ಸೂರತ್: ಸೂರತ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಮತ್ತು ಡಿಆರ್‌ಐ ಅಧಿಕಾರಿಗಳು, ಇಬ್ಬರು ಪ್ರಯಾಣಿಕರಿಂದ 15 ಲಕ್ಷ ರೂಪಾಯಿ ಮೌಲ್ಯದ ಚಿನ್ನ ಮತ್ತು 6 ಕೋಟಿ ಮೌಲ್ಯದ ವಜ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಓರ್ವ ಪ್ರಯಾಣಿಕ 15 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಧರಿಸಿ ಬಂದಿದ್ದ. ಮತ್ತೋರ್ವ ಪ್ರಯಾಣಿಕ ಬ್ಯಾಗ್‌ನಲ್ಲಿ 6 ಕೋಟಿ ಮೌಲ್ಯದ ವಜ್ರ ಇಟ್ಟುಕೊಂಡು ಬಂದಿದ್ದ.
ಸದ್ಯ ಈ ಇಬ್ಬರು ಪ್ರಯಾಣಿಕರನ್ನು ವಿಚಾರಣೆಗೊಳಪಡಿಸಲಾಗಿದೆ. ಶಾರ್ಜಾ-ಸೂರತ್ ವಿಮಾನದಲ್ಲಿ ಇಬ್ಬರು ಅಕ್ರಮವಾಗಿ ಚಿನ್ನ ಮತ್ತು ವಜ್ರವನ್ನು ಸಾಗಿಸುತ್ತಿರುವ ಬಗ್ಗೆ ಕಸ್ಟಮ್ಸ್ ಹಾಗೂ ಡಿಆರ್‌ಐ ಅಧಿಕಾರಿಗಳು ಮಾಹಿತಿ ಪಡೆದಿದ್ದರು. ಇಬ್ಬರೂ ಆರೋಪಿಗಳ ಲಗೇಜ್‌ಗಳನ್ನು ಪರಿಶೀಲಿಸಲಾಗಿದೆ.
ಓರ್ವ ಪ್ರಯಾಣಿಕ 300 ಗ್ರಾಂಗೂ ಹೆಚ್ಚು ಚಿನ್ನವನ್ನು ಧರಿಸಿದ್ದು, ಅದರ ಇಂದಿನ ಮಾರುಕಟ್ಟೆ ಮೌಲ್ಯ 15 ಲಕ್ಷಕ್ಕೂ ಹೆಚ್ಚಿದೆ. ಮತ್ತೊಂದೆಡೆ ಮತ್ತೊಬ್ಬ ಪ್ರಯಾಣಿಕನ ಬ್ಯಾಗ್ ಪರಿಶೀಲಿಸಿದಾಗ ಆತನ ಬ್ಯಾಗ್‌ನಲ್ಲಿ ವಜ್ರಗಳು ಪತ್ತೆಯಾಗಿದ್ದು, ಇದರ ಅಂದಾಜು ಮೌಲ್ಯ 6 ಕೋಟಿ ರೂ. ಆಗಿದೆ.
ಇದನ್ನೂ ಓದಿ: ಆರ್ಡರ್ ಮಾಡಿದ್ದು ಲ್ಯಾಪ್ಟಾಪ್.. ಗ್ರಾಹಕನ ಕೈಗೆ ಸಿಕ್ಕಿದು ಮಾತ್ರ ಇಟ್ಟಿಗೆ!