತಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಆರ್‌ಜೆಡಿ ಉಪಾಧ್ಯಕ್ಷ ತನ್ವೀರ್ ಹಸನ್, "ಬಿಜೆಪಿಯು ಸುಶೀಲ್ ಮೋದಿ ಮತ್ತು ತಂಡವನ್ನು ರಾಜಕೀಯದ ಅಂಚಿನಲ್ಲಿಟ್ಟಿದೆ. ಈಗ ಅವರು ತಮ್ಮ ಭವಿಷ್ಯವನ್ನು ಪುನರುಜ್ಜೀವನಗೊಳಿಸುವ ಕಾರ್ಯದಲ್ಲಿದ್ದಾರೆ. ಸುಶೀಲ್ ಮೋದಿ ಆರ್‌ಜೆಡಿ ವಿರುದ್ಧ ದಾಳಿ ಮಾಡುವ ಮೂಲಕ ತಾವು ರಾಜಕೀಯವಾಗಿ ಸಕ್ರಿಯವಾಗಿರಲು ಬಯಸುತ್ತಿದ್ದಾರೆ. ಆದರೆ, ಪ್ರತಿ ಬಾರಿಯೂ ಅದು ಸಾಧ್ಯವಿಲ್ಲ. ಈಗ ಸುಶೀಲ್ ಮತ್ತವರ ಕೂಟವು ಬಿಹಾರ ರಾಜಕೀಯದಲ್ಲಿ ತಮ್ಮ ಮುಳುಗುತ್ತಿರುವ ದೋಣಿಯ ರಕ್ಷಣೆಯಲ್ಲಿ ತೊಡಗಿದ್ದಾರೆ" ಎಂದು ವ್ಯಂಗ್ಯವಾಡಿದರು.
ಇದನ್ನೂ ಓದಿ: ಬಿಹಾರದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಿತೀಶ್ ಕುಮಾರ್