ನವದೆಹಲಿ: ಇಲ್ಲಿನ ಮಂಡೋಲಿ ಜೈಲಿನಿಂದ ತಮ್ಮನ್ನು ಸ್ಥಳಾಂತರಿಸಿ ದೇಶದ ಇತರ ಜೈಲಿಗೆ ಸ್ಥಳಾಂತರ ಮಾಡುವಂತೆ ಕೋರಿ ವಂಚಕ ಸುಕೇಶ್ ಚಂದ್ರಶೇಖರ್ ಮನವಿ ಕುರಿತು ಸುಪ್ರೀಂ ಕೋರ್ಟ್ ಕೇಂದ್ರ ಮತ್ತು ದೆಹಲಿ ಸರ್ಕಾರ ಪ್ರತಿಕ್ರಿಯೆ ಕೋರಿದೆ.
ಮಂಡೋಲಿ ಕಾರಾಗೃಹದಲ್ಲಿ ಸುಕೇಶ್ ಅವರ ಮೇಲೆ ಹಲ್ಲೆ ನಡೆಸಲಾಗಿದೆ. ಇಲ್ಲಿ ಅವರಿಗೆ ಜೀವ ಭಯ ಇದೆ ಎಂಬ ಅವರ ವಕೀಲರು ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು. ಈ ವಾದ ಆಲಿಸಿದ ನ್ಯಾ. ಅಜಯ್ ರಸ್ತೋಗಿ ಮತ್ತು ಸಿಟಿ ರವಿ ಕುಮಾರ್ ಅವರನ್ನ ಒಳಗೊಂಡ ಪೀಠ, ಚಂದ್ರಶೇಶರ್ ಅವರ ಎರಡು ಪ್ರತ್ಯೇಕ ಅರ್ಜಿಯನ್ನು ಆಲಿಸಿದೆ. ಈ ವೇಳೆ ಜೈಲಿನಿಂದ ಶಿಫ್ಟ್ ಮಾಡುವುದು ಮತ್ತು ಅವರ ವಕೀಲರನ್ನು ಭೇಟಿ ಮಾಡುವಂತೆ ತಿಳಿಸಿದೆ.
ದೇಶಾದ್ಯಂತ ಆರು ನಗರಗಳಲ್ಲಿ ಅವರ ವಿರುದ್ಧ 28 ಪ್ರಕರಣಗಳು ಬಾಕಿ ಉಳಿದಿವೆ. ಈ ಸಂಬಂಧ ಅವರು ದೆಹಲಿ ಜೈಲು ನಿಯಮಗಳ ಅಡಿ ವಾರಕ್ಕೆ ಎರಡು ಬಾರಿ 30 ನಿಮಿಷಗಳಂತೆ ಪ್ರತಿದಿನ 60 ನಿಮಿಷಗಳ ಕಾಲ ತಮ್ಮ ವಕೀಲರನ್ನು ಭೇಟಿ ಮಾಡಬೇಕಾಗುತ್ತದೆ ಎಂದು ಸುಕೇಶ್ ಪರ ವಕೀಲರು ಹೇಳಿದರು.
ದೆಹಲಿಯ ಜೈಲು ಸಚಿವ ಸತ್ಯೇಂದ್ರ ಜೈನ್ ಅವರು 10 ಕೋಟಿ ರೂಪಾಯಿಗಳನ್ನು ಸುಲಿಗೆ ಮಾಡಿದ್ದಾರೆ ಎಂಬ ಹೇಳಿಕೆ ನೀಡಿದ ಬಳಿಕ ಜೈಲಿನಲ್ಲಿ ಅವರಿಗೆ ಜೀವ ಬೆದರಿಕೆ ಎದುರಿಸುತ್ತಿದ್ದಾರೆ ಎಂದು ಚಂದ್ರಶೇಖರ್ ಪರ ವಕೀಲರು ಕೋರ್ಟ್ ಗಮನಕ್ಕೆ ತಂದರು. ಆದರೆ ಸುಕೇಶ್ ಪರ ವಕೀಲರ ಆರೋಪಗಳನ್ನು ಎಎಪಿ ನಿರಾಕರಿಸಿದರು.
ಇನ್ನು ಇದೇ ವೇಳೆ ನ್ಯಾಯಾಲಯ ಸುಕೇಶ್ ಚಂದ್ರಶೇಖರ್ಗೆ ಹೆಚ್ಚುವರಿ ಅರ್ಜಿಯನ್ನು ಸಲ್ಲಿಸುವ ಅವಶ್ಯಕತೆ ಇಲ್ಲ ಎಂದಿದೆ. ಈ ಸಂಬಂಧ ಸುಕೇಶ್ ಪರ ವಕೀಲರನ್ನು ಪೀಠ ತರಾಟೆಗೆ ತೆಗೆದುಕೊಂಡಿತು.
ಇದನ್ನು ಓದಿ:ಶ್ರದ್ಧಾ ಮರ್ಡರ್ ಕೇಸ್: ಆರೋಪಿ ಅಫ್ತಾಬ್ಗೆ ನಡೆಯದ ನಾರ್ಕೊ ಟೆಸ್ಟ್