ETV Bharat / bharat

ಖಲಿಸ್ತಾನಿಗಳಿಗೆ ಆಶ್ರಯ; ಬೆಂಕಿಯೊಂದಿಗೆ ಸರಸವಾಡುತ್ತಿದೆ ಕೆನಡಾ

ಖಲಿಸ್ತಾನಿ ಉಗ್ರಗಾಮಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಪ್ರಕರಣದಲ್ಲಿ ಭಾರತದ ವಿರುದ್ಧ ಆರೋಪ ಮಾಡಿರುವ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಬೆಂಕಿಯೊಂದಿಗೆ ಸರಸವಾಡುತ್ತಿದ್ದಾರೆ. ಈ ಬಗ್ಗೆ ವಿವರವಾದ ಅಂಕಣ ಇಲ್ಲಿದೆ.

Canada is playing with fire
Canada is playing with fire
author img

By ETV Bharat Karnataka Team

Published : Sep 25, 2023, 5:16 PM IST

ಖಲಿಸ್ತಾನ್ ಟೈಗರ್ ಫೋರ್ಸ್ ನಾಯಕ ಮತ್ತು ಕುಖ್ಯಾತ ಉಗ್ರಗಾಮಿ ಹರ್ದೀಪ್ ಸಿಂಗ್ ಅವರನ್ನು ಜೂನ್ 18 ರಂದು ಕೆನಡಾದಲ್ಲಿ ಹತ್ಯೆ ಮಾಡಲಾಗಿತ್ತು. ಅದಾದ ನಂತರ ಆಗಸ್ಟ್ 12 ರಂದು ಖಲಿಸ್ತಾನಿಗಳು ಕೆನಡಾದ ಬ್ರಿಟಿಷ್ ಕೊಲಂಬಿಯಾದಲ್ಲಿರುವ ಪ್ರಮುಖ ಲಕ್ಷ್ಮಿ ನಾರಾಯಣ ದೇವಾಲಯದ ಮೇಲೆ ದಾಳಿ ನಡೆಸಿದ್ದರು. ಹರ್ದೀಪ್ ಹತ್ಯೆಗೆ ಭಾರತವೇ ಕಾರಣ ಎಂದು ಆರೋಪಿಸಿ ಅವರು ದೇವಾಲಯದ ಮೇಲೆ ದಾಳಿ ಮಾಡಿದ್ದರು. ಈ ಸಂದೇಶ ಸಾರುವ ಪೋಸ್ಟರ್​​ಗಳನ್ನು ದೇವಾಲಯದ ಗೋಡೆಗೆ ಅಂಟಿಸಿ ಖಲಿಸ್ತಾನಿಗಳು ದೇವಾಲಯವನ್ನು ವಿರೂಪಗೊಳಿಸಿದ್ದರು.

ಈ ತಿಂಗಳ 18 ರಂದು, ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೋ ಅವರು ಸಂಸತ್ತಿನಲ್ಲಿ ಮಾತನಾಡುತ್ತಾ, ತಮ್ಮ ದೇಶದ ಪ್ರಜೆ ನಿಜ್ಜರ್ ಅವರ ಹತ್ಯೆಯ ಹಿಂದೆ ಭಾರತೀಯ ಸರ್ಕಾರಿ ಏಜೆಂಟರು ಇರಬಹುದು ಎಂಬ ವಿಶ್ವಾಸಾರ್ಹ ಮಾಹಿತಿಗಳಿವೆ ಎಂದು ಹೇಳಿಕೆ ನೀಡಿದರು. ಭಾರತದ ವಿರುದ್ಧ ದ್ವೇಷ ಉಗುಳುತ್ತಿರುವ ಖಲಿಸ್ತಾನಿಗಳ ಹೇಳಿಕೆಗಳನ್ನು ಅವರು ಈ ಸಂದರ್ಭದಲ್ಲಿ ಬೆಂಬಲಿಸಿದರು. ಹರ್ದೀಪ್ ಸಿಂಗ್ ನಿಜ್ಜರ್ ಒಂದು ಡಜನ್ ಗೂ ಹೆಚ್ಚು ಕೊಲೆ ಮತ್ತು ಭಯೋತ್ಪಾದಕ ಪ್ರಕರಣಗಳಲ್ಲಿ ವಾಂಟೆಡ್ ಟೆರ್​ರಿಸ್ಟ್ ಆಗಿದ್ದ. ನಕಲಿ ಪಾಸ್​ಪೋರ್ಟ್​ ಮೇಲೆ ಕೆನಡಾಕ್ಕೆ ತೆರಳಿದ್ದ ಈತ 2014ರಿಂದ ಇಂಟರ್​ಪೋಲ್​ನ ರೆಡ್ ನೋಟಿಸ್​ನಲ್ಲಿದ್ದಾನೆ. ಹರ್ದೀಪ್ ಸಿಂಗ್ ಈತನ ಮೇಲಿರುವ ಎಲ್ಲ ಆರೋಪಗಳ ಸಂಪೂರ್ಣ ವಿವರಗಳನ್ನು ಭಾರತ ಕೆನಡಾಕ್ಕೆ ನೀಡಿದ್ದು, ಆತನನ್ನು ಬಂಧಿಸುವಂತೆ ಕೋರಲಾಗಿತ್ತು.

ಆದರೆ ಹರ್ದೀಪ್ ಸಿಂಗ್​ನನ್ನು ಬಂಧಿಸಲು ಕೆನಡಾದ ಅಧಿಕಾರಿಗಳು ಯಾವುದೇ ಆಸಕ್ತಿ ತೋರಲಿಲ್ಲ. ಅಷ್ಟೇ ಅಲ್ಲದೆ ಆತನಿಗೆ ತಮ್ಮ ಕೆನಡಾದ ಪೌರತ್ವವನ್ನು ಕೂಡ ನೀಡಲಾಯಿತು. ಭಯೋತ್ಪಾದಕನೊಬ್ಬನ್ನು ತನ್ನ ಪ್ರಜೆಯಾಗಿ ಮಾಡಿಕೊಳ್ಳುವುದು ನಾಚಿಕೆಗೇಡಿನ ಸಂಗತಿ ಒಂದು ಕಡೆಯಾದರೆ, ಭಾರತದ ವಿರುದ್ಧ ಆರೋಪ ಹೊರಿಸುವ ಮೂಲಕ ಮತ್ತೊಂದೆಡೆ ಟ್ರುಡೊ ತಮ್ಮ ಮೂರ್ಖತನದ ಪರಮಾವಧಿಯನ್ನು ಜಗತ್ತಿಗೆ ಸಾರಿದ್ದಾರೆ.

ಕೆನಡಾದ ಪ್ರಧಾನಿ ಆಧಾರರಹಿತ ಆರೋಪಗಳನ್ನು ಮಾಡುವ ಮೂಲಕ ಬಹಳ ದೊಡ್ಡ ಮತ್ತು ಸರಿಪಡಿಸಲಾಗದ ತಪ್ಪು ಮಾಡಿದ್ದಾರೆ ಎಂದು ಅಮೆರಿಕದ ಮಾಜಿ ರಕ್ಷಣಾ ಅಧಿಕಾರಿ ಮೈಕೆಲ್ ರೂಬಿನ್ ಇತ್ತೀಚೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಸ್ಟಿನ್ ಟ್ರುಡೊ ಅವರು ತಮ್ಮ ಅಲ್ಪಮತದ ಸರ್ಕಾರದಲ್ಲಿ ಅಧಿಕಾರದ ಹಿಡಿತವನ್ನು ಹೊಂದಿರುವ ರಾಷ್ಟ್ರೀಯ ಡೆಮಾಕ್ರಟಿಕ್ ಪಕ್ಷದ ನಾಯಕ ಜಗ್ಮೀತ್ ಸಿಂಗ್ ಅವರ ಬೆಂಬಲದೊಂದಿಗೆ ಸಿಖ್ ಸಮುದಾಯದ ಮತಗಳನ್ನು ಸೆಳೆಯಲು ಪ್ರಯತ್ನಿಸುತ್ತಿದ್ದಾರೆ. ಆದರೆ ಈ ಪ್ರಯತ್ನದ ಭಾಗವಾಗಿ ತಮ್ಮ ಅನಗತ್ಯ ಹೇಳಿಕೆಗಳ ಮೂಲಕ ಟ್ರುಡೊ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

ಭಾರತದ ರಾಷ್ಟ್ರೀಯ ಭದ್ರತೆಗೆ ಗಂಭೀರ ಬೆದರಿಕೆಯೊಡ್ಡುವ ಉಗ್ರಗಾಮಿ ಗುಂಪುಗಳಿಗೆ ಕೆನಡಾ ಆಶ್ರಯ ತಾಣವಾಗಿರುವುದು ಈಗ ರಹಸ್ಯವೇನಲ್ಲ. ಸ್ವಯಂ ಘೋಷಿತ 'ಖಲಿಸ್ತಾನ್ ಕೌನ್ಸಿಲರ್ ಜನರಲ್' ಸುರ್ಜನ್ ಸಿಂಗ್ ಗಿಲ್ 1982 ರಲ್ಲಿ ಕೆನಡಾದ ವ್ಯಾಂಕೋವರ್​ನಲ್ಲಿ ಪರ್ಯಾಯ ಸರ್ಕಾರವನ್ನೇ ಘೋಷಿಸಿದ್ದ. ಈತ ಖಲಿಸ್ತಾನಿ ಪಾಸ್​ಪೋರ್ಟ್​ಗಳನ್ನು ನೀಡುವ ಮಟ್ಟಕ್ಕೂ ಹೋಗಿದ್ದ. ಪಂಜಾಬ್​ನಲ್ಲಿ ಇಬ್ಬರು ಪೊಲೀಸರನ್ನು ಕೊಂದು ಕೆನಡಾಕ್ಕೆ ಪರಾರಿಯಾಗಿದ್ದ ತಲ್ವಿಂದರ್ ಸಿಂಗ್ ಪರ್ಮಾರ್ ಅವನನ್ನು ಭಾರತಕ್ಕೆ ಹಸ್ತಾಂತರಿಸಲು ಅಂದಿನ ಕೆನಡಾದ ಪ್ರಧಾನಿ ಪಿಯರೆ ಎಲಿಯಟ್ ಟ್ರುಡೋ (ಇಂದಿನ ಪ್ರಧಾನಿ ಜಸ್ಟಿನ್ ಅವರ ತಂದೆ) ನಿರಾಕರಿಸಿದ್ದರು.

1985ರಲ್ಲಿ ಏರ್ ಇಂಡಿಯಾದ 'ಕನಿಷ್ಕಾ' ವಿಮಾನವನ್ನು ಸ್ಫೋಟಿಸಿದ ಖಲಿಸ್ತಾನಿಗಳು ಮುನ್ನೂರಕ್ಕೂ ಹೆಚ್ಚು ಜೀವಗಳನ್ನು ಬಲಿಪಡೆದಿದ್ದರು. ಘೋರ ಭಯೋತ್ಪಾದಕ ಕೃತ್ಯಕ್ಕೆ ಸಂಬಂಧಿಸಿದ ವ್ಯಕ್ತಿಗಳಿಗೆ ಆಶ್ರಯ ನೀಡುವ ಕೆನಡಾದ ನಿರ್ಧಾರಗಳು ದೀರ್ಘಕಾಲದ ರಾಜತಾಂತ್ರಿಕ ಬಿಕ್ಕಟ್ಟು ಸೃಷ್ಟಿಸಿವೆ. ಭಾರತದ ವಿಮಾನದ ಮೇಲೆ ಭಯೋತ್ಪಾದಕ ದಾಳಿ ನಡೆಯುವ ಬಗ್ಗೆ ಕೆನಡಾದ ಗುಪ್ತಚರ ಸಂಸ್ಥೆಗಳಿಗೆ ಮೊದಲೇ ಮಾಹಿತಿ ಸಿಕ್ಕರೂ ಅವು ಅದನ್ನು ನಿರ್ಲಕ್ಷಿಸಿದ್ದವು ಎಂಬ ವಿಚಾರ ನಂತರ ಬೆಳಕಿಗೆ ಬಂದಿತು.

ಪ್ರಸ್ತುತ ಕೆನಡಾದಲ್ಲಿ ಕನಿಷ್ಠ ಒಂಬತ್ತು ಭಾರತ ದ್ವೇಷಿ ಪ್ರತ್ಯೇಕತಾವಾದಿ ಗುಂಪುಗಳು ಮುಕ್ತವಾಗಿ ಕೆಲಸ ಮಾಡುತ್ತಿವೆ. 2018 ರಲ್ಲಿ ಜಸ್ಟಿನ್ ಟ್ರುಡೋ ಭಾರತಕ್ಕೆ ಭೇಟಿ ನೀಡಿದಾಗ, ಆಗಿನ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರನ್ನು ಅಮೃತಸರದಲ್ಲಿ ಭೇಟಿಯಾಗಿದ್ದರು. ಕೆನಡಾದಲ್ಲಿ ಅಡಗಿರುವ ಒಂಬತ್ತು ಎ-ವರ್ಗದ ಭಯೋತ್ಪಾದಕರ ಪಟ್ಟಿಯನ್ನು ಆಗ ಟ್ರುಡೊ ಅವರಿಗೆ ನೀಡಿ, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿತ್ತು. ಕೆನಡಾ ಸರ್ಕಾರವು ಈ ಯಾವುದೇ ಮನವಿಗಳಿಗೆ ಸ್ಪಂದಿಸಿಲ್ಲ. ಇತ್ತೀಚೆಗೆ ಜಿ 20 ಶೃಂಗಸಭೆಯಲ್ಲಿ ಜಸ್ಟಿನ್ ಟ್ರುಡೊ ಅವರನ್ನು ಭೇಟಿಯಾದ ಪ್ರಧಾನಿ ಮೋದಿ, ಕೆನಡಾ ಭಾರತ ವಿರೋಧಿ ಶಕ್ತಿಗಳಿಗೆ ನೆಲೆಯಾಗುತ್ತಿರುವುದು ಭವಿಷ್ಯದಲ್ಲಿ ಆ ದೇಶಕ್ಕೆ ಸ್ವಯಂ ವಿನಾಶಕಾರಿಯಾಗಲಿದೆ ಎಂದು ಎಚ್ಚರಿಸಿದ್ದಾರೆ. ಮೋದಿಯವರು ಇತ್ತೀಚೆಗೆ ಹೇಳಿದಂತೆ ಭಯೋತ್ಪಾದನೆ ನಿಗ್ರಹಕ್ಕಾಗಿ ಅಂತರರಾಷ್ಟ್ರೀಯ ಕಾನೂನು ನಿಬಂಧನೆಗಳನ್ನು ರೂಪಿಸುವುದು ಅತ್ಯಗತ್ಯವಾಗಿದೆ.

ಜಾಗತಿಕ ಭದ್ರತೆಯನ್ನು ಕಾಪಾಡಿಕೊಳ್ಳಲು ಅಂತರರಾಷ್ಟ್ರೀಯ ಸಹಕಾರ ಮತ್ತು ಪ್ರಯತ್ನಗಳು ಅನಿವಾರ್ಯವಾಗಿವೆ. ಆಗ ಮಾತ್ರ ಗಡಿಯುದ್ದಕ್ಕೂ ರಕ್ತ ಚೆಲ್ಲುತ್ತಿರುವ ಭಯೋತ್ಪಾದನೆಯ ರಾಕ್ಷಸನನ್ನು ಮಟ್ಟಹಾಕಲು ಸಾಧ್ಯ!

(ಈನಾಡು ದಲ್ಲಿ ಪ್ರಕಟವಾದ ಸಂಪಾದಕೀಯದ ಭಾವಾನುವಾದ)

ಇದನ್ನೂ ಓದಿ : ನಿಜ್ಜರ್​ ಹತ್ಯೆಯ ಕುರಿತು ಅಮೆರಿಕ ಗುಪ್ತಚರ ಸಂಸ್ಥೆಗಳಿಂದ ಕೆನಡಾಕ್ಕೆ ಮಾಹಿತಿ: ವರದಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.