ETV Bharat / bharat

Poison Man: ಹಾವು, ಚೇಳು, ವಿಷಕಾರಿ ಹುಳು ಕಚ್ಚಿದರೆ ಬಾಯಿಂದ ವಿಷ ತೆಗೆಯುವ ವ್ಯಕ್ತಿ! - ಬಾಯಿಂದ ವಿಷ ತೆಗೆಯುವ ವ್ಯಕ್ತಿ

ವಿಷ್ಣು ಪ್ರಸಾದ್​​ ನರ್ವಾಲೆ ಕಳೆದ 20 ವರ್ಷಗಳಿಂದ ಈ ಕಾಯಕ ಮಾಡುತ್ತಿದ್ದು, ದೇವರ ಮೇಲೆ ನಂಬಿಕೆ ಇಟ್ಟು ತಾವು ಕೆಲಸ ಮಾಡುತ್ತಿರುವುದಾಗಿ ಈಟಿವಿ ಭಾರತ್​ಗೆ ತಿಳಿಸಿದ್ದಾರೆ.

Poison Man of MP
Poison Man of MP
author img

By

Published : May 23, 2022, 9:07 PM IST

Updated : May 23, 2022, 9:52 PM IST

ಉಜ್ಜೈನಿ(ಮಧ್ಯಪ್ರದೇಶ): ವಿಷಕಾರಿ ಹಾವು, ಚೇಳು ಕಚ್ಚಿದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುವುದು ಸರ್ವೆ ಸಾಮಾನ್ಯ. ಆದರೆ, ಮಧ್ಯಪ್ರದೇಶದ ಉಜ್ಜೈನಿಯ ನೀಲಗಂಗಾದಲ್ಲಿ ಜನರು ಓರ್ವ ವ್ಯಕ್ತಿಯ ಬಳಿ ಕರೆದುಕೊಂಡು ಬರುತ್ತಾರೆ. ಕೆಲವೇ ಸೆಕೆಂಡ್​​​ಗಳಲ್ಲಿ ವಿಷ ಹೊರತೆಗೆಯುವ ಇವರು, ಅನೇಕರಿಗೆ ಪುನರ್ಜನ್ಮ ನೀಡುತ್ತಿದ್ದಾರೆ. ಸುಮಾರು 75 ವರ್ಷಗಳಿಂದಲೂ ಈ ಕಾಯಕ ಮಾಡಿಕೊಂಡು ಬರುತ್ತಿರುವ ಇವರ ಕುಟುಂಬ ನೀಲಗಂಗಾ ಪ್ರದೇಶದಲ್ಲಿ ವಾಸವಾಗಿದ್ದು, ಸದ್ಯ ವಿಷ್ಣು ನರ್ವಾಲೆ ಎಂಬುವವರು ವಿಷಕಾರಿ ಅಂಶ ಹೊರತೆಗೆಯುವ ಕೆಲಸ ಮಾಡ್ತಿದ್ದಾರೆ.

ಕೆಲವೇ ಸೆಕೆಂಡ್​ಗಳಲ್ಲಿ ವಿಷ ಹೊರಕ್ಕೆ: ಹಾವು, ಚೇಳು, ನಾಯಿ ಸೇರಿದಂತೆ ಯಾವುದೇ ವಿಷಯಕಾರಿ ಹುಳು ಕಚ್ಚಿದರೂ, ಕೆಲವೇ ಸೆಕೆಂಡ್​​​ಗಳಲ್ಲಿ ಬಾಯಿಂದ ವಿಷ ಹೊರತೆಗೆಯುತ್ತಾರೆ. ಹೀಗಾಗಿ, ನಿತ್ಯ ಅನೇಕರು ಇವರ ಬಳಿ ಬರುತ್ತಾರೆ. ತಲೆಮಾರುಗಳಿಂದಲೂ ಈ ಕಾಯಕ ಮಾಡಿಕೊಂಡು ಬರುತ್ತಿರುವ ಕುಟುಂಬ, ವಿಷಕಾರಿ ಜಂತು ಕಚ್ಚಿರುವ ಜಾಗದಲ್ಲಿ ಬ್ಲೇಡ್​​ನಿಂದ ಕತ್ತರಿಸಿ, ಸ್ವಲ್ಪ ಮಟ್ಟದ ಗಾಯ ಮಾಡುತ್ತಾರೆ. ತದನಂತರ ಬಾಯಿಂದ ವಿಷ ಹೊರತೆಗೆಯಲಾಗುತ್ತದೆ. ಪ್ರತಿದಿನ ಈ ಕೆಲಸ ಮಾಡುವುದಕ್ಕೂ ಮುಂಚಿತವಾಗಿ 30 ನಿಮಿಷಗಳ ಕಾಲ ಕುಟುಂಬದ ಸದಸ್ಯರು ಪೂಜೆ ಮಾಡುತ್ತಾರೆ.

ವಿಷಕಾರಿ ಹುಳು ಕಚ್ಚಿದರೆ ಬಾಯಿಂದ ವಿಷ ತೆಗೆಯುವ ವ್ಯಕ್ತಿ

ತದನಂತರ ಗಾಂಜಾ ಸೇವನೆ ಮಾಡಿ, ವಿಷ ಹೊರತೆಗೆಯುವ ಕೆಲಸ ಮಾಡುತ್ತಾರೆ. ವಿಷ್ಣು ಪ್ರಸಾದ್​​ ನರ್ವಾಲೆ ಕಳೆದ 20 ವರ್ಷಗಳಿಂದ ಈ ಕಾಯಕ ಮಾಡುತ್ತಿದ್ದು, ಇದಕ್ಕೂ ಮುಂಚೆ ಇವರ ತಂದೆ ಈ ಕೆಲಸ ಮಾಡುತ್ತಿದ್ದರು. ಈ ಕುಟುಂಬದ ಸದಸ್ಯರಿಗೆ ಯಾವುದೇ ರೀತಿಯ ತೊಂದರೆ ಕಾಣಿಸಿಕೊಂಡಿಲ್ವಂತೆ. ದೇವರ ಮೇಲೆ ನಂಬಿಕೆ ಇಟ್ಟು ತಾವು ಈ ಸೇವೆ ಮಾಡುವುದಾಗಿ ವಿಷ್ಣು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: 'IPLನಲ್ಲಿ ಸೇಲ್​​​ ಆಗಿದ್ರೆ ಕೇವಲ ಬೆಂಚ್​​ ಕಾಯುತ್ತಿದೆ'.. ಎಡವಿದ ಬಳಿಕ ಬುದ್ಧಿ ಬಂತು ಎಂದ ಪೂಜಾರ!

ವಿಷ ಹೊರ ತೆಗೆಯಲು 100 ರೂ ಶುಲ್ಕ: ಹಾವು, ಚೇಳು ಕಚ್ಚಿಸಿಕೊಂಡು ಇಲ್ಲಿಗೆ ಬರುವವರ ಬಳಿ ಶುಲ್ಕದ ರೂಪದಲ್ಲಿ 100 ರೂಪಾಯಿ ಪಡೆದುಕೊಳ್ಳಲಾಗುತ್ತದೆ. ಕೇವಲ ಮಧ್ಯಪ್ರದೇಶ ಮಾತ್ರವಲ್ಲದೇ ವಿವಿಧ ರಾಜ್ಯಗಳಿಂದ ಸಹ ಇವರ ಬಳಿ ಬಂದು ಚಿಕಿತ್ಸೆ ಪಡೆದುಕೊಳ್ಳುತ್ತಾರೆ. ಈ ಸ್ಥಳಕ್ಕೆ ಈಟಿವಿ ಭಾರತ್ ತಂಡ ತಲುಪಿದಾಗ ಗುಜರಾತ್​ ಸೇರಿದಂತೆ ವಿವಿಧ ರಾಜ್ಯದ 12 ಸದಸ್ಯರು ಆಗಮಿಸಿದ್ದರು. ವೈದ್ಯರಿಗೆ ಈಗಾಗಲೇ ತೋರಿಸಿ ಚಿಕಿತ್ಸೆ ಪಡೆದುಕೊಳ್ಳಲಾಗಿದೆ. ಆದರೆ, ಸಮಾಧಾನ ಆಗದ ಕಾರಣ ಇಲ್ಲಿಗೆ ಬಂದಿದ್ದಾಗಿ ಹೇಳಿಕೊಂಡಿದ್ದಾರೆ.

Poison Man of MP
ಹಾವು, ಚೇಳು ಕಚ್ಚಿದ್ರೆ ಬಾಯಿಂದ ವಿಷ ತೆಗೆಯುವ ವ್ಯಕ್ತಿ

ಬ್ಲೇಡ್​ನಿಂದ ಕತ್ತರಿಸುವುದು ತಪ್ಪು: ಈ ವಿಚಾರವಾಗಿ ಉಜ್ಜೈನಿ ಜಿಲ್ಲಾ ಆಸ್ಪತ್ರೆ ಆರ್​ಎಂಒ ಡಾ. ಜಿತೇಂದ್ರ ಶರ್ಮಾ ಮಾತನಾಡಿ, ಇದೊಂದು ಪವಾಡ ಎಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಯಾವುದೇ ವಿಷಕಾರಿ ಪ್ರಾಣಿ ಕಚ್ಚಿದರೆ, ಅದನ್ನ ಶುದ್ಧ ನೀರಿನಿಂದ ತೊಳೆಯಬೇಕು. ಆ ಜಾಗಕ್ಕೆ ನಂಜು ನಿರೋಧಕ ಔಷಧ ಹಚ್ಚಿದರೆ ಸಾಕು, ಬ್ಲೇಡ್​​ನಿಂದ ಕತ್ತರಿಸುವುದು ತಪ್ಪು ಎಂದಿದ್ದಾರೆ.

Last Updated : May 23, 2022, 9:52 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.