ETV Bharat / bharat

ಡೇಟಾ ಗ್ರಿಡ್​​ಗೆ ಕನೆಕ್ಟ್​ ಆದ ಸುಪ್ರೀಂ ಕೋರ್ಟ್​; ಆನ್ಲೈನ್​ನಲ್ಲಿಯೇ ಪ್ರಕರಣಗಳ ಮಾಹಿತಿ ಲಭ್ಯ - ಎನ್​ಜೆಡಿಜೆ ಇದು ವಿಶಿಷ್ಟ ಮತ್ತು ಮಾಹಿತಿಯುಕ್ತ

ಸುಪ್ರೀಂ ಕೋರ್ಟ್​ ಅನ್ನು ಇನ್ನು ಮುಂದೆ ರಾಷ್ಟ್ರೀಯ ನ್ಯಾಯಾಂಗ ದತ್ತಾಂಶ ಗ್ರಿಡ್ ಗೆ ಸಂಪರ್ಕಿಸಲಾಗುವುದು ಎಂದು ಸಿಜೆಐ ಡಿ.ವೈ. ಚಂದ್ರಚೂಡ್ ಗುರುವಾರ ತಿಳಿಸಿದರು.

National Judicial Data Grid
National Judicial Data Grid
author img

By PTI

Published : Sep 14, 2023, 2:14 PM IST

ನವದೆಹಲಿ : ಸುಪ್ರೀಂ ಕೋರ್ಟ್ ಅನ್ನು ರಾಷ್ಟ್ರೀಯ ನ್ಯಾಯಾಂಗ ದತ್ತಾಂಶ ಗ್ರಿಡ್ (National Judicial Data Grid -NJDG) ಗೆ ಶೀಘ್ರದಲ್ಲೇ ಸಂಪರ್ಕಿಸಲಾಗುವುದು ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಗುರುವಾರ ಪ್ರಕಟಿಸಿದ್ದಾರೆ. ಎನ್​ಜೆಡಿಜಿ ಇದು ತಾಲೂಕು ಮಟ್ಟದಿಂದ ರಾಷ್ಟ್ರಮಟ್ಟದವರೆಗಿನ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳು ಮತ್ತು ವಿಲೇವಾರಿಗಳಿಗೆ ಸಂಬಂಧಿಸಿದ ದತ್ತಾಂಶಗಳ ಭಂಡಾರವಾಗಿದೆ.

ಸಿಜೆಐ ಚಂದ್ರಚೂಡ್ ಇಂದು ಸುಪ್ರೀಂ ಕೋರ್ಟ್​ನಲ್ಲಿ ದಿನದ ವಿಚಾರಣೆಯನ್ನು ಪ್ರಾರಂಭಿಸುವ ಮುನ್ನ, ಸುಪ್ರೀಂ ಕೋರ್ಟ್​ನ ಡೇಟಾವನ್ನು ನೈಜ ಸಮಯದ ಆಧಾರದ ಮೇಲೆ ಎನ್​ಜೆಡಿಜಿಯಲ್ಲಿ ಅಪ್ಲೋಡ್ ಮಾಡಲಾಗುವುದು ಎಂದು ಅವರು ಹೇಳಿದರು. ಪ್ರಸ್ತುತ ಎನ್​ಜೆಡಿಜಿ ಪೋರ್ಟಲ್ ಹೈಕೋರ್ಟ್ ಮಟ್ಟದವರೆಗಿನ ಡೇಟಾವನ್ನು ಮಾತ್ರ ತೋರಿಸುತ್ತದೆ.

"ಒಂದು ಸಣ್ಣ ಘೋಷಣೆ ಮಾಡುತ್ತಿದ್ದೇನೆ. ಇದೊಂದು ಐತಿಹಾಸಿಕ ದಿನವಾಗಿದೆ. ಎನ್​ಜೆಡಿಜಿ ಇದು ವಿಶಿಷ್ಟ ಮತ್ತು ಮಾಹಿತಿಯುಕ್ತ ವೇದಿಕೆಯಾಗಿದ್ದು, ಇದನ್ನು ಎನ್ಐಸಿ ಮತ್ತು ಸುಪ್ರೀಂ ಕೋರ್ಟ್​​ನ ಆಂತರಿಕ ತಂಡವು ಅಭಿವೃದ್ಧಿಪಡಿಸಿದೆ. ಈಗ ಒಂದು ಬಟನ್ ಕ್ಲಿಕ್ ಮಾಡುವ ಮೂಲಕ ನೀವು ವರ್ಷವಾರು, ನೋಂದಾಯಿತ ಮತ್ತು ನೋಂದಾಯಿಸದ ಪ್ರಕರಣಗಳ ಒಟ್ಟು ಬಾಕಿ, ಕೋರಂ ಪ್ರಕಾರ ನಿರ್ಧರಿಸಿದ ಪ್ರಕರಣಗಳ ಸಂಖ್ಯೆಯ ಬಗ್ಗೆ ನೈಜ ಸಮಯದ ಮಾಹಿತಿಯನ್ನು ನೋಡಬಹುದು" ಎಂದು ಸಿಜೆಐ ಹೇಳಿದರು. ಎನ್​ಜೆಡಿಜಿಯಲ್ಲಿ ಡೇಟಾ ಅಪ್ಲೋಡ್ ಮಾಡುವುದರಿಂದ ನ್ಯಾಯಾಂಗ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ಉತ್ತರದಾಯಿತ್ವವನ್ನು ಖಚಿತಪಡಿಸುತ್ತದೆ ಎಂದು ಸಿಜೆಐ ಹೇಳಿದ್ದಾರೆ.

ಎನ್​ಜೆಡಿಜಿ ಇದು 18,735 ಜಿಲ್ಲಾ ಮತ್ತು ಅಧೀನ ನ್ಯಾಯಾಲಯಗಳು ಮತ್ತು ಹೈಕೋರ್ಟ್​ಗಳ ಆದೇಶಗಳು, ತೀರ್ಪುಗಳು ಮತ್ತು ಪ್ರಕರಣಗಳ ವಿವರದ ಡೇಟಾಬೇಸ್ ಆಗಿದೆ. ಇಕೋರ್ಟ್ಸ್ ಯೋಜನೆಯಡಿ ಆನ್ಲೈನ್ ವೇದಿಕೆಯಾಗಿ ಇದನ್ನು ನಿರ್ಮಿಸಲಾಗಿದೆ. ಸಂಪರ್ಕಿತ ಜಿಲ್ಲಾ ಮತ್ತು ತಾಲ್ಲೂಕು ನ್ಯಾಯಾಲಯಗಳು ನೈಜ ಸಮಯದ ಆಧಾರದ ಮೇಲೆ ತಮ್ಮ ಡೇಟಾವನ್ನು ಇದರಲ್ಲಿ ಅಪ್ಡೇಟ್ ಮಾಡುತ್ತವೆ.

ಇದು ದೇಶದ ಎಲ್ಲಾ ಗಣಕೀಕೃತ ಜಿಲ್ಲಾ ಮತ್ತು ಅಧೀನ ನ್ಯಾಯಾಲಯಗಳ ನ್ಯಾಯಾಂಗ ಪ್ರಕ್ರಿಯೆಗಳು ಮತ್ತು ನಿರ್ಧಾರಗಳಿಗೆ ಸಂಬಂಧಿಸಿದ ಡೇಟಾವನ್ನು ಒದಗಿಸುತ್ತದೆ. ಎಲ್ಲಾ ಹೈಕೋರ್ಟ್​ಗಳು ವೆಬ್ ಸೇವೆಗಳ ಮೂಲಕ ಎನ್​ಜೆಡಿಜೆಗೆ ಸೇರಿಕೊಂಡಿವೆ. ಕಕ್ಷಿದಾರ ಸಾರ್ವಜನಿಕರು ಕೂಡ ತಮಗೆ ಬೇಕಾದ ನ್ಯಾಯಾಲಯದ ಸಂಬಂಧಿತ ಮಾಹಿತಿಯನ್ನು ಸುಲಭವಾಗಿ ನೋಡಬಹುದಾಗಿದೆ.

ರಾಷ್ಟ್ರೀಯ ನ್ಯಾಯಾಂಗ ದತ್ತಾಂಶ ಗ್ರಿಡ್ ಇ-ಕೋರ್ಟ್ಸ್ ಇಂಟಿಗ್ರೇಟೆಡ್ ಮಿಷನ್ ಮೋಡ್ ಯೋಜನೆಯ ಒಂದು ಭಾಗವಾಗಿದೆ. ಬಾಕಿ ಇರುವ ಪ್ರಕರಣಗಳನ್ನು ಗುರುತಿಸಲು, ನಿರ್ವಹಿಸಲು ಮತ್ತು ಕಡಿಮೆ ಮಾಡಲು ಎನ್​ಜೆಡಿಜಿ ಮೇಲ್ವಿಚಾರಣಾ ಸಾಧನವಾಗಿ ಕಾರ್ಯನಿರ್ವಹಿಸುತ್ತದೆ. ವ್ಯವಸ್ಥೆಯಲ್ಲಿ ವಿಳಂಬ ಮತ್ತು ಬಾಕಿ ಪ್ರಕರಣಗಳ ಸಂಖ್ಯೆಯನ್ನು ಕಡಿಮೆ ಮಾಡಲು ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಇದು ಸಹಾಯ ಮಾಡುತ್ತದೆ. ನ್ಯಾಯಾಲಯದ ಕಾರ್ಯಕ್ಷಮತೆ ಮತ್ತು ಮೇಲ್ವಿಚಾರಣೆಯನ್ನು ಸುಗಮಗೊಳಿಸುತ್ತದೆ.

ಇದನ್ನೂ ಓದಿ : ಹುತಾತ್ಮ ಮಗನಿಗೆ ತಂದೆಯ ವೀರನಮನ; ಮೆಚ್ಚುಗೆಗೆ ಪಾತ್ರವಾದ ನಿವೃತ್ತ ಐಜಿಪಿಯ ದೃಢತೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.