ತಿರುಪತಿ (ಆಂಧ್ರ ಪ್ರದೇಶ): ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಉದಯ್ ಉಮೇಶ್ ಲಲಿತ್ ಅವರು ಇಂದು ಆಂಧ್ರ ಪ್ರದೇಶದ ಸುಪ್ರಸಿದ್ಧ ತಿರುಪತಿ ತಿರುಮಲದ ದೇವಸ್ಥಾನಕ್ಕೆ ಭೇಟಿ ನೀಡಿದರು. ದಂಪತಿ ಸಮೇತವಾಗಿ ಸಿಜೆಐ ಅವರು ಶ್ರೀವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದರು.
ತಿರುಮಲಕ್ಕೆ ಆಗಮಿಸಿದ ಸಿಜೆಐ ಉದಯ್ ಉಮೇಶ್ ಲಲಿತ್ ದಂಪತಿಯನ್ನು ಟಿಟಿಡಿ ಅಧ್ಯಕ್ಷ ಸುಬ್ಬಾರೆಡ್ಡಿ ಹಾಗೂ ಇಒ ಧರ್ಮರೆಡ್ಡಿ ಸ್ವಾಗತಿಸಿದರು. ಶ್ರೀಗಳ ದರ್ಶನದ ನಂತರ ವೇದ ವಿದ್ವಾಂಸರು ವೇದಾಶೀರ್ವಾದ ನೀಡಿದರು. ಸ್ವಾಮಿ ತಮ್ಮ ತೀರ್ಥಪ್ರಸಾದ ಹಾಗೂ ಚಿತ್ರಪ್ರದಾನ ಮಾಡಿದರು. ಬಳಿಕ ಸಿಜೆಐ ದಂಪತಿ ಹನುಮಂತ ವಾಹನ ಸೇವೆಯಲ್ಲಿ ಪಾಲ್ಗೊಂಡರು.
ಅಲ್ಲದೇ, ತಿರುಮಲದ ದೇವಸ್ಥಾನದ ಆವರಣದಲ್ಲಿ ನಡೆಯುತ್ತಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಸಿಜೆಐ ದಂಪತಿ ವೀಕ್ಷಿಸಿದರು. ಇದೇ ವೇಳೆ ಮಹಿಳಾ ಕಲಾವಿದರೊಂದಿಗೆ ಸಿಜೆಐ ಉದಯ್ ಉಮೇಶ್ ಲಲಿತ್ ಅವರ ಪತ್ನಿ ಹೆಜ್ಜೆ ಹಾಕಿ ಗಮನ ಸೆಳೆದರು.
ಇದನ್ನೂ ಓದಿ: ಗಾಂಧೀಜಿ, ಶಾಸ್ತ್ರೀಜಿ ಜಯಂತಿ: ಪ್ರಧಾನಿ ಮೋದಿ, ಸೋನಿಯಾ, ರಾಷ್ಟ್ರಪತಿಯಿಂದ ಪುಷ್ಪ ನಮನ