ಭವಾನಿಪಟ್ಟಣ(ಒಡಿಶಾ) : ಒಡಿಶಾದ ಕಾಲಹಂಡಿ ಜಿಲ್ಲೆಯ ಭವಾನಿಪಟ್ಟಣದಲ್ಲಿರುವ ರಿಸರ್ವ್ ಪೊಲೀಸ್ ಮೈದಾನವು ಮಾವೋವಾದಿ ಜೋಡಿಯ ವಿವಾಹಕ್ಕೆ ಸಾಕ್ಷಿಯಾಗಿದೆ. ನಿಷೇಧಿತ ಮಾವೋವಾದಿ ಸಂಘಟನೆಯ ಕಾರ್ಯಕರ್ತ ಕೇಸಬ್ ವೆಲಾಡಿ ಅಲಿಯಾಸ್ ರಾಮದಾಸ್ ಮತ್ತು ಕಲಾಂದೇಯಿ ಮಾಝಿ ಅಲಿಯಾಸ್ ಗೀತಾ ಅವರ ವಿವಾಹವು ಹಿಂದೂ ಸಂಪ್ರದಾಯದಂತೆ ಪೊಲೀಸರ ಸಮ್ಮುಖದಲ್ಲಿ ನಡೆದಿದೆ.
ಎಸ್ಪಿ ಡಾ.ಸರವಣ ವಿವೇಕ್ ಎಂ ಮತ್ತು ಸಿಆರ್‌ಪಿಎಫ್ 64ನೇ ಬೆಟಾಲಿಯನ್ ಕಮಾಂಡೆಂಟ್ ಬಿಬ್ಲಬ್ ಸರ್ಕಾರ್ ಸೇರಿದಂತೆ ಹಲವು ಪೊಲೀಸ್ ಸಿಬ್ಬಂದಿ ಸಮ್ಮುಖದಲ್ಲಿ ಜೋಡಿಯ ವಿವಾಹವು ಅದ್ಧೂರಿಯಾಗಿ ನಡೆದಿದೆ. ಡಿಐಜಿ ಎಸ್‌ಡಬ್ಲ್ಯೂಆರ್ ಕೋರಾಪುಟ್ ರಾಜೇಶ್ ಪಂಡಿತ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಸುಮಾರು ಒಂಬತ್ತು ವರ್ಷಗಳ ಕಾಲ ನಿಷೇಧಿತ ಸಂಘಟನೆ ಸಿಪಿಐನ ಕಲಹಂಡಿ-ಕಂಧಮಾಲ್-ಬೌಧ್-ನಯಾಗಢ ವಿಭಾಗದ ಪ್ರಾದೇಶಿಕ ಸಮಿತಿ ಸದಸ್ಯನಾಗಿದ್ದ ರಾಮದಾಸ್, ಫೆಬ್ರವರಿ 18, 2020ರಂದು ಶಸ್ತ್ರಾಸ್ತ್ರ ತ್ಯಜಿಸಿ ಪೊಲೀಸರಿಗೆ ಶರಣಾಗಿದ್ದ. ಜೊತೆಗೆ ಒಂದು ವರ್ಷಗಳ ಕಾಲ ನಿಷೇಧಿತ ಸಂಘಟನೆಯ ಬನ್ಶಧಾರ-ಘುಮ್ಸರ್-ನಾಗಬಲಿ ವಿಭಾಗದ ಸದಸ್ಯಳಾಗಿದ್ದ ಕಲಾಂದೇಯ್ ಜನವರಿಯಲ್ಲಿ ಕಲಹಂಡಿ ಪೊಲೀಸರೊಂದಿಗೆ ಶರಣಾಗಿದ್ದಳು. ಇದೀಗ ಪೊಲೀಸರ ಸಮ್ಮುಖದಲ್ಲಿ ಇವರಿಬ್ಬರ ಮದುವೆ ನಡೆದಿದೆ.
ಓದಿ : 90ನೇ ವಯಸ್ಸಿನಲ್ಲಿ ಬ್ಯುಸಿನೆಸ್ ಆರಂಭಿಸಿದ ವೃದ್ಧೆ, ತಿಂಗಳಿಗೆ ಲಕ್ಷಗಟ್ಟಲೆ ಸಂಪಾದನೆ