ETV Bharat / bharat

ಜ್ಞಾನವಾಪಿ ಕಾಶಿ ವಿಶ್ವನಾಥ ಪ್ರಕರಣ: ವಿಚಾರಣೆಗೆ ನಾಳೆ ಸುಪ್ರೀಂನಿಂದ ಪ್ರತ್ಯೇಕ ನ್ಯಾಯಪೀಠ ರಚನೆ

author img

By

Published : Nov 10, 2022, 1:14 PM IST

ಶಿವಲಿಂಗ ರಕ್ಷಣೆ ಆದೇಶವೂ ನವೆಂಬರ್​ 12ರಂದು ಕೊನೆಗೊಳ್ಳಲಿದೆ ಎಂದು ವಕೀಲ ವಿಷ್ಣು ಶಂಕರ್ ಜೈನ್ ಹಿಂದೂ ಭಕ್ತರ ಪರ ವಾದ ಮಂಡಿಸಿದ್ದರು.

ಸುಪ್ರೀಂಕೋರ್ಟ್
ಸುಪ್ರೀಂಕೋರ್ಟ್

ನವದೆಹಲಿ: ವಾರಾಣಾಸಿಯ ಜ್ಞಾನವಾಪಿ ಮಸೀದಿಯಲ್ಲಿನ ಶಿವಲಿಂಗ ರಕ್ಷಣೆ ಮಾಡಲು ಕೋರಿ ಹಿಂದೂಗಳು ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿದ ಸುಪ್ರೀಂ ಕೋರ್ಟ್ ಪ್ರಕರಣದ ವಿಚಾರಣೆ ಆಲಿಸಲು ಶುಕ್ರವಾರ ಪೀಠ ರಚಿಸಲಿದೆ. ಶಿವಲಿಂಗ ರಕ್ಷಣೆ ಕೋರಿ ಹಿಂದೂಗಳು ಸಲ್ಲಿಸಿದ್ದ ಮನವಿಯನ್ನು ನ್ಯಾ.ಡಿ ವೈ ಚಂದ್ರಚೂಡ್ ನೇತೃತ್ವದ ಪೀಠವು ಈ ಹಿಂದೆ ಆಲಿಸಿತ್ತು. ಶಿವಲಿಂಗ ರಕ್ಷಣೆ ಆದೇಶವೂ ನವೆಂಬರ್​ 12ರಂದು ಕೊನೆಗೊಳ್ಳಲಿದೆ ಎಂದು ವಕೀಲ ವಿಷ್ಣು ಶಂಕರ್ ಜೈನ್ ವಾದ ಮಂಡಿಸಿದ್ದರು. ಈ ಅರ್ಜಿ ಆಲಿಸಿದ ನ್ಯಾಯಾಲಯ ನಾಳೆ ಮಧ್ಯಾಹ್ನ 3ಗಂಟೆಯೊಳಗೆ ಪೀಠ ರಚಿಸುವುದಾಗಿ ತಿಳಿಸಿದೆ. ಜ್ಞಾನವಾಪಿ ಆವರಣದೊಳಗಿನ ಪ್ರದೇಶವನ್ನು ಸಂರಕ್ಷಿಸುವಂತೆ ಮೇ 17 ರಂದು ಸುಪ್ರೀಂ ಕೋರ್ಟ್ ಮಧ್ಯಂತರ ಆದೇಶ ನೀಡಿತ್ತು.

ಇದನ್ನೂ ಓದಿ: ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಪ್ರಕರಣ: ವಜು ಖಾನಾ ಬಗ್ಗೆ ಇಂದು ತೀರ್ಪು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.