ಸೂರತ್(ಗುಜರಾತ್):ಕಿವುಡ, ಅಂಧರಿಗೆ ಸಹಾಯ ಮಾಡುವ 'ಬಾಪು ಗೀ ಮ್ಯಾಜಿಕಲ್ ಸ್ಮಾರ್ಟ್ ಸ್ಟಿಕ್' ಅನ್ನು ಸೂರತ್‌ನ ವಿದ್ಯಾರ್ಥಿಗಳು ಸಿದ್ಧಗೊಳಿಸಿದ್ದಾರೆ. ಈ ಸ್ಟಿಕ್ ದೃಷ್ಟಿಹೀನತೆ, ಶ್ರವಣ ಸಮಸ್ಯೆಯಿದ್ದರೆ ಕಂಪಿಸುತ್ತದೆ. ಒಂದು ಮೀಟರ್ ಪ್ರದೇಶದವರೆಗೂ ದೃಷ್ಟಿ, ಶ್ರವಣ ಅಡಚಣೆ ಎಚ್ಚರಿಕೆ ಸಂದೇಶಗಳನ್ನು ಸ್ವೀಕರಿಸುತ್ತದೆ. ಸೂರತ್‌ನ ವನಿತಾ ವಿಶ್ರಮ ಮಹಿಳಾ ವಿಶ್ವವಿದ್ಯಾಲಯದ ಬಿಸಿಎ ಸೆಮಿಸ್ಟರ್-4ರ ನಾಲ್ಕು ವಿದ್ಯಾರ್ಥಿನಿಯರು ಈ ಸಾಧನೆ ಮಾಡಿದ್ದಾರೆ. ಬಾಪು ಸ್ಮಾರ್ಟ್ ಸ್ಟಿಕ್ ಯಾವುದೇ ಶಬ್ದ ಕೇಳುವಲ್ಲಿ ಯಾವುದೇ ಸಮಸ್ಯೆ ಉಂಟಾದರೆ ಈ ಕೋಲು ಸ್ವಯಂಚಾಲಿತವಾಗಿ ಕಂಪಿಸುತ್ತದೆ.
ವಿದ್ಯಾರ್ಥಿಗಳು ಗಾಂಧಿ ಸಿದ್ಧಾಂತ ಮೇಲೆ ಸ್ಮಾರ್ಟ್ ಸ್ಟಿಕ್ ಅನ್ನು ತಯಾರಿಸಿದ್ದಾರೆ. ಪ್ರಜ್ಞಾ ಚಕ್ಷು ಯಾವುದೇ ಅಡಚಣೆಯಿಂದ ಯಾವುದೇ ವಸ್ತುವಿಗೆ ಡಿಕ್ಕಿ ಹೊಡೆಯುವುದಿಲ್ಲ. 1 ಮೀಟರ್ ಅಂತರದಲ್ಲಿ ಅಡಚಣೆ ಉಂಟಾದರೆ ಕೋಲು ಕಂಪಿಸುತ್ತದೆ. ಬಜರ್ ಮೂಲಕ ಎಚ್ಚರಿಸುತ್ತದೆ. ಆಗ ಅವರು ತಮ್ಮ ಮಾರ್ಗ ಬದಲಾಯಿಸಬಹುದು.
ಬಿಸಿಎ ವಿಭಾಗದ ಮುಖ್ಯಸ್ಥ ಡಾ.ನಿರಾಲಿಬೆನ್ ದವೆ ಮತ್ತು ಡಾ.ದೀಕ್ಷಾಂತ್ ಶಾ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು 20 ದಿನಗಳಲ್ಲಿ ಈ ಸ್ಟಿಕ್ ತಯಾರಿಸಿದ್ದಾರೆ. ಕಾಲೇಜಿನಲ್ಲಿ ತಮ್ಮ ಸಹಪಾಠಿ ದೃಷ್ಟಿ ವಿಶೇಷಚೇತನ ವಿದ್ಯಾರ್ಥಿಯನ್ನು ನೋಡಿದ ಬಳಿಕ ವಿದ್ಯಾರ್ಥಿಗಳಿಗೆ ಬಾಪು ಘೀ ಮ್ಯಾಜಿಕಲ್ ಸ್ಮಾರ್ಟ್ ಸ್ಟಿಕ್ ಮೇಲೆ ಪ್ರಾಜೆಕ್ಟ್ ಮಾಡಬೇಕೆಂದು ಆಲೋಚಿಸಿದ್ದರಂತೆ.
ವಿದ್ಯಾರ್ಥಿನಿ ಸಂಜನಾ ಪೇಟಿಯಾ ಮಾತನಾಡಿ, ನಾವು ಬಾಪು ಹೆಸರಿನ ಸ್ಮಾರ್ಟ್ ಸ್ಟಿಕ್ ತಯಾರಿಸಿದ್ದೇವೆ. ನಮ್ಮ ತಂಡದಲ್ಲಿ ನಾಲ್ವರಿದ್ದೇವೆ. ಮೈತ್ರಿ ಗೋಟಿ, ಪಮ್ಮಿ ನಕ್ರಾಣಿ, ನೈನಿ ಪಟೇಲ್ ಇವರೆಲ್ಲ ಸೇರಿ ಆವಿಷ್ಕಾರ ಕೈಗೊಂಡೆವು . ನಮ್ಮ ಕಾಲೇಜಿನಲ್ಲಿ ಒಬ್ಬ ದೃಷ್ಠಿ ವಿಶೇಷಚೇತನ ವಿದ್ಯಾರ್ಥಿನಿಯನ್ನು ನೋಡಿದ ಬಳಿಕ ಸ್ಟೀಕ್ ಮಾಡುವ ವಿಚಾರ ನಮ್ಮ ಮನಸ್ಸಿಗೆ ಬಂತು. ಅವಳು ರಸ್ತೆ ದಾಟುತ್ತಿದ್ದಾಗ ಸಹಾಯ ಮಾಡಲು ಅವಳ ಸಹೋದರಿ ಇದ್ದಳು. ಆದರೆ ನಾವೆಲ್ಲ ವಿದ್ಯಾರ್ಥಿಗಳು ದೃಷ್ಠಿ ಹೀನರಿಗೆ ಅನುಕೂಲವಾಗಲೆಂದು ಸ್ಮಾರ್ಟ್ ಸ್ಟಿಕ್ ನಿರ್ಮಿಸಲು ಪ್ರಾಜೆಕ್ಟ್ ತೆಗೆದುಕೊಂಡವೆ ಎಂದರು.
ನಾವು 100 ಸೆಂ.ಮೀ. ಅಂದರೆ ಒಂದು ಮೀಟರ್ ತ್ರಿಜ್ಯದಲ್ಲಿ ಸ್ಟಿಕ್ ತಯಾರಿಸಿದ್ದೇವೆ. ಒಂದು ಮೀಟರ್ ಅಂತರದಲ್ಲಿ ಮುಂದೆ ಯಾವುದೇ ವಸ್ತು ಬಂದರೆ ನೋಡುಗರಿಗೆ ಗೊತ್ತಾಗುತ್ತದೆ. ಇದರಲ್ಲಿ ಬಜರ್ ರಿಂಗ್ ಅಳವಡಿಸಿದ್ದೇವೆ. ಯಾರಿಗಾದರೂ ಕಿವಿ ಕೇಳಲು ತೊಂದರೆಯಾದರೆ ಸ್ಟಿಕ್ನಲ್ಲಿ ಕಂಪಿಸುವ ಸೌಲಭ್ಯ ಸಹ ಅಳವಡಿಸಿದ್ದೇವೆ. ಮುಂದಿನ ದಿನಗಳಲ್ಲಿ ಈ ಸ್ಟಿಕ್ ಅನ್ನು ಇತರೆ ಸೆನ್ಸಾರ್ಗಳೊಂದಿಗೆ ಅಳವಡಿಕೆ ಹಾಗೂ ನೂತನ ತಂತ್ರಜ್ಞಾನ ಬಳಸುವ ಮೂಲಕ ಇನ್ನಷ್ಟು ಉಪಯೋಗಕರವಾಗಿ ಮಾಡಬಹುದು. ಇದರಿಂದ ದೃಷ್ಟಿಹೀನರು ಯಾವ ದಿಕ್ಕಿಗೆ ಹೋಗಬೇಕೆಂದು ಬಾಪು ಘೀ ಮ್ಯಾಜಿಕಲ್ ಸ್ಮಾರ್ಟ್ ಸ್ಟಿಕ್ದಿಂದ ತಿಳಿಯುತ್ತದೆ.
ಮಹಿಳಾ ಮಹಾವಿದ್ಯಾಲಯದ ಉಪಕುಲಪತಿ ದಕ್ಷೇಶ್ ಠಾಕರ್ ಮಾತನಾಡಿ, ವನಿತಾ ವಿಶ್ರಮ ವಿಶ್ವವಿದ್ಯಾನಿಲಯವು ಯೋಜನಾ ಕಾರ್ಯ ಒದಗಿಸುವ ಗುಜರಾತ್ ರಾಜ್ಯದ ಮೊದಲ ಮಹಿಳಾ ವಿಶ್ವವಿದ್ಯಾಲಯ. BCS ಸೆಮಿಸ್ಟರ್ 4 ರ ವಿದ್ಯಾರ್ಥಿಗಳಿಗೆ 'IOT' ಅಂದರೆ ಇಂಟರ್ನೆಟ್ ಆಫ್ ಥಾಟ್ ಕುರಿತು ಪ್ರಾಜೆಕ್ಟ್ ಮಾಡಲು ನೀಡಲಾಯಿತು. ಬಾಪು ಹೆಸರಿನ ಈ ಸ್ಮಾರ್ಟ್ ಸ್ಟಿಕ್ ಅನ್ನು ವಿದ್ಯಾರ್ಥಿಗಳು ತಯಾರಿಸಿದ್ದು, ಇದರಿಂದ ಶ್ರವಣ, ದೃಷ್ಟಿವಿಕಲಚೇತನರಿಗೆ ಸಹಾಯ ಮತ್ತು ಮಾರ್ಗದರ್ಶನ ನೀಡಬಹುದು. ಇಡೀ ಪ್ರಾಜೆಕ್ಟ್ ಗಾಂಧಿ ಸಿದ್ಧಾಂತದ ಮೇಲೆ ನಿಂತಿದೆ. ಅದಕ್ಕಾಗಿ ಸ್ಟಿಕ್‌ಗೆ ಬಾಪು ಎಂದು ಹೆಸರಿಟ್ಟಿದ್ದೇವೆ. ಇದು ಬ್ಲೈಂಡ್ ಆಟೋಮ್ಯಾಟಿಕ್ ಪಾತ್ ಯುನಿಟ್ ಅನ್ನು ಸೂಚಿಸುತ್ತದೆ. ನೋಡಲು ಅಥವಾ ಕೇಳಿಸಿಕೊಳ್ಳಲು ಆಗದ ಜನರಿಗೆ ಅನುಕೂಲಕರವಾಗಿದೆ ಎಂದು ತಿಳಿಸಿದರು.
ಅತ್ಯಾಧುನಿಕ ತಂತ್ರಜ್ಞಾನ ಬಳಕೆ: ವಿದ್ಯಾರ್ಥಿಗಳು ಆಧುನಿಕ ತಂತ್ರ ಬಳಸಿ ಸ್ಮಾರ್ಟ್ ಸ್ಟಿಕ್ ತಯಾರಿಸಿದ್ದಾರೆ. ಇದುವರೆಗೆ ವಿಶೇಷಚೇತನರು ಬಳಸುತ್ತಿರುವ ಸ್ಟಿಕ್ಗಿಂತ ಹೆಚ್ಚು ಮುಂದುವರಿದ ಸ್ಮಾರ್ಟ್ ಸ್ಟಿಕ್ ಇದಾಗಿದೆ. ಬಾಪು ಸ್ಮಾರ್ಟ್ ಸ್ಟಿಕ್ ಮಾರುಕಟ್ಟೆಗೆ ಕೊಂಡೊಯ್ಯಲು ಸರ್ಕಾರಿ ಏಜೆನ್ಸಿಗಳಿಗೆ ಪ್ರಸ್ತಾವನೆಗಳನ್ನು ಸಲ್ಲಿಸಿದ್ದೇವೆ. ಮುಂದಿನ ದಿನಗಳಲ್ಲಿ, ಸ್ಟಿಕ್ ಅನ್ನು ಹೇಗೆ ಉತ್ಪಾದಿಸಬೇಕು ಮತ್ತು ಕಡಿಮೆ ವೆಚ್ಚದಲ್ಲಿ ಸಮಾಜದ ಹೆಚ್ಚು ಜನರಿಗೆ ತಲುಪಿಸುವ ಕೆಲಸ ಮಾಡುತ್ತೇವೆ ಎಂದು ಉಪಕುಲಪತಿ ದಕ್ಷೇಶ್ ಠಾಕರ್ ಮಾಹಿತಿ ನೀಡಿದ್ದಾರೆ.
ಇದನ್ನೂಓದಿ:ವಿದ್ಯಾರ್ಥಿಗಳ ಜ್ಞಾನಾಭಿವೃದ್ಧಿಗಾಗಿ ಮೊಬೈಲ್ ಲೈಬ್ರರಿ.. ಚೆನ್ನೈನ ಅಣ್ಣಾ ವಿವಿ ವಿನೂತನ ಪ್ರಯತ್ನ